ಗೋಸೇವಾ ಆಯೋಗಕ್ಕೆ ಸರ್ಕಾರೇತರ 11 ಸದಸ್ಯರ ನೇಮಕಕ್ಕೆ ಆದೇಶ
ಬೆಂಗಳೂರು: ರಾಜ್ಯ ಗೋಸೇವಾ ಆಯೋಗಕ್ಕೆ ಸರ್ಕಾರೇತರ 11 ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಗೋವಧೆಯ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣೆ ನಿಯಮಗಳಡಿ ಸರ್ಕಾರ ಪ್ರದತ್ತವಾದ ಅಧಿಕಾರ ಚಲಾಯಿಸಿ ಈ ಅಧಿಸೂಚನೆ ಹೊರಡಿಸಿದೆ.
ಆಯೋಗದ ಸದಸ್ಯರು ಇಂತಿದ್ದಾರೆ: ಅಧ್ಯಕ್ಷ- ಎಂ.ಬಿ. ಪುರಾಣಿಕ್, ಅಳಕೆ, ಮಂಗಳೂರು; ಸದಸ್ಯರು- ಡಾ.ಎಸ್.ಕೆ. ಮಿತ್ತಲ್, ಜೈಲಕ್ಷ್ಮೀಪುರಂ, ಮೈಸೂರು; ಎಸ್. ಶಿವರಾಜು, ಬಸವಾಳ, ಮಂಡ್ಯ; ಬಿ.ಎಸ್. ಮಂಜುನಾಥಸ್ವಾಮಿ, ಶಾರದಾನಗರ, ಬೆಂಗಳೂರು; ಉತ್ತಮ್ಚಂದ್ ಚಾಜೆದ್, ಕಾಮರಾಜರಸ್ತೆ, ಬೆಂಗಳೂರು; ಉತ್ತಮ್ಚಂದ್ ಬುಗದ್, ಕೋರಮಂಗಲ, ಬೆಂಗಳೂರು; ದಯಾನಂದ ಸ್ವಾಮೀಜಿ, ವಿಶ್ವನೀಡಂ, ಬೆಂಗಳೂರು; ಧರ್ಮಪ್ರಸಾದ್, ಭದ್ರಾವತಿ, ಶಿವಮೊಗ್ಗ; ಭಾರತಿ ಪಾಟೀಲ್, ಹುಬ್ಬಳ್ಳಿ; ಶ್ರೀನಿವಾಸ ಹನುಮಂತ ಬಿರಾದಾರ ಪಟೇಲ್, ಮುಧೋಳ, ಬಾಗಲಕೋಟೆ; ಶಿವಪ್ಪ ಕರಪ್ಪ ಕಡಪಟ್ಟಿ, ಜಮಖಂಡಿ, ಬಾಗಲಕೋಟೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.