ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಪರರ ಆರ್ಭಟ; ಕಾಯಂ ಪರದಾಟ

Parashurama
Updated On : 27 Feb 2013, 12:31 pm

ಬೆಂಗಳೂರು: ಪಾಲಿಕೆ ನೌಕರರಿಗೆ ಪಾಲಿಕೆಯಲ್ಲೇ ರಕ್ಷಣೆ ಇಲ್ಲ..!
ಹೌದು, ಬಿಬಿಎಂಪಿ ಕಾಯಂ ನೌಕರರಿಗೆ ಪಾಲಿಕೆಯಲ್ಲಿ ರಕ್ಷಣೆ ಇಲ್ಲ. ಬೇರೆ ಇಲಾಖೆಯಿಂದ ಎರವಲು ಸೇವೆ ಮೇಲೆ ಬರುವ ನೌಕರರು ಇವರ ಮೇಲೆ ಸವಾರಿ ಮಾಡುತ್ತಿದ್ದಾರೆ. ಪಾಲಿಕೆ ನೌಕರರ ರಕ್ಷಣೆಗೆ ಮೇಯರ್ ಸೇರಿದಂತೆ ಕಾರ್ಪೊರೇಟರ್ಗಳೂ ಮುಂದಾಗುತ್ತಿಲ್ಲ.
ಬಿಬಿಎಂಪಿಯಲ್ಲಿ ಹೊರಗಿನವರಿಗೇ ಆದ್ಯತೆ. ಆಯುಕ್ತರು ಕೂಡ ಬೇರೆ ಇಲಾಖೆಯಿಂದಲೇ ಬರುವುದರಿಂದ ಅವರಿಗೂ ಹೊರಗಿನವರ ಮೇಲೇ ಪ್ರೀತಿ. ಅದಕ್ಕೇ ಲೋಕೋಪಯೋಗಿ ಸಿಬ್ಬಂದಿಗೆ ಆಯಕಟ್ಟಿನ ಜಾಗ. ಕಾಯಂ ನೌಕರರಿಗೆ ಬೇಡದ ಜಾಗಕ್ಕೆ ವರ್ಗ.
ಬಿಬಿಎಂಪಿಯಲ್ಲಿ ಕಾಯಂ ನೌಕರರಾಗಿ ದಶಕಗಳಿಂದ ದುಡಿಯುತ್ತಿರುವ ಸಿಬ್ಬಂದಿ ಮೇಲೆ ಆಯುಕ್ತರಿಗೆ ಎಂದಿಗೂ ಕಣ್ಣು. ಅವರೇನೋ ಲೂಟಿ ಮಾಡುತ್ತಿದ್ದಾರೆ ಎಂಬ ಅನುಮಾನ. ಇದಕ್ಕೆ ಅವರ ಸುತ್ತಮುತ್ತಲಿರುವ ಪಟ್ಟಭದ್ರ ಹಿತಾಸಕ್ತಿ ವ್ಯಕ್ತಿಗಳು ತುಪ್ಪ ಸುರಿಯುತ್ತಾರೆ. ಹೀಗಾಗಿ, ಕಾಯಂ ನೌಕರರನ್ನು ಬೇಕಾಬಿಟ್ಟಿ ವರ್ಗಾಯಿವ ಪರಿಪಾಠ ಸಿದ್ದಯ್ಯ ಅವರಿಂದಲೂ ಹೊರತಾಗಿಲ್ಲ. ಅದಕ್ಕೇ ಪ್ರಭಾರ ಕಾರ್ಯಪಾಲಕ ಎಂಜಿನಿಯರ್ ಅವರನ್ನು ಕೇವಲ ಎರಡು ತಿಂಗಳಲ್ಲಿ ಮತ್ತೆ ಪಾಲಿಕೆಗೆ ಸೇರಿಸಿಕೊಂಡಿದ್ದಾರೆ.
ಲೋಕೋಪಯೋಗಿ ಇಲಾಖೆಯ ವಿ. ಪ್ರಹ್ಲಾದ್ ಕಾರ್ಯಪಾಲಕ ಎಂಜಿನಿಯರ್.
ಆದೇಶ ಉಲ್ಲಂಘನೆ: ನಾಗರಿಕ ಸೇವಾ ನಿಯಮಾವಳಿಯ ನಿಯಮ 32ರಡಿ ಇವರು ಕಾರ್ಯಪಾಲಕ ಎಂಜಿನಿಯರ್. ಅಂದರೆ ಈ ಹುದ್ದೆ ಪ್ರಭಾರ. ಏಕೆಂದರೆ, ಈ ನಿಯಮದಲ್ಲಿ ಪ್ರಭಾರ ಹುದ್ದೆ ನೀಡಬಾರದು ಎಂಬ ಹೈಕೋರ್ಟ್ ಆದೇಶವಿದೆ. ಇದೀಗ ಅದು ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿದೆ. ಹೀಗಿದ್ದರೂ ಅಂತಿಮ ಆದೇಶಕ್ಕೆ ಒಳಪಟ್ಟು ಎಂಬ ಪದ ಸೇರಿಸಿ ಹೈಕೋರ್ಟ್ ಆದೇಶವನ್ನೂ ಉಲ್ಲಂಘಿಸಿ ಪ್ರಭಾರ ಹುದ್ದೆಗಳನ್ನು ನೀಡಲಾಗುತ್ತಿದೆ.
ಇಂತಹದ್ದೇ ವಿಧದಲ್ಲಿ ವಿ. ಪ್ರಹ್ಲಾದ್ ಸೇರಿದಂತೆ 107 ನೌಕರರಿಗೆ ಪ್ರಭಾರ ಕಾರ್ಯಪಾಲಕ ಎಂಜಿನಿಯರ್ ಹುದ್ದೆ ಕಳೆದ ಅಕ್ಟೋಬರ್ನಲ್ಲಿ ಲಭ್ಯವಾಗಿದೆ. ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿ. ಪ್ರಹ್ಲಾದ್ ಅವರನ್ನು ಅಂದೇ ನಗರ ಇಲಾಖೆಯ ವಶಕ್ಕೆ ನೀಡಲಾಗಿತ್ತು. ಇವರನ್ನು ಡಿಸೆಂಬರ್ನಲ್ಲಿ ಮತ್ತೆ ಪಾಲಿಕೆಗೆ ವರ್ಗಾಯಿಸಲಾಗಿದೆ.
ಸರ್ಕಾರದ ನಿಯಮಾವಳಿ ಪ್ರಕಾರ ಯಾವುದೇ ಅಧಿಕಾರಿ ನಿಯೋಜನೆ ಮೇಲೆ ಪಾಲಿಕೆಗೆ ಬಂದು ಆತ ಮತ್ತೆ ಮಾತೃ ಇಲಾಖೆಗೆ ವಾಪಸ್ ಹೋದರೆ, ಅಲ್ಲಿಂದ ಕನಿಷ್ಟ ಎರಡು ವರ್ಷ ಮತ್ತೆ ಪಾಲಿಕೆಗೆ ನಿಯೋಜನೆ ಮಾಡುವಂತಿಲ್ಲ. ಇದನ್ನು ಕೂಲಿಂಗ್ ಪಿರಿಯಡ್ ಎಂದು ಕರೆಯಲಾಗುತ್ತದೆ. ಇದನ್ನು ಮೀರಿ ವಿ. ಪ್ರಹ್ಲಾದ್ ಪಾಲಿಕೆಗೆ ಬಂದಿದ್ದಾರೆ.
ಸಿದ್ದಯ್ಯ ಸಹಿ: ಅಷ್ಟೇ ಅಲ್ಲ, ಪಾಲಿಕೆಯ ಕಾಯಂ ನೌಕರರನ್ನು ಪಕ್ಕಕ್ಕೆ ಸರಿಸಿ ಹುದ್ದೆಯನ್ನು ಆಕ್ರಮಿಸಿಕೊಳ್ಳುವಲ್ಲಿ ಯಶ ಸಾಧಿಸಿದ್ದಾರೆ. ಇದಕ್ಕೆ ಆಯುಕ್ತ ಸಿದ್ದಯ್ಯ ಸಹಿ ಹಾಕಿರುವುದೇ ದುರದೃಷ್ಟಕರ.
ಲೋಕೋಪಯೋಗಿ ಇಲಾಖೆ ನೌಕರರ ಪ್ರಭಾವ ಎಷ್ಟರ ಮಟ್ಟಿಗಿದೆ ಎಂದರೆ, ಇಂತಹದ್ದೇ ಹುದ್ದೆಗೆ ಇವರನ್ನು ನಿಯೋಜಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯಿಂದಲೇ ಅಧಿಸೂಚನೆ ತರುತ್ತಾರೆ. ವಿ. ಪ್ರಹ್ಲಾದ್ ಕೂಡ ಇಂತಹ ಅಧಿಸೂಚನೆಯನ್ನೇ 2012ರ ಡಿಸೆಂಬರ್ 18ರಂದು ಹೊತ್ತು ತಂದಿದ್ದರು. ಬಿಬಿಎಂಪಿಯ ಕಾರ್ಯಪಾಲಕೆ ಎಂಜಿನಿಯರ್ ಎಚ್.ಆರ್. ಕೃಷ್ಣಮೂರ್ತಿ ಜಾಗಕ್ಕೆ ನಿಯೋಜಿಸುವಂತೆ ಈ ಸೂಚನೆ ಇತ್ತು. ಇದರಂತೆಯೇ ಪಾಲಿಕೆಯಲ್ಲಿ ನಡೆದಿದೆ.
ಆದರೆ, ನಗರ ಯೋಜನೆ ವಿಭಾಗದ ಮೇಲೆ ಕಣ್ಣು ನೆಟ್ಟಿದ್ದ ವಿ. ಪ್ರಹ್ಲಾದ್ ಅಲ್ಲಿಗೆ ಇದೀಗ ಉಪ ನಿದೇರ್ಶಕ ಹುದ್ದೆಗೆ ಬಂದಿದ್ದಾರೆ. ನಗರ ಯೋಜನೆಯಲ್ಲಿ ಜಂಟಿ ನಿರ್ದೇಶಕ ಹುದ್ದೆಯಲ್ಲಿರುವವರು ಆಯುಕ್ತರಿಗೆ ಆಪ್ತರಾಗಿರುವುದರಿಂದ ಅವರ ಪ್ರಭಾವ ಬೆಳೆಸಿ ಈ ಹುದ್ದೆಗೆ ಅನಾಯಾಸವಾಗಿ ಬಂದು ಪ್ರತಿಷ್ಠಾಪಿಸಿಕೊಂಡಿದ್ದಾರೆ. ಇದು ಪ್ರಹ್ಲಾದ್ ಒಬ್ಬರ ವಿಷಯವಲ್ಲ, ಒಂದು ತಾಜಾ ಉದಾಹರಣೆಯಷ್ಟೇ. ಇಂತಹ ನೂರಾರು ಪ್ರಕರಣಗಳು ಬಿಬಿಎಂಪಿಯಲ್ಲಿವೆ.
ಈ ಬಗ್ಗೆ ಆಡಳಿತ ಪಕ್ಷದ ಹಿರಿಯ ನಾಯಕ ಗಂಗಬೈರಯ್ಯ ಪಾಲಿಕೆ ಕೌನ್ಸಿಲ್ ಸಭೆಯಲ್ಲೇ ಟೀಕಿಸಿದ್ದಾರೆ. ಲೋಕೋಪಯೋಗಿ ನೌಕರರು ಪಾಲಿಕೆ ನೌಕರರ ಮೇಲೆ ನಡೆಸುತ್ತಿರುವ ಇಂತಹ ದಬ್ಬಾಳಿಕೆ ಕೊನೆಗಾಣಿಸಲು ಒತ್ತಾಯಿಸಿದ್ದರು, ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಮಾಜಿ ಮೇಯರ್ ಎಸ್.ಕೆ. ನಟರಾಜ್, ಕಟ್ಟೆ ಸತ್ಯನಾರಾಯಣ, ಪಿ.ಎನ್. ಸದಾಶಿವ ಕೂಡ ದನಿಗೂಡಿಸಿದ್ದರು.
ಇಂತಹ ಕಳಕಳಿ ಕೆಲವರಲ್ಲಿ ಮಾತ್ರ ಉಳಿದಿರುವುದರಿಂದ ಎರವಲು ಸೇವೆ ನೌಕರರ ದೌರ್ಜನ್ಯ ನಡಯುತ್ತಲೇ ಇದೆ ಎಂಬ ಆರೋಪ ಕೇಳಿಬರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments