ಅಲ್ಪಸಂಖ್ಯಾತರ ವಿವಿಗೆ ಕನ್ನಡಕ್ಕೆ ಒತ್ತು ನೀಡಿದ ಕಿಟ್ಟೆಲ್ ಹೆಸರಿಡಿ: ಅಬ್ರಾಹಂ
ಬೆಂಗಳೂರು: ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರೇ?, ಹಾಗಾದಲ್ಲಿ ಅಲ್ಪಸಂಖ್ಯಾತರ ಪಟ್ಟಿಯಲ್ಲಿರುವ ಕ್ರೈಸ್ತರು, ಸಿಖ್ಖರು, ಜೈನರು, ಬುದ್ಧ ಸಣ್ಣ ಅಲ್ಪಸಂಖ್ಯಾತರ ಗುಂಪಿಗೆ ಸೇರಿಕೊಳ್ಳುತ್ತಾರೆಯೇ? ಎಂದು ಸಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಪ್ರಶ್ನಿಸಿದ್ದಾರೆ.
ಕೇಂದ್ರ ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವಾಲಯ ಅಲ್ಪಸಂಖ್ಯಾತರಿಗಾಗಿಯೇ ಮೈಸೂರಿನ ಶ್ರೀರಂಗಪಟ್ಟಣದಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾಗಿರುವುದನ್ನು ನಾವು ಅಭಿನಂದಿಸಬೇಕು. ವಿಶ್ವವಿದ್ಯಾಲಯಕ್ಕೆ ಮುಸ್ಲಿಂ ಹೆಸರಿಡಬೇಕೆಂದು ಟಿಪ್ಪು ಹೆಸರು ಆಯ್ಕೆ ಮಾಡಿದ್ದಾರೆ. ಇಲ್ಲಿ ವಿರೋಧಕ್ಕೆ ಕಾರಣವಾಗಿರುವುದು, ಟಿಪ್ಪು ಪರ್ಷಿಯನ್ ಭಾಷೆಗೆ ಪ್ರಾಮುಖ್ಯ ನೀಡಿದನೇ ಹೊರತು ಕನ್ನಡ ಭಾಷೆಗೆ ನೀಡಲಿಲ್ಲ ಎಂದು. ವಿವಾದ ರಹಿತವಾದ ವ್ಯಕ್ತಿಗಳ ಹೆಸರನ್ನು ನಾವು ವಿವಿಗೆ ಏಕೆ ಇಡಬಾರದು. ಎಲ್ಲಾ ಕ್ರೈಸ್ತರು ಅಲ್ಪಸಂಖ್ಯಾತರೇ?, ನಾವು ವಿವಾದ್ಮಕ ರಹಿತವಾದ ವ್ಯಕ್ತಿಗಳ ಹೆಸರನ್ನು ವಿಶ್ವವಿದ್ಯಾಲಯಕ್ಕೆ ಇಡಬಹುದು. ಕ್ರೈಸ್ತ ಸಮುದಾಯಕ್ಕೆ ಸೇರಿದ ಕಿಟ್ಟಲ್ ಕನ್ನಡಕ್ಕಾಗಿ ಶ್ರಮಿಸಿದ್ದಾನೆ. ಕನ್ನಡದ ಮೊದಲ ನಿಘಂಟು ಹೊರತಂದಿದ್ದಾನೆ ಹೀಗಾಗಿ ಇವರ ಹೆಸರು ಇಡಬಹುದು ಅಲ್ಲವಾ? ಎಂದು ಅಬ್ರಾಹಂ ಪತ್ರಿಕಾ ಪ್ರಕಟಣೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.