ಒಎನ್‌ಜಿಸಿ, ಐಒಬಿ ಫೈನಲ್‌ಗೆ
ಬೆಂಗಳೂರು: ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 27ನೇ ರಾಷ್ಟ್ರೀಯ ಫೆಡರೇಷನ್ ಕಪ್ ಬಾಸ್ಕೆಟ್‌ಬಾಲ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಒಎನ್‌ಜಿಸಿ ಮತ್ತು ಚೆನ್ನೈನ ಐಒಬಿ ತಂಡಗಳು ಫೈನಲ್ ಪ್ರವೇಶಿಸಿವೆ. ಮಹಿಳೆಯರ ವಿಭಾಗದಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡು ತಂಗಳು ಫೈನಲ್ ಪ್ರವೇಶಿಸಿವೆ.
ಶನಿವಾರ ನಡೆದ ಪುರುಷರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಒಎನ್‌ಜಿಸಿ ತಂಡ ಪಂಜಾಬ್ ಪೊಲೀಸ್ ತಂಡವನ್ನು 75- 65 ಅಂಕಗಳಿಂದ ಪರಾಭವಗೊಳಿಸಿತು. ನಂತರ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಚೆನ್ನೈನ ಐಒಬಿ ತಂಡ ಐಎಫ್ ತಂಡವನ್ನು 86-60 ಅಂಕಗಳಿಂದ ಮಣಿಸಿತು.
ತೀವ್ರ ಪೈಪೋಟಿಯಿಂದ ಕೂಡಿದ ಮಹಿಳೆಯರ ವಿಭಾಗದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಸೌಥ್ ಈಸ್ಟ್ ಸೆಂಟ್ರಲ್ ರೇಲ್ವೆ ತಂಡವನ್ನು 71-70 ಅಂಕಗಳ ಕೂದಲೆಳೆ ಅಂತರದಿಂದ ಸೋಲಿಸಿತು. ಮಹಿಳೆಯರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡ ಕೇರಳವನ್ನು 75-55 ಅಂಕಗಳಿಂದ ಪರಾಭವಗೊಳಿಸಿತು.
ಭಾನುವಾರ ಬೆಳಗ್ಗೆ 8 ಗಂಟೆಗೆ ಮಹಿಳೆಯರ ವಿಭಾಗದ 3 ಮತ್ತು 4ನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಕೇರಳ ಮತ್ತು ಸೌಥ್ ಈಸ್ಟ್ ಸೆಂಟ್ರಲ್ ರೇಲ್ವೆ ತಂಡಗಳು ಹಣಾಹಣಿ ನಡೆಸಲಿವೆ. ನಂತರ 9: 30 ಗಂಟೆಗೆ ಪುರುಷರ ವಿಭಾಗದಲ್ಲಿ 3 ಮತ್ತು 4ನೇ ಸ್ಥಾನಕ್ಕಾಗಿ ಪಂಜಾಬ್ ಪೊಲೀಸ್ ಐಎಫ್ ತಂಡಗಳ ನಡುವೆ ಕದನ ನಡೆಯಲಿದೆ.
ಮಹಿಳೆಯರ ಫೈನಲ್ ಪಂದ್ಯ ಮಧ್ಯಾಹ್ನ 3 ಗಂಟೆಗೆ ನಡೆದರೆ, ಪುರುಷರ ಫೈನಲ್ ಪಂದ್ಯ ಸಂಜೆ 5:30ಕ್ಕೆ ನಡೆಯಲಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.