ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

9ರಂದು ಕೆಪಿಸಿಸಿ ಚುನಾವಣಾ ಸಮಿತಿಯ ಸಭೆ

Parashurama
Updated On : 2 Feb 2013, 10:57 am

ಬೆಂಗಳೂರು: ಪ್ರದೇಶ ಕಾಂಗ್ರೆಸ್‌ನ (ಕೆಪಿಸಿಸಿ) ಮಹತ್ವದ ಚುನಾವಣಾ ಸಮಿತಿ ಸಭೆಯನ್ನು ಫೆ.9ರಂದು ನಡೆಸಲು ನಿರ್ಧರಿಸಲಾಗಿದ್ದು, ಆಕಾಂಕ್ಷಿಗಳಲ್ಲಿ ಆಸೆಯ ಗರಿ ಮೂಡಿಸಿದೆ.
ಆದರೆ ಈ ಸಭೆ ಕೇವಲ ಔಪಚಾರಿಕತೆಗೆ ಸೀಮಿತಗೊಳಿಸುವ ಲಕ್ಷಣವೂ ಕಾಣುತ್ತಿದ್ದು, ಕೆಪಿಸಿಸಿಗೆ ಸಲ್ಲಿಕೆಯಾದ 2100 ಆಕಾಂಕ್ಷಿಗಳ ಅರ್ಜಿ ಪರಿಶೀಲಿಸಿ ಸಭೆ ಮುಕ್ತಾಯಗೊಳಿಸುವ ಸಾಧ್ಯತೆಯೂ ಇದೆ.
ಕೆಪಿಸಿಸಿ ಮೂಲಗಳ ಪ್ರಕಾರ ಸಭೆಯನ್ನು ಔಪಚಾರಿಕತೆಗೆ ಸೀಮಿತಗೊಳಿಸುವುದಕ್ಕೆ ಮುಖ್ಯ ಕಾರಣ ಎಂದರೆ ಚುನಾವಣಾ ಸಮಿತಿ ಸದಸ್ಯರನ್ನು ಇನ್ನೂ ಅಖೈರುಗೊಳಿಸಿಲ್ಲ. ಈ ಸಮಿತಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರೇ ಮುಖ್ಯಸ್ಥರಾಗಿದ್ದು, ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಎಸ್.ಆರ್. ಪಾಟೀಲ್ ನಂತರದ ಮಹತ್ವದ ವ್ಯಕ್ತಿಗಳಾಗಿದ್ದಾರೆ. ಆದಾಗಿಯೂ ರಾಜ್ಯವನ್ನು ಪ್ರತಿನಿಧಿಸುವ ನಾಲ್ವರು ಕೇಂದ್ರ ಸಚಿವರು, ಕೆಪಿಸಿಸಿ ಮಾಜಿ ಅಧ್ಯಕ್ಷರು, ಸಂಸದರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುವ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಧುಸೂದನ ಮಿಸ್ತ್ರಿ, ಎನ್. ಶಾಂತಾರಾಂ ನಾಯಕ್, ಹನುಮಂತರಾವ್ ಅವರಿಗೆ ಕಡ್ಡಾಯ ಆಹ್ವಾನ ನೀಡುವುದರ ಜತೆಗೆ ರಾಜ್ಯ ಕಾಂಗ್ರೆಸ್‌ನಿಂದ ಹಲವರನ್ನು ಈ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಬೇಕಿದೆ.
ಆದರೆ ಇದುವರೆಗೆ ಚುನಾವಣಾ ಸಮಿತಿ ಸದಸ್ಯರ ನೇಮಕ ನಡೆದಿಲ್ಲ. ಹೀಗಾಗಿ 9ರಂದು ನಡೆಯುವ ಸಭೆ ಔಪಚಾರಿಕತೆಗೆ ಸೀಮಿತವಾಗಿದ್ದು, ಅದಾದ ನಂತರ ಮತ್ತೊಂದು ಮುಹೂರ್ತ ನಿಗದಿಯಾಗಲಿದೆ ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯ ಏಕೆ ಅರ್ಜಿ ಸಲ್ಲಿಸಿಲ್ಲ?
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಏಕೆ ಕೆಪಿಸಿಸಿಗೆ ಅರ್ಜಿ ಸಲ್ಲಿಸಿಲ್ಲ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಸಿದ್ದರಾಮಯ್ಯನವರ ವಿರೋಧಿ ಬಣದವರ ಪ್ರಕಾರ, ಅವರಿಗೆ ಕಾಂಗ್ರೆಸ್‌ನ ಈ ಬಗೆಯ ನಿಯಮ ಇಷ್ಟವಾಗುವುದಿಲ್ಲ. ಹೇಗೂ ಟಿಕೆಟ್ ಖಾತರಿ ಇರುವುದರಿಂದ ಅರ್ಜಿ ಸಲ್ಲಿಸಿ 10 ಸಾವಿರ ಏಕೆ ನಷ್ಟ ಮಾಡಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಎರಡು ಕ್ಷೇತ್ರಗಳತ್ತ ನೋಡುತ್ತಿದ್ದಾರೆ. ವರುಣಾ ಕ್ಷೇತ್ರದಲ್ಲಿ ಕಾಪುಸಿ ಅವರಂಥ ಬದ್ಧತೆ ಇಲ್ಲದ ವ್ಯಕ್ತಿಗಳು ಸ್ಪರ್ಧಿಸಿದರೆ ಅವರು ಬೇರೆ ಕ್ಷೇತ್ರದತ್ತ ದೃಷ್ಟಿ ಹರಿಸಬಹುದು ಎಂಬ ಮಾತು ಕೇಳಿ ಬರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments