ವಿಶ್ವ ದರ್ಜೆಯ ಆ್ಯನಿಮೇಷನ್ ಕೋರ್ಸ್
ಬೆಂಗಳೂರು: ಫ್ರಾನ್ಸ್ನ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆಯ ಸಹಯೋಗದೊಂದಿಗೆ ಭಾರತೀಯ ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ಆ್ಯನಿಮೇಷನ್ ಶಿಕ್ಷಣ ನೀಡಲು ಡಿಎಸ್ಕೆ ಸುಪಿನ್ಫೋಕಾಂ ಸಂಸ್ಥೆ ಮುಂದಾಗಿದೆ. ಆ್ಯನಿಮೇಷನ್, ವಿಡಿಯೋ ಗೇಮ್ ಮತ್ತು ಕೈಗಾರಿಕೆ ವಿನ್ಯಾಸ ಕುರಿತಂತೆ ಸಂಸ್ಥೆಯು 2 ವರ್ಷಗಳಿಂದ 5 ವರ್ಷಗಳವರೆಗೆ ತರಬೇತಿ ನೀಡಲಿದೆ. ಪ್ರಾಥಮಿಕ ಕೋರ್ಸ್ಗಳಿಗೆ ಪಿಯುಸಿ ಕಡ್ಡಾಯವಾಗಿದ್ದು, ಪೂರ್ಣಾವಧಿ ಕೋರ್ಸ್ಗಳಿಗೆ ಪದವಿ ಅನಿವಾರ್ಯವಾಗಿದೆ ಎಂದು ಸಂಸ್ಥೆಯ ಪ್ರತಿನಿಧಿ ಪ್ರಣವ್ ದುರ್ವೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪುಣೆಯಲ್ಲಿ ಕಾಲೇಜು ಆರಂಭವಾಗಿದ್ದು, ಮುಂಬರುವ ಶೈಕ್ಷಣಿಕ ವರ್ಷಕ್ಕೆ ದಾಖಲು ಪ್ರಕ್ರಿಯೆ ಆರಂಭವಾಗಿದೆ. ಕೋರ್ಸ್ ಸಂದರ್ಭದಲ್ಲಿ ಆ್ಯನಿಮೇಷನ್, ವಿಡಿಯೋ ಗೇಮ್ ಕಲೆ, ಆಟದ ವಿನ್ಯಾಸ, ಆಟದ ಪ್ರೋಗ್ರಾಮಿಂಗ್, ಸಾರಿಗೆ ವಿನ್ಯಾಸ, ಉತ್ಪನ್ನ ವಿನ್ಯಾಸ ಮತ್ತು ಡಿಜಿಟಲ್ ವಿನ್ಯಾಸದ ಕುರಿತು ಶಿಕ್ಷಣ ನೀಡಲಾಗುತ್ತದೆ.