ಸಾಧನೆ ರಹಿತ ಬಿಬಿಎಂಪಿಗೆ ಅಧಿಕಾರಿಗಳೇ ಕಾರಣ: ನಾಗರಾಜ್
ಬೆಂಗಳೂರು: 'ಈ ಆರ್ಥಿಕ ವರ್ಷದಲ್ಲಿ ಬಿಬಿಎಂಪಿ ಆಡಳಿತ ಹೇಳಿಕೊಳ್ಳುವಂತ ಯಾವುದೇ ಸಾಧನೆ ಮಾಡಲು ಆಗಿಲ್ಲ'.
ಇದು ಪ್ರತಿಪಕ್ಷದವರ ಆರೋಪವಲ್ಲ. ಆಡಳಿತ ಪಕ್ಷದ ನಾಯಕ ಎನ್. ನಾಗರಾಜ್, ಪಾಲಿಕೆ ಅಧಿಕಾರಿಗಳ ವೈಫಲ್ಯ ನೋಡಿ ಬೇಸರದಿಂದ ಹೇಳಿದ್ದು. ಮಂಗಳವಾರ ನಡೆದ ಕೌನ್ಸಿಲ್ ಸಭೆ ಆರಂಭದಲ್ಲಿ ನಾಗರಾಜ್, ಪಾಲಿಕೆ ಆಡಳಿತದ ವೈಫಲ್ಯಗಳ ಬಗ್ಗೆ ಪ್ರಸ್ತಾಪಿಸಿದರು.
ಅಭಿವೃದ್ಧಿ ಕಾರ್ಯಕ್ಕೆ ಹಣವಿಲ್ಲ ಎನ್ನುತ್ತಾರೆ. ಆಯುಕ್ತರು ಏಕೆ ಸುಮ್ಮನಿದ್ದಾರೆ. ಆಸ್ತಿ ತೆರಿಗೆ ಬಾಕಿ ಸಂಗ್ರಹಕ್ಕೆ ಇನ್ನೂ ಹೆಚ್ಚಿನ ಕ್ರಮಕೈಗೊಳ್ಳಬಾರದೇಕೆ? ನಾವೇನೂ ಅಧಿಕಾರಿಗಳನ್ನು ತೆರಿಗೆ ಸಂಗ್ರಹಿಸಬೇಡ ಎನ್ನುತ್ತಿದ್ದೆವಾ ಎಂದು ಪ್ರಶ್ನಿಸಿದರು. ಸರಿಯಾಗಿ ತೆರಿಗೆ ವಸೂಲಿ ಮಾಡದ ಅಧಿಕಾರಿಗಳ ವಿರುದ್ಧ ಆಯುಕ್ತರು ಕ್ರಮಕೈಗೊಳ್ಳಬೇಕು ಂದು ಹೇಳಿದರು.
ಮಧ್ಯಪ್ರವೇಶಿಸಿ ಜೆಡಿಎಸ್ನ
ಪದ್ಮನಾಭರೆಡ್ಡಿ, ಆಡಳಿತಪಕ್ಷ ನಾಯಕರು ಆಡಳಿತ ವೈಫಲ್ಯಗಳನ್ನು ಹೇಳುತ್ತಿದ್ದಾರೆಂದು ವ್ಯಂಗ್ಯ ಮಾಡಿದರು.
ಅಧಿಕಾರಿಗಳು ಎಲ್ಲದಲ್ಲೂ ಆಯುಕ್ತರ ಸೂಚನೆ ಕಾಯುತ್ತಾ ಇರಬಾರದು. ಸರಿಯಾಗಿ ಕಾರ್ಯ ನಿರ್ವಹಿಸಿದ್ದರೆ, ಇಷ್ಟೋತ್ತಿಗೆ 3000ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಬಹುದಿತ್ತು. ಆದ್ದರಿಂದ ಇದು ಆಡಳಿತಪಕ್ಷದ ವೈಫಲ್ಯವಲ್ಲ. ಅಧಿಕಾರಿಗಳ ವೈಫಲ್ಯ ಎಂದು ನಾಗರಾಜ್ ಹೇಳಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.