ದಕ್ಷತೆ ಮೆರೆದ ಹಾಲು ಉತ್ಪಾದಕರ ಸಂಘ
ಮಾಗಡಿ: ಕರ್ನಾಟಕದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ನುಡಿದರು. ಅವರು ತಾಲೂಕಿನ ಸೋಲೂರು ಹಾಲು ಶಿಥಲೀಕೇಂದ್ರದ ಆವರಣದಲ್ಲಿ ಜಿಲ್ಲಾ ಸಹಕಾರಿ ಒಕ್ಕೂಟದ ಕಲ್ಯಾಣ ನಿಧಿ ಟ್ರಸ್ಚ್ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಮಕ್ಕಳಿಗೆ ಏರ್ಪಡಿಸಿದ್ದಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ, ಪರಿಹಾರ ಚೆಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ ಸಹಕಾರಿ ಸಂಸ್ಥೆ ನಿಜಕ್ಕೂ ಪಾರದರ್ಶಕವಾಗಿದೆ. ಇಲ್ಲಿ ಯಾವುದೇ ಲಂಚಾವತಾರವಿಲ್ಲ. ನಂಬಿಕೆ, ವಿಶ್ವಾಸದಿಂದ ನಡೆದುಕೊಂಡು ಬರುತ್ತಿರುವ ಹಾಲು ಉತ್ಪಾದರ ಸಹಕಾರ ಸಂಘಗಳು ರೈತರ ಪಾಲಿಗೆ ಕಾಮಧೇನು ಇದ್ದಂತೆ ಎಂದರು. ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ಪರಿಹಾರದ ಚೆಕ್ಗಳನ್ನು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ವಿತರಿಸಿದರು.