ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಅಬಾಕಸ್, ಬೌದ್ಧಿಕ ಅಂಕಗಣಿತ ಸ್ಪರ್ಧೆ

Parashurama
Updated On : 28 Jan 2013, 12:49 pm

ಬೆಂಗಳೂರು: ಸಿಪ್ ಅಕಾಡೆಮಿ ಇಂಡಿಯಾ ಪ್ರೈವೇಟ್ ಲಿ, ಅಬಾಕಸ್ ಕಲಿಕೆಗೆ ಹೆಚ್ಚು ಒತ್ತು ನೀಡುವ ಸಲುವಾಗಿ ಭಾನುವಾರ ನಗರದ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ 7ನೇ ಪ್ರಾದೇಶಿಕ ಅಬಾಕಸ್ ಮತ್ತು ಬೌದ್ಧಿಕ ಅಂಕಗಣಿತ ಸ್ಪರ್ಧೆ ಆಯೋಜಿಸಿತ್ತು.
ಮಕ್ಕಳ ಪ್ರತಿಭೆ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿ ಅಬಾಕಸ್ ಪದ್ಧತಿಯ ಮೂಲಕ ಕಲಿಕೆಯ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಸಿಪ್ ಈ ಸ್ಪರ್ಧೆಯನ್ನು  ಏರ್ಪಡಿಸಿತ್ತು.
ರಾಜ್ಯದ ವಿವಿಧೆಡೆಯಿಂದ 2000ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಮಲ್ (5-7ವರ್ಷ) ಮತ್ತು ಅಬಾಕಸ್ (7-12ವರ್ಷ) ಈ 2 ವಿಭಾಗದಲ್ಲಿ ಸ್ಪರ್ಧೆ ನಡೆಯಿತು.
ಮೊದಲ ವಿಭಾಗದಲ್ಲಿ 150 ಮಕ್ಕಳು ಭಾಗವಹಿಸಿ, 16ಮಕ್ಕಳು ಚಾಂಪಿಯನ್‌ಗಳಾದರು. 10ಮಕ್ಕಳು 'ಬೆಸ್ಟ್ ಆಫ್ ಬೆಸ್ಟ್‌' ಪ್ರಶಸ್ತಿ ಪಡೆದರು. ಎರಡನೇ ವಿಭಾಗದಲ್ಲಿ 2000 ಮಕ್ಕಳು ಭಾಗವಹಿಸಿ 16 ಮಕ್ಕಳು ಚಾಂಪಿಯನ್ ಆದರು.
ಇದರಲ್ಲಿ ಮೊದಲ ರನ್ನರ್ ಅಪ್ 65, ಎರಡನೇ ರನ್ನರ್ ಅಪ್ 112, ಮತ್ತು ಮೂರನೇ ರನ್ನರ್ ಅಪ್ 200 ಮಕ್ಕಳು ಆಯ್ಕೆಯಾದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ಮತ್ತು ಸ್ಮರಣಿಕೆ ವಿತರಿಸಲಾಯಿತು. 160ಮಕ್ಕಳಿಗೆ ಪದವಿ ಪ್ರಮಾಣ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಿಪ್ ಅಕಾಡೆಮಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ವಿಕ್ಟರ್ ಸಂಸ್ಥೆಯ ಕಾರ್ಯವಿಧಾನದ ಬಗ್ಗೆ ಮಾಹಿತಿ ನೀಡಿದರು. ಕಿರುತೆರೆ ತಾರೆಯರಾದ ರವಿಕಿರಣ್, ಅಭಿನಯ, ಸಿಪ್ ಮುಖ್ಯಸ್ಥ ನಾರಾಯಣ್ ಎಚ್.ಎನ್, ಕರ್ನಾಟಕ ಮುಖ್ಯಸ್ಥ ಎಚ್.ಎನ್. ನರೇಂದ್ರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments