ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ರೈಲಿಗೆ ಸಿಕ್ಕಿ ಇಬ್ಬರ ಸಾವು

Parashurama
Updated On : 26 Jan 2013, 12:57 pm

ಬೆಂಗಳೂರು: ರೇಲ್ವೆ ಹಳಿಗಳ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರಿಬ್ಬರು ರೈಲಿಗೆ ಸಿಕ್ಕಿ ಮೃತಪಟ್ಟಿರುವ ಧಾರುಣ ಘಟನೆ ಹೆಜ್ಜಾಲ ರೇಲ್ವೆ ನಿಲ್ದಾಣದ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಆಂಧ್ರಪ್ರದೇಶ ಮೂಲದ ಕದಿರೆಪ್ಪ (57) ಹಾಗೂ ಬಿಹಾರ ಮೂಲದ ಅರುಣ್ ಕುಮಾರ್ (24) ಮೃತರು.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಇವರು ಹೆಜ್ಜಾಲ ರೈಲು ನಿಲ್ದಾಣದಿಂದ ಕೆಲವೇ ಮೀಟರ್‌ಗಳ ದೂರದಲ್ಲಿ ಹಳಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಮೈಸೂರಿನಿಂದ ಬೆಂಗಳೂರು ಕಡೆಗೆ ಪ್ಯಾಸೆಂಜರ್ ರೈಲು ಬರುತ್ತಿತ್ತು. ಈ ವೇಳೆ ಕಾರ್ಮಿಕರು ರೈಲು ಬರುತ್ತಿದ್ದ ಹಳಿ ಬಿಟ್ಟು ಪಕ್ಕದ ಹಳಿಯ ಮೇಲೆ ನಿಂತಿದ್ದರು. ಕಾರ್ಮಿಕರ ದುರಾದೃಷ್ಟಕ್ಕೆ ಅದೇ ಹಳಿಯ ಮೇಲೆ ಬೆಂಗಳೂರಿನಿಂದ ಮೈಸೂರು ಕಡೆ ತೆರಳುವ ಮತ್ತೊಂದು ರೈಲು ಬರುತ್ತಿತ್ತು. ಮೈಸೂರು ಕಡೆಯಿಂದ ಬರುತ್ತಿದ್ದ ರೈಲನ್ನು ಗಮನಿಸುತ್ತಿದ್ದ ಕಾರ್ಮಿಕರಿಗೆ ತಾವು ನಿಂತಿದ್ದ ಹಳಿಯ ಮೇಲೆ ಬರುತ್ತಿದ್ದ ರೈಲಿನ ಸದ್ದು ಕೇಳಿಸಿಲ್ಲ. ಎರಡು ರೈಲುಗಳು ಎರಡು ಪ್ರತ್ಯೇಕ ಹಳಿಗಳ ಮೇಲೆ ತಮ್ಮ ಹತ್ತಿರಕ್ಕೆ ಬರುತ್ತಿದ್ದಂತೆ ಗಾಬರಿಗೊಂಡ ಕಾರ್ಮಿಕರು ಯಾವ ಕಡೆ ಹೋಗುವುದು ಎನ್ನುವ ಗೊಂದಲಕ್ಕೊಳಗಾಗಿ ಓಡಿದ್ದಾರೆ. ಈ ವೇಳೆ ಎರಡು ರೈಲುಗಳು ಇಬ್ಬರಿಗೂ ಡಿಕ್ಕಿ ಹೊಡೆದಿವೆ. ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕದಿರೆಪ್ಪ ಹೆಜ್ಜಾಲ ಬಳಿ ಸಣ್ಣ ರೂಮ್ ಮಾಡಿಕೊಂಡು ಸಹೋದ್ಯೋಗಿಗಳೊಂದಿಗೆ ವಾಸವಿದ್ದರು. ಕುಟುಂಬ ಸದಸ್ಯರೆಲ್ಲ ಆಂಧ್ರಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇನ್ನು ಅರುಣ್ ಕುಮಾರ್ ಬಿಹಾರ ಮೂಲದವರಾಗಿದ್ದ ಹೆಜ್ಜಾಲದಲ್ಲೆ ತನ್ನ ಸ್ನೇಹಿತರೊಂದಿಗೆ ವಾಸವಿದ್ದರು. 'ಇಬ್ಬರು ಕಾರ್ಮಿಕರು ಹಳಿಗಳನ್ನು ಬಿಟ್ಟು ಮಧ್ಯದಲ್ಲಿರುವ ಖಾಲಿ ಜಾಗದಲ್ಲಿ ನಿಂತಿದ್ದರೆ ಈ ಸಾವು ಬರುತ್ತಿರಲಿಲ್ಲ' ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments