ಇಂದಿನಿಂದ ನಾಟಕೋತ್ಸವ
ದೊಡ್ಡಬಳ್ಳಾಪುರ: ಇಲ್ಲಿನ ಶ್ರೀ ಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಜಾತ್ರಾ ಸಾಂಸ್ಕೃತಿಕಸಮಿತಿ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅನಿಕೇತನ ಟ್ರಸ್ಟ್ ಸಹಯೋಗದಲ್ಲಿ ಫೆ.25, 26ರಂದು ನಾಟಕೋತ್ಸವ ಏರ್ಪಡಿಸಲಾಗಿದೆ. ಫೆ.25ರಂದು ಸಂಜೆ 6 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ,ತಾಲೂಕು ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ನಂತರ ಭರತನಾಟ್ಯ, ತಾ. ಕಲಾವಿದರ ಸಂಘದ ಕಲಾವಿದರಿಂದ ರಂಗದೃಶ್ಯಾವಳಿ, ರಾತ್ರಿ 9.30ರ ನಂತರ ಶ್ರೀಆಂಜನೇಯ ಕೃಪಾಪೋಷಿತ ನಾಟಕ ಮಂಡಲಿಯಿಂದ ಶ್ರೀಕೃಷ್ಣ ಸಂಧಾನ ಪೌರಾಣಿಕ ನಾಟಕ ನಡೆಯಲಿದೆ. ಫೆ.26ರಂದು ಸಂಜೆ ಯದ್ಲಳ್ಳಿ ಪಾಪಣ್ಣನವರ ಭಾಗವತ ಯಕ್ಷಗಾನ ಮಡಲಿ ವತಿಯಿಂದ ಕರಿರಾಜ ಚರಿತ್ರೆಯ ಯಕ್ಷಗಾನ ಪ್ರಸಂಗ, ಹಾಸ್ಯ-ಲಾಸ್ಯ ತಂಡದಿಂದ ತರ್ಲೆತಿಮ್ಮ ನಾಟಕ, ಮಧುರೆ ರಾಮಾಂಜಿನಪ್ಪ ತಂಡದಿಂದ ಗೀತೋಪದೇಶ ಪೌರಾಣಿಕ ನಾಟಕ, ಮುತ್ಯಾಲಮ್ಮ ಕೃಪಾ ಪೋಷಿತ ನಾಟಕ ಮಂಡಲಿ ವತಿಯಿಂದ ಶನಿಪ್ರಭಾವ ನಾಟಕ ಪ್ರದರ್ಶನ ನಡೆಯಲಿದೆ.