ಎಂ.ಜಿ. ರಸ್ತೆಯಲ್ಲಿ ಅಳವಡಿಸಿದ್ದ ಅನಧಿಕೃತ ಜಾಹೀರಾತು ತೆರವು
ಬೆಂಗಳೂರು: ಎಂ.ಜಿ.ರಸ್ತೆಯಲ್ಲಿ ಮೆಟ್ರೋ ರೈಲು ಹಳಿಯ ಆಧಾರಸ್ತಂಭಗಳಿಗೆ ಅಳವಡಿಸಿದ್ದ ನೂರಾರು ಅನಧಿಕೃತಜಾಹೀರಾತು ಫಲಕಗಳನ್ನು ಪಾಲಿಕೆ ಬುಧವಾರ ತೆರವುಗೊಳಿಸಿದೆ. ಅನಧಿಕೃತ ಜಾಹೀರಾತು ಫಲಕ ಅಳವಡಿಸಿದವರಿಂದ ತೆರಿಗೆ ವಸೂಲಿ ಮಾಡಿ, ಇಲ್ಲವಾದಲ್ಲಿ ಕೂಡಲೇ ಫಲಕ ತೆರವುಗೊಳಿಸಿ ಎಂದು ಹೈಕೋರ್ಟ್ ಸೋಮವಾರ ಮೌಖಿಕ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪಾಲಿಕೆ ಇಂಥದ್ದೊಂದು ಕ್ರಮ ಜರುಗಿಸಿದೆ. ಪರಿಣಾಮ, ಪಾಲಿಕೆ ಅನುಮತಿ ಇಲ್ಲದಿದ್ದರೂ ಮೆಟ್ರೋ ಜತೆ ಒಪ್ಪಂದ ಮಾಡಿಕೊಂಡ ಜಾಹೀರಾತು ಸಂಸ್ಥೆಯೊಂದು ಎಂ.ಜಿ.ರಸ್ತೆಯುದ್ದಕ್ಕೂ ಅಳವಡಿಸಿರುವ ಅನಧಿಕೃತ ಜಾಹೀರಾತು ಫಲಕಗಳು ಅಳವಡಿಸಲ್ಪಟ್ಟ ಕೆಲವೇ ಗಂಟೆಗಳಲ್ಲೇ ಪಾಲಿಕೆ ಅಧಿಕಾರಿಗಳಿಂದ ತೆರವುಗೊಳಿಸಲ್ಪಟ್ಟಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.