ನಾಳೆಯಿಂದ ಯುವಜನ ಮೇಳ
ಬೆಂಗಳೂರು: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಫೆ.19 ಮತ್ತು 20ರಂದು ಬೆಂಗಳೂರು ನಗರ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಹಮ್ಮಿಕೊಂಡಿದ್ದು, ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸ್ಪರ್ಧೆಯು ಯುವಕ/ಯುವತಿಯರಿಗಾಗಿ ಪ್ರತ್ಯೇಕವಾಗಿ ಭಾವಗೀತೆ, ಸೋಬಾನಪದ, ಬೀಸೋಪದ, ಜಾನಪದ ನೃತ್ಯ, ಜಾನಪದ ಗೀತೆ, ಲಾವಣಿ, ಏಕಪಾತ್ರಾಭಿನಯ, ಗೀಗೀಪದ, ರಂಗಗೀತೆ, ಭಜನೆ, ವೀರಗಾಸೆ, ಡೊಳ್ಳು, ಕುಣಿತ, ಚರ್ಮವಾದ್ಯ, ಸಣ್ಣಾಟ, ದೊಡ್ಡಾಟ, ಯಕ್ಷಗಾನ, ಕೋಲಾಟ, ಸ್ಪರ್ಧೆಗಳನ್ನು ಒಳಗೊಂಡಿದೆ. ಬೆಂಗಳೂರು ನಗರ ಜಿಲ್ಲೆಯ ನೋಂದಾಯಿಸಿದ ಯುವಕ/ಯುವತಿ ಸಂಘದ 15ವರ್ಷ ತುಂಬಿದ 35 ವರ್ಷದೊಳಗಿನ ಯುವಕ/ಯುವತಿಯರು ತಮ್ಮ ಸ್ವವಿವರಗಳೊಂದಿಗೆ ಫೆ.18ರೊಳಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಕಂಠೀರವ ಹೊರಾಂಗಣ ಕ್ರೀಡಾಂಗಣ, ಕಸ್ತೂರ ಬಾ ರಸ್ತೆ, ಬೆಂಗಳೂರು-01. ಇಲ್ಲಿ ನೋಂದಾಯಿಸಿಕೊಳ್ಳಲು ತಿಳಿಸಿದೆ. ಮಾಹಿತಿಗೆ- 22239771.