ಚಿಕಿತ್ಸೆಗೆ ಸಹಾಯ ಧನ ಕೋರಿಕೆ
ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಶಿವಮೊಗ್ಗದ ಕೆ. ಸುರೇಶ್ ಅವರು ಚಿಕಿತ್ಸೆಗೆ ದಾನಿಗಳಿಂದ ಸಹಾಯ ಧನ ಕೋರಿದ್ದಾರೆ. ಸುರೇಶ್ ಅವರು ಕೃಷಿಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಮಣಿಪಾಲ್ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದಾಗ ಹೃದಯದ ವಾಲ್ವ್ ಬದಲಾಯಿಸಬೇಕು ಎಂದು ವೈದ್ಯರು ಹೇಳಿದರು. ಚಿಕಿತ್ಸೆಗೆ ಅವರು ಸಹಕಾರಿ ಬ್ಯಾಂಕ್ಗಳಿಂದ ಹಣ ಪಡೆದಿದ್ದಾರೆ. ಆದರೆ, ಮತ್ತಷ್ಟು ಹಣ ಬೇಕಾಗಿರುವುದರಿಂದ ಸಾರ್ವಜನಿಕರಿಂದ ಧನ ಸಹಾಯ ಕೋರಿದ್ದಾರೆ.
ಬ್ಯಾಂಕ್ ಖಾತೆ ವಿವರ: ಕರ್ನಾಟಕ ಬ್ಯಾಂಕ್, ಸಾಗರ ಶಾಖೆ, ಶಿವಮೊಗ್ಗ ಜಿಲ್ಲೆ, ಖಾತೆ ಸಂಖ್ಯೆ- 7122500102327701, ವಿಳಾಸ- ಕೆ. ಸುರೇಶ್, ಸಾಲೆಕೊಪ್ಪ, ಸಸರವಳ್ಳಿ ಅಂಚೆ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ.
ಕೆಪಿಎಸ್ಸಿ ನೇಮಕ ಪಟ್ಟಿ ಸಲ್ಲಿಸಲು ಸೂಚನೆ
ಬೆಂಗಳೂರು: ಕೆಪಿಎಸ್ಸಿ ಪರೀಕ್ಷೆ ಮೂಲಕ ನಾನಾ ಹುದ್ದೆಗಳಿಗೆ ಅಕ್ರಮವಾಗಿ ನೇಮಕವಾಗಿರುವ ಅಧಿಕಾರಿಗಳ ಪಟ್ಟಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಳೆದ 1998, 1999 ಹಾಗೂ 2004ರ ಕೆಪಿಎಸ್ಸಿ ಪರೀಕ್ಷೆಯಲ್ಲಿ ನಡೆದ ಅಕ್ರಮ ನೇಮಕಾತಿ ಬಗ್ಗೆ ಸಿಐಡಿಯು ತನಿಖೆ ನಡೆಸಿ ವರದಿ ನೀಡಿತ್ತು. ಆದರೆ ಅಕ್ರಮ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರಲಿಲ್ಲ. ಈ ಬಗ್ಗೆ ಮಾಹಿತಿ ಕೋರಿರುವ ಹೈಕೋರ್ಟ್, ಮುಂದಿನ ವಿಚಾರಣೆಗೆ ಎಲ್ಲ ಅಕ್ರಮ ಫಲಾನುಭವಿಗಳ ಪಟ್ಟಿಯನ್ನು ಸಲ್ಲಿಸುವಂತೆ ತಿಳಿಸಿದೆ. ಅರ್ಜಿದಾರರು ಕೋರ್ಟ್ಗೆ ಸುಮಾರು 39 ಅಕ್ರಮ ಫಲಾನುಭವಿಗಳ ಪಟ್ಟಿಯನ್ನು ನೀಡಿದ್ದು, ಇದನ್ನು ಪರಿಶೀಲಿಸುವಂತೆಯೂ ಸರ್ಕಾರಕ್ಕೆ ಕೋರ್ಟ್ ತಿಳಿಸಿದೆ.
ಬೆಂಗಳೂರು ವ್ಯಕ್ತಿ ನೇಣಿಗೆ ಶರಣು
ಚಿಂತಾಮಣಿ: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ಬೆಂಗಳೂರಿನ ಬಿಟಿಎಂ ಲೇಔಟ್ನ ಕೆ. ವಿಜಯ್ ಅಲಿಯಾಸ್ ಕೃಷ್ಣಾರೆಡ್ಡಿ (26) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಈತ ನಗರದ ಕೆ.ಎಂ.ಡಿ ವಸತಿ ಗೃಹದಲ್ಲಿ ಸೋಮವಾರ ಬೆಳಗ್ಗೆ ರೂಮ್ ಪಡೆದಿದ್ದ. ಬೆಳಗ್ಗೆ ತಿಂಡಿ ತಿಂದು ನಂತರ ಸಂಜೆ ವೇಳೆಗೆ ನೇಣಿಗೆ ಶರಣಾಗಿರಬಹುದು ಎಂದು ಕೆ.ಎಂ.ಡಿ ವಸತಿ ಗೃಹದ ವ್ಯವಸ್ಥಾಪಕ ಮಹೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.