ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿದ್ಯುತ್ ತಂತಿ ತುಳಿದು ವೃದ್ಧ ದಂಪತಿ ಸಾವು

Mainashree
Updated On : 28 May 2014, 12:38 pm

ರಾಮನಗರ: ತೋಟಕ್ಕೆ ಹುಲ್ಲು ತರಲು ತೆರಳಿದ್ದ ವೃದ್ಧ ದಂಪತಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿರುವ ಘಟನೆ ತಾಲೂಕಿನ ರಾಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.  ಬಿಡದಿ ಹೋಬಳಿ ರಾಮನಹಳ್ಳಿ ಗ್ರಾಮದ ಕೃಷ್ಣಪ್ಪ (60) ಹಾಗೂ ಇವರ ಪತ್ನಿ ಗೌರಮ್ಮ (52) ಮೃತ ದಂಪತಿ. ಮಂಗಳವಾರ ಸಂಜೆ ರಾಸುಗಳಿಗೆ ಹುಲ್ಲು ತರಲೆಂದು ತಮ್ಮ ತೋಟಕ್ಕೆ ತೆರಳಿದ್ದರು. ಈ ವೇಳೆ ಮಳೆ, ಗಾಳಿಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದ ಕೃಷ್ಣಪ್ಪ ತುಳಿದಿದ್ದಾರೆ.
ವಿದ್ಯತ್ಸ್ ಸ್ಪರ್ಶಕ್ಕೊಳಗಾಗಿ ಚೀರಾಡುತ್ತಿದ್ದ ಪತಿಯ ರಕ್ಷಣೆಗೆ ಧಾವಿಸಿದ ಗೌರಮ್ಮ ಅವರಿಗೂ ಕೂಡ  ವಿದ್ಯುತ್ ಪ್ರವಹಿಸಿ ಕ್ಷಣ ಮಾತ್ರದಲ್ಲೇ ಸಾವನ್ನಪ್ಪಿದರು. ಇದನ್ನ ಗಮನಿಸಿದ ಸ್ಥಳೀಯರು ಬೆಸ್ಕಾಂಗೆ ದೂರವಾಣಿ ಕರೆ ಮಾಡಿ ವಿದ್ಯುತ್ ಸ್ಥಗಿತಗೊಳಿಸಿದರು.  ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಿಡದಿ ಪೊಲೀಸರು ಮಹಜರು ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement