ವರದಿ ಬಂದ ನಂತರ ನಗರಕ್ಕೆ ಸೌವಿಕ್ ಶವ
ಬೆಂಗಳೂರು: ಬ್ರಿಟನ್ ಪೊಲೀಸರ ತನಿಖೆ ಹಾಗೂ ವಿಷವಿಜ್ಞಾನ ಪರೀಕ್ಷೆಯ ವರದಿ ಸಿಗುತ್ತಿದ್ದಂತೆ ಮಗ ಸೌವಿಕ್ ಪಾಲ್ ಶವವನ್ನು ನಗರಕ್ಕೆ ತರಲಾಗುವುದೆಂದು ತಂದೆ ಸಂತಾನೂ ಪಾಲ್ ಹೇಳಿದ್ದಾರೆ. ಪಾಲ್ ಶವ ಪರೀಕ್ಷೆಯ ವರದಿಯಲ್ಲಿ ಸಾವಿನ ಸ್ಪಷ್ಟ ಚಿತ್ರಣ ಸಿಗದ ಹಿನ್ನೆಲೆಯಲ್ಲಿ ಬ್ರಿಟನ್ ಪೊಲೀಸರು ವಿಷವಿಜ್ಞಾನ ಪರೀಕ್ಷೆ ಮೊರೆ ಹೋಗಿದ್ದಾರೆ. ಸೋಮವಾರ ವಿಷವಿಜ್ಞಾನ ವರದಿ ಸಿಗುವ ಸಾಧ್ಯತೆ ಇದ್ದು ಬಳಿಕ ಶವವನ್ನು ನಗರಕ್ಕೆ ತೆಗೆದುಕೊಂಡು ಹೋಗುವ ನಂಬಿಕೆ ಇದೆ ಎಂದು ಸಂತಾನೂ ಪಾಲ್ ತಿಳಿಸಿದ್ದಾರೆ. ಆತನ ಹುಡುಕಾಟ ನಡೆಸಲು ತಂದೆ ಸಂತಾನೂ ಪಾಲ್ ಬ್ರಿಟನ್ಗೆ ತೆರಳಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.