'ಬಿಎಂಟಿಎಫ್ಗೆ ಅಧಿಕಾರ, ಕಾನೂನಿನ ಬಲವಿದೆ'
ಬೆಂಗಳೂರು: ಬಿಎಂಟಿಎಫ್ಗೆ ಇತರೆ ಪೊಲೀಸ್ ಠಾಣೆಗಳಿಗೆ ಇರುವಷ್ಟೇ ಅಧಿಕಾರ ಮತ್ತು ಕಾನೂನಿನ ಬಲವಿದೆ ಎಂದು ಬಿಎಂಟಿಎಫ್ ಹೇಳಿದೆ. ಬಿಎಂಟಿಎಫ್ ಕಾನೂನು ಪ್ರಕಾರ ತನಗಿರುವ ನೈಜ ಅಧಿಕಾರವನ್ನು ಒತ್ತಿ ಹೇಳಲು ಮುಂದಾಗಿದೆ. ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಪ್ರಕಾರ ಬಿಎಂಟಿಎಫ್ ರಚಿಸಿ, ಅದಕ್ಕೆ ಅನೇಕ ಶಾಸನ ಬದ್ಧ ಅಧಿಕಾರಗಳನ್ನು ನೀಡಿದೆ. ಇತ್ತೀಚಿಗೆ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಬಿಎಂಟಿಎಫ್ ಮುಂದೆ ದೂರು ನೀಡುತ್ತಿದ್ದು, ಈ ಸಂಸ್ಥೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಇನ್ನೂ ಹೆಚ್ಚಿನ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರ 2-9-2002ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ, ಬಿಎಂಟಿಎಫ್ ವ್ಯಾಪ್ತಿಯಲ್ಲಿ 5 ಪೊಲೀಸ್ ಠಾಣೆಗಳು ಕಾರ್ಯ ನಿರ್ವಹಿಸುತ್ತಿವೆ. ಗೃಹ ಇಲಾಖೆ ಸೆಕ್ಷನ್ 2 (ಎಸ್) ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಇರುವಷ್ಟೇ ಅಧಿಕಾರ ಬಿಎಂಟಿಎಫ್ ಠಾಣೆಗಳಿಗೂ ಇರುತ್ತದೆ ಎಂದು ವರಿಷ್ಠಾಧಿಕಾರಿ ಮಲ್ಲಿಕಾರ್ಜುನಸ್ವಾಮಿ ಪ್ರಕಟಣೆ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.