ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯ: ಎಂ.ವಿ. ರಾಜಶೇಖರನ್

Parashurama
Updated On : 25 Feb 2013, 1:33 am

ಬೆಂಗಳೂರು: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು ಎಂದು ಮಾಜಿ ಸಚಿವ ಎಂ.ವಿ. ರಾಜಶೇಖರನ್ ಹೇಳಿದ್ದಾರೆ. ಭಾರತ ಯುವ ಕೇಂದ್ರ ಭಾನುವಾರ ನಗರದ ಯವನಿಕಾ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಶೆ.70ಕ್ಕಿಂತ ಹೆಚ್ಚು ಯುವಕರಿದ್ದಾರೆ. ಅದರಲ್ಲಿಯೂ ಹೆಚ್ಚಿನ ಪಾಲು 24 ವರ್ಷದೊಳಗಿನವರದ್ದು. ಇವರೆಲ್ಲರೂ ವಿವೇಕಾನಂದರ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ನಮ್ಮ ಗುರಿ ಸಾಧನೆ ಮಾತ್ರ ಮುಖ್ಯವಲ್ಲ. ಅದನ್ನು ಸಾಧಿಸಲು ನಾವು ಯಾವ ದಾರಿ ಆಯ್ಕೆ ಮಾಡಿಕೊಂಡಿದ್ದೇವೆ ಎಂಬುದೂ ಮುಖ್ಯವಾಗುತ್ತದೆ. ಈ ವಿಚಾರವನ್ನು ಮಹತ್ಮಾ ಗಾಂಧೀಜಿಯವರೂ ಪ್ರತಿಪಾದಿಸಿದ್ದಾರೆ. ನಮ್ಮ ಸಾಧನೆಯ ದಾರಿಯೇ ನಮ್ಮ ಗುರಿಯನ್ನು ನಿರ್ಧರಿಸುವಂತಾಗಬೇಕು ಎಂದರು. ಮಕ್ಕಳಿಗೆ ಸಾಮಾಜಿಕ ನ್ಯಾಯ ದೊರೆಯಬೇಕು. ನಾನು ಕೇಂದ್ರ ಯೋಜನಾ ಮಂತ್ರಿಯಾಗಿದ್ದಾಗ ಕಪಿಲ್ ಸಿಬಲ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಸಮೀಕ್ಷೆ ನಡೆಸಿದ್ದರು. ಅದರ ಪ್ರಕಾರ 8 ರಿಂದ 16 ವರ್ಷದೊಳಗಿನ 1 ಕೋಟಿ ಮಕ್ಕಳು ವಿಶ್ವದಲ್ಲಿಯೇ ಅತಿ ಹೆಚ್ಚು ಬುದ್ಧಿವಂತ ಮಕ್ಕಳು ಎಂದು ಸಾಬೀತಾಗಿತ್ತು. ನಮ್ಮ ದೇಶದ ಮಕ್ಕಳಲ್ಲಿ ಆ ಬೌದ್ಧಿಕತೆ ಇದೆ. ಇದಕ್ಕೆ ಉತ್ತಮ ಪರಿಸರ ರೂಪಿಸುವ ಹೊಣೆಗಾರಿಕೆ ನಮ್ಮದು ಎಂದು ಅವರು ತಿಳಿಸಿದರು.   ಸಂಗೀತ ಕ್ಷೇತ್ರದ ಸಾಧಕರಾದ ಆರ್.ಕೆ. ಪದ್ಮನಾಭ, ವಿನಾಯಕ ತೊರವಿ, ಡಾ. ಶಿವಮೊಗ್ಗ ಸುಬ್ಬಣ್ಣ, ಬಿ.ಕೆ. ಸುಮಿತ್ರ, ಕಸ್ತೂರಿ ಶಂಕರ್, ಅಪ್ಪಗೆರೆ ತಿಮ್ಮರಾಜು, ಕಿಕ್ಕೇರಿ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಡಾ.ಜೋಸೆಫ್ ವಿ.ಜೆ, ಜಿ.ಬಾಬು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement