ಐಗಸ್‌ನ 145 ಹೊಸ ಉತ್ಪನ್ನ ಬಿಡುಗಡೆ: ಪೋನ್ಸ್‌ಜನ್
ಬೆಂಗಳೂರು: ಪ್ಲಾಸ್ಟಿಕ್ ವೈರ್‌ಗಳ ಉತ್ಪಾದನೆಯ ಕಂಪನಿಯಾದ ಐಗಸ್ ದಶಮಾನೋತ್ಸವದ ಹಿನ್ನೆಲೆಯಲ್ಲಿ ಭಾರತದಲ್ಲಿ 145 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಜರ್ಮನ್ ಮೂಲದ ಕಂಪನಿಯಾದ ಐಗಸ್ ಭಾರತದಲ್ಲಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಶೇ.25ರಷ್ಟು ಬೆಳವಣಿಗೆ ಕಂಡಿದೆ. 2012-13ನೇ ಅಂತ್ಯದ ವೇಳೆಗೆ 60 ಕೋಟಿ ನಿವ್ವಳ ಲಾಭಗಳಿಸುವ ಉದ್ದೇಶವಿದೆ ಎಂದು ಐಗಸ್ ಏಷ್ಯಾದ ಅಂತಾರಾಷ್ಟ್ರೀಯ ಅಭಿವೃದ್ಧಿ ಮುಖ್ಯಸ್ಥರಾದ ಮಾರ್ಕ್ ಪೋನ್ಸ್‌ಜನ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವಿಶ್ವದ 28 ಪ್ರದೇಶಗಳಲ್ಲಿ 27 ಶಾಖೆಗಳಿವೆ. ಭಾರತದಲ್ಲಿ 16 ಕಚೇರಿಗಳಿದ್ದು, 5,000 ಗ್ರಾಹಕರಿದ್ದಾರೆ. ಅಟೋ ಮೊಬೈಲ್ಸ್ ಉತ್ಪನ್ನಗಳಾದ ಬೇರಿಂಗ್, ಕೇಬಲ್, ಪ್ಯಾಕೇಜಿಂಗ್ ಉತ್ಪನ್ನಗಳನ್ನು ತಯಾರಿಸುತ್ತಿದೆ. ಸದ್ಯಕ್ಕೆ ಸುಮಾರು 145 ನೂತನ ಉತ್ಪನ್ನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಬೇಕೆಂದು ಚಿಂತಿಸಿದ್ದೇವೆ ಎಂದರು. ಐಗಸ್ ಆಡಳಿತ ನಿರ್ದೇಶಕ ಆಂಟೋನಿ ಪಿ. ಕುರಿಯನ್ ಮಾತನಾಡಿ, ಐಗಸ್ ಕಂಪನಿ ಉತ್ಪಾದಿಸಿರುವ ಕೇಬಲ್ ವೈರ್‌ಗಳಿಂದ ಚಂದ್ರಯಾನ ಉಪಗ್ರಹಗಳು ಕಾರ್ಯನಿರ್ವಹಿಸುತ್ತಿವೆ. ಬಹುದೊಡ್ಡ ಕಂಪನಿಗಳಿಗೆ ಬೇಕಾಗುವ ಉತ್ಪನ್ನಗಳನ್ನು ನಮ್ಮ ಕಂಪನಿ ಉತ್ಪಾದಿಸುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಐಗಸ್ ಕೈಗಾರಿಕ ನಿರ್ವಹಣೆ ಮುಖ್ಯಸ್ಥ ಮಾರ್ಕೋಸ್ ಪಾಲ್ಗೊಂಡಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.