ಕೆನರಾ ಬ್ಯಾಂಕ್ನಿಂದ ಇ- ಲಾಂಜ್ ವ್ಯವಸ್ಥೆ
ಬೆಂಗಳೂರು: ಕೆನರಾ ಬ್ಯಾಂಕ್ ಇ- ಲಾಂಜ್ ವ್ಯವಸ್ಥೆಯನ್ನು ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ. ನೂತನ ಟೆಕ್ನಾಲಜಿಯಿಂದ ಕೂಡಿದ ಈ ವ್ಯವಸ್ಥೆ ಜ.26ರಿಂದಲೇ ಕಾರ್ಯಾರಂಭಗೊಂಡಿದೆ. ಇದು ಹಣ ಸಂದಾಯ ಮತ್ತು ಪಡೆಯುವಿಕೆ, ಚೆಕ್ ಡೆಪಾಸಿಟ್ಸ್, ಪಾಸ್ಬುಕ್ ಪ್ರಿಂಟಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಆನ್ಲೈನ್ ಟ್ರೇಡಿಂಗ್ ಮುಂತಾದ ಇದೇ ರೀತಿಯಲ್ಲಿ ಇ- ಲಾಂಜ್ ವ್ಯವಸ್ಥೆ ಕೂಡ ಬ್ಯಾಂಕ್ನ ಒಂದು ಭಾಗವಾಗಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಆರ್.ಕೆ. ದುಬೆ ತಿಳಿಸಿದರು. ಇ- ಲಾಂಜ್ ಬಳಕೆ ಮಾಡುವ ಬಗ್ಗೆ ಬ್ಯಾಂಕಿನ ಸಿಬ್ಬಂದಿಗಳಿಗೆ ತಿಳಿಸಿಕೊಟ್ಟ ಅವರು, ಸೇವೆಗಾಗಿ ಉನ್ನತಿ, ಉನ್ನತಿಗಾಗಿ ಸೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯ ನಿರ್ವಹಿಸಬೇಕಿದೆ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಕರೆ ನೀಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.