ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಎಸ್‌ಬಿಎಂಗೆ ರು. 155 ಕೋಟಿ ಲಾಭ: ಶರತ್ ಶರ್ಮಾ

Parashurama
Updated On : 30 Jan 2013, 12:43 pm

ಬೆಂಗಳೂರು:  ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ತನ್ನ ಮೂರನೆಯ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು, ಪ್ರಸಕ್ತ ವರ್ಷ 155ಕೋಟಿ ಲಾಭ ಪಡೆದಿದೆ. ಶೇ.40ರಷ್ಟು ಹೆಚ್ಚಳವಾಗಿದ್ದು, ಕಳೆದ ವರ್ಷ ಇದೇ ಅವಧಿಯ ಲಾಭ 111 ಕೋಟಿಯಾಗಿತ್ತು ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶರತ್ ಶರ್ಮಾ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ತ್ರೈಮಾಸಿಕ ಫಲಿತಾಂಶದ ಕುರಿತು ವಿವರಣೆ ನೀಡಿದರು. ನಿವ್ವಳ ಬಡ್ಡಿ ಅಂತರ ಶೇ.3.27ರಷ್ಟಾಗಿದ್ದು, ಇದು ಮಾರ್ಚ್ 2012ರಲ್ಲಿ ಶೇ.3.16 ಕ್ಕಿಂತ 11 ಅಂಶ ಹೆಚ್ಚಳಗೊಂಡಿದೆ. ಪ್ರತಿ ಷೇರಿನ ಗಳಿಕೆಯು 96.84 ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇ.34 ಹೆಚ್ಚಳವಾಗಿದೆ. ಕಳೆದ ವರ್ಷ 72.08 ಇತ್ತು. ಪ್ರಸಕ್ತ ವರ್ಷದಲ್ಲಿ ಬ್ಯಾಂಕಿನ ಮಾರುಕಟ್ಟೆ ಪಾಲು ಹೆಚ್ಚಳವಾಗಿದ್ದು, ವರ್ಷದಿಂದ ವರ್ಷಕ್ಕೆ ಖಾಸಾ ಠೇವಣಿಗಳಲ್ಲಿ ಶೇ.31.40ರಷ್ಟು, ಠೇವಣಿಗಳಲ್ಲಿ ಶೇ.13ರಷ್ಟು ಹೆಚ್ಚಳವಾಗಿದೆ.
ಕೃಷಿ ಮುಂಗಡಗಳಲ್ಲಿ ಶೇ.17 ಮತ್ತು ಎಂ.ಎಸ್.ಎಂ.ಇಯಲ್ಲಿ ಶೇ.13ರಷ್ಟು ಹೆಚ್ಚಳ ಕಂಡಿದೆ. ಸ್ಥೂಲ ಎನ್.ಪಿ.ಎ 3.99ಗೆ ಇಳಿಕೆಯಾಗಿದೆ. ಉದ್ಯೋಗಿಯ ತಲಾ ಲಾಭ ಶೇ.21ಕ್ಕೆ ಏರಿಕೆ ಕಂಡಿದೆ. ರಾಜ್ಯವು ಸತತ 3ನೇ ವರ್ಷದಲ್ಲೂ ಬರಗಾಲ ಪೀಡಿತವಾಗಿರುವುದರಿಂದ, 63,800 ಖಾತೆಗಳ 707 ಕೋಟಿ ಕೃಷಿ ಸಾಲಗಳನ್ನು ಬ್ಯಾಂಕು ಪುನಾರಚಿಸಿದೆ. ಪರಿಷ್ಕೃತ ಕೆ.ಸಿ.ಸಿ. ಯೋಜನೆಯನ್ನು ಜಾರಿಗೊಳಿಸಲಾಗಿದ್ದು, 37,483 ಕೆ.ಸಿ.ಸಿ.ಕಾರ್ಡುಗಳ ಮೂಲಕ 1320 ಕೋಟಿಗಳನ್ನು ವಿತರಿಸಲಾಗಿದೆ ಎಂದು ಬ್ಯಾಂಕ್ ಅಧಿಕೃತವಾಗಿ ತಿಳಿಸಿದೆ.
ಬಡ್ಡಿದರಗಳಲ್ಲಿ ಇಳಿಕೆ: ವೈಯಕ್ತಿಕ ಮತ್ತು ಎಂ.ಎಸ್.ಎಂ.ಇ ಸಾಲಗಳ ಬಡ್ಡಿದರಗಳನ್ನು ಸ್ಪರ್ಧಾತ್ಮಕ ಮಟ್ಟಕ್ಕೆ ಇಳಿಸಲಾಗಿದ್ದು, ವಿವಿಧ ರೇಟಿಂಗ್ /ಮಿತಿಯ ಪ್ರಮಾಣಕ್ಕನುಸಾರವಾಗಿ, 0.75ರಿಂದ 2.75ರಷ್ಟು ಬಡ್ಡಿ ದರ ಇಳಿಕೆ. ವೈಯಕ್ತಿಕ ವಿಭಾಗದ ಸಾಲುಗಳಿಗೆ ಪರಿಷ್ಕರಣಾ ಶುಲ್ಕದಲ್ಲಿ ಏಕರೂಪದಲ್ಲಿ 0.20ರಷ್ಟು ಇಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments