ಸುಬಿರ್ ಹರಿಸಿಂಗ್ ಬಿಡಿಎ ಆಯುಕ್ತ
ಬೆಂಗಳೂರು: ಬಿಡಿಎ ಆಯುಕ್ತರಾಗಿ ನಿವೃತ್ತ ಐಎಎಸ್ ಅಧಿಕಾರಿ ಸುಬಿರ್ ಹರಿಸಿಂಗ್ ನೇಮಕವಾಗಿದ್ದಾರೆ. ಹರಿಸಿಂಗ್ ಈತನಕ ಬಿಡಿಎ ಅಧ್ಯಕ್ಷರಾಗಿಯೇ ಇದ್ದರಾದರೂ ಅವರು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದರು. ಆದರೆ, ಜ.31ರಂದು ಅವರು ನಿವೃತ್ತಿಯಾಗಿದ್ದರಿಂದ ಸಹಜವಾಗಿಯೇ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಬೇಕಿತ್ತು. ಆದರೆ, ಸರ್ಕಾರ ಇನ್ನೂ ಅದೇ ಹುದ್ದೆಯಲ್ಲಿ ಮುಂದುವರಿಸಲು ಇಚ್ಚಿಸಿದ್ದರಿಂದ ಹರಿಸಿಂಗ್ರನ್ನು ಅಧಿಕಾರಿಯೇತರ ಅಧ್ಯಕ್ಷರನ್ನಾಗಿ ಒಂದು ವರ್ಷದ ಅವಧಿಗೆ ನೇಮಕ ಮಾಡಿ ಆದೇಶ ಹೊರಡಿಸಿದೆ.
ಕವಿಗೋಷ್ಠಿಗೆ ಆಹ್ವಾನ
ಕಾಲೇಜು ವಿದ್ಯಾರ್ಥಿ ಸಮುದಾಯದಿಂದ ಯುವಶಕ್ತಿ ಏನು? ಹೇಗೆ? ಮುಂತಾದ ಸಮಸ್ಯೆ ಮತ್ತು ಪರಿಹಾರ ವಿಷಯಗಳಿಗೆ ಸಂಬಂಧಿಸಿದಂತೆ ಕವಿಗೋಷ್ಠಿ ಏರ್ಪಡಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳ ಸಾಧಕರು ತಮ್ಮ ಹೆಸರು, ಸಾಧನೆ, 2 ಪಾಸ್ಪೋರ್ಟ್ ಸೈಜ್ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ- ಅಧ್ಯಕ್ಷರು, ಗುಡಿಬಂಡೆ ಮಧುಸೂದನ್, ಕರ್ನಾಟಕ ಸಹೃದಯರ ಸೇವಾ ಪ್ರತಿಷ್ಠಾನ, ನಂ.17, 11ನೇ ಅಡ್ಡರಸ್ತೆ, ಮಂಜುನಾಥನಗರ, ಮಾಗಡಿರಸ್ತೆ,ಬೆಂ-23. 9591379349.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.