ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಮಹಿಳೆ ವಿಮರ್ಶೆ, ಸಂಶೋಧನೆಗೂ ಮುಂದಾಗಲಿ

Parashurama
Updated On : 25 Feb 2013, 12:51 pm

ಬೆಂಗಳೂರು: ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರದಲ್ಲೂ ಸಾಹಿತ್ಯ ರಚಿಸುವ ನಿಟ್ಟಿನಲ್ಲಿ ಲೇಖಕಿಯರು ಹೆಚ್ಚು ಅಧ್ಯಯನಶೀಲರಾಗಬೇಕು ಎಂದು ನಾಡೋಜ ಪ್ರೊ. ಕಮಲಾ ಹಂಪನಾ ಅವರು ಸಲಹೆ ನೀಡಿದ್ದಾರೆ. ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ 34ನೇ ವಾರ್ಷಿಕೋತ್ಸವ ಸಮಾರಂಭ ಮತ್ತು ದತ್ತಿನಿಧಿ ಬಹುಮಾನಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಿಳೆಯರ ಕವನ ಸಂಕಲನ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗುತ್ತಿರುವುದರಿಂದ ಕವಯತ್ರಿಯರ ಸಂಖ್ಯೆ ಹೆಚ್ಚಿದೆ. ಆದರೆ, ಮಹಿಳಾ ವಿಮರ್ಶಕರು ಹಾಗೂ ಸಂಶೋಧಕರ ಕೊರತೆ ಇದೆ. ಮಹಿಳೆಯರು ಕೇವಲ ಕಾವ್ಯಪ್ರಕಾರದಲ್ಲಿದ್ದರೆ ಸಾಲದು. ವಿದ್ಯಾವಂತ ಮಹಿಳೆಯರು ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಕ್ಕೂ ಬರಬೇಕು. ಆ ನಿಟ್ಟಿನಲ್ಲಿ ಮಹಿಳೆಯರು ಓದಿನಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಅಧ್ಯಯನಶೀಲರಾಗಬೇಕು ಎಂದು ಅವರು ಸಲಹೆ ನೀಡಿದರು. ಡಾ. ಲೀಲಾವತಿ ದೇವದಾಸ್, ಕೆ.ಎಸ್. ನಿರ್ಮಲಾದೇವಿ, ಬಿ.ಜಿ. ಕುಸುಮ, ಡಾ. ಸಮತಾ ದೇಶಮಾನೆ ಅವರನ್ನು ಈ ಸಂದರ್ಭದಲ್ಲಿ ವಿಶಿಷ್ಟ ಲೇಖಕಿಯರೆಂದು ಸನ್ಮಾನಿಸಲಾಯಿತು.ಪ್ರಭಾಮೂರ್ತಿ ಅವರ 'ಚೀನಾಯಾನ', ಭಾಷ್ಯಂ ತನುಜೆ ಅವರ 'ಸ್ವರ ಹಿಂಡಿದ ಕೈ' ಮತ್ತು ಮಲ್ಲಿಕಾ ಮಳವಳ್ಳಿ ಅವರ 'ಹೃದಯಗೀತೆ' ಕೃತಿಗಳನ್ನು ಬಿಡುಗಡೆ ಮಾಡಲಾಯಿತು. 15ಕ್ಕೂ ಹೆಚ್ಚು ಲೇಖಕಿಯರಿಗೆ ಇದೇ ವೇಳೆ ದತ್ತಿನಿಧಿ ಬಹುಮಾನ ವಿತರಿಸಲಾಯಿತು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಮಾಜಿ ಅಧ್ಯಕ್ಷೆ ನಾಗಮಣಿ ಎಸ್.ರಾವ್, ಕಾರ್ಯದರ್ಶಿ ಆಶಾ ಹೆಗಡೆ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement