ಇಂದು ಉಪವಾಸ ಸತ್ಯಾಗ್ರಹ
ಬೆಂಗಳೂರು: ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರ ಕೇಂದ್ರ ಸಂಘ ಜ.28ರಂದು ಉಪವಾಸ ಸತ್ಯಾಗ್ರಹ ನಡೆಸಲಿದೆ. ಆನಂದರಾವ್ ವೃತ್ತದ ಬಳಿ ಇರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. ನಂತರದಲ್ಲಿ ಬೇಡಿಕೆ ಈಡೇರುವವರೆಗೂ ಜಿಲ್ಲಾವಾರು ಸರದಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಿಳೆಯರಿಗೆ ಟೈಲರಿಂಗ್ ತರಬೇತಿ
ರುಡ್ಸೆಟ್ ಸಂಸ್ಥೆ ನಡೆಸಲಿರುವ ಹಲವಾರು ಉಚಿತ ತರಬೇತಿಗಳಿಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಫೆ.5ರಿಂದ ವಸ್ತ್ರ ವಿನ್ಯಾಸ ಮಹಿಳೆಯರಿಗೆ- ಟೈಲರಿಂಗ್ (21ದಿನ) ತರಬೇತಿ ನಡೆಯಲಿದ್ದು ಪ್ರಾಥಮಿಕ ಜ್ಞಾನವಿರುವ ಅಭ್ಯರ್ಥಿಗಳು ಫೆ.1ರೊಳಗಾಗಿ, ಮಾ.11 ಕೃತಕ ಆಭರಣಗಳ ತಯಾರಿಕೆ (6ದಿನ), ಆಹಾರ ಉತ್ಪನ್ನ ಹಾಗೂ ಫಾಸ್ಟ್ ಫುಡ್ ತಯಾರಿಕೆ (15ದಿನ), ಬ್ಯೂಟಿ ಪಾರ್ಲರ್ ಮಹಿಳೆಯರಿಗೆ (30ದಿನಗಳು), ಜೇನು ಸಾಕಾಣಿಕೆ (6ದಿನ), ಡೀಸೆಲ್ ಆಟೋ ರಿಕ್ಷಾ ರಿಪೇರಿ (30ದಿನ), ಕಂಪ್ಯೂಟರ್ ಡಿಟಿಪಿ (45ದಿನ), ತರಬೇತಿಯನ್ನು ಹಮ್ಮಿಕೊಂಡಿದ್ದು ಆಸಕ್ತರು ಮಾ.5ರೊಳಗಾಗಿ ಅರ್ಜಿ ಸಲ್ಲಿಸಬಹುದು. ಸಂಸ್ಥೆ ತಾಂತ್ರಿಕ ವಿಷಯಗಳ ಜತೆಗೆ ಉದ್ದಿಮೆಯನ್ನು ಸಮರ್ಥವಾಗಿ ನಡೆಸಲು ಬೇಕಾಗುವ ಉದ್ಯಮಶೀಲತಾ ಗುಣಗಳು, ಮಾರುಕಟ್ಟೆ, ಬ್ಯಾಂಕಿಂಗ್, ವಿಮೆ, ತೆರಿಗೆ ನಿಯಮಗಳು ಇತ್ಯಾದಿ ಸಂಬಂಧಿತ ವಿಷಯಗಳನ್ನು ತಿಳಿಸಲಾಗುತ್ತದೆ. ಅಲ್ಲದೇ, ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ವಿಷಯಗಳನ್ನು ಹೇಳಿಕೊಡಲಾಗುವುದು. ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ತರಬೇತಿ ತರಗತಿಗಳನ್ನು ನಡೆಸಲಿದ್ದು, 18ರಿಂದ 45ವರ್ಷ ವಯೋವುತಿಯ ಕನ್ನಡ ಓದು ಬರಹ ಬಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. www.rudsetitraining.org ಅರ್ಜಿನಮೂನೆ ಪಡೆದು ನಿರ್ದೇಶಕರು, ರುಡ್ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ- 574 240, ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ- 08256236404.
ಫೆ.2ರಿಂದ ಉಚಿತ ಧ್ಯಾನ ಶಿಬಿರ
ಐಸಿಆರ್ಸಿ ಪ್ರಾಣಾಹುತಿ ಸಹಿತ ಧ್ಯಾನದ ಪರಿಚಯ ಮಾಡಿಕೊಡುವ ಉದ್ದೇಶದಿಂದ ಫೆ.2 ಮತ್ತು 3ರಂದು ಉಚಿತ ತರಬೇತಿ ಶಿಬಿರ ಏರ್ಪಡಿಸಿದೆ. ತರಬೇತಿ ಆಂಗ್ಲ ಭಾಷೆಯಲ್ಲಿದ್ದು, ಆಸಕ್ತಿಯುಳ್ಳವರು ತಮ್ಮ ಹೆಸರನ್ನು 8762031255, 9353017279ಕ್ಕೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.