ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ನೀರು ಶುದ್ಧೀಕರಣಕ್ಕೆ ಒಡ್ಡು ಆಧಾರಿತ ಯೋಜನೆ

Parashurama
Updated On : 30 Jan 2013, 12:44 pm

ಬೆಂಗಳೂರು: ಕೊಳಚೆ ನೀರು ಶುದ್ಧೀಕರಣಕ್ಕೆ ಒಡ್ಡು ಆಧಾರಿತ ತಾತ್ಕಾಲಿಕ ಯೋಜನೆಯನ್ನು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪರಿಚಯಿಸಿದೆ. ಕೆ.ಆರ್. ಪುರದ ಕೊಳಚೆ ನೀರು ಶುದ್ಧೀಕರಣ ಘಟಕ(ಎಸ್‌ಟಿಪಿ)ದ ಪಕ್ಕದಲ್ಲಿರುವ ಮಳೆ ನೀರು ಕಾಲುವೆಯಲ್ಲಿ ಪ್ರಯೋಗಾರ್ಥವಾಗಿ ಈ ವ್ಯವಸ್ಥೆ ನಿರ್ಮಿಸಲಾಗಿದ್ದು ಈಗ ಇದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಮಂಗಳವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಶೀಲಿಸಿ ಶ್ಲಾಘಿಸಿತು.
ಮಳೆನೀರು ಕಾಲುವೆಗೆ ಅಡ್ಡವಾಗಿ ಕಾಂಕ್ರಿಟ್ ಒಡ್ಡು ನಿರ್ಮಿಸಿ, ಅಲ್ಲಿ ನಿಲ್ಲುವ ನೀರನ್ನು ಕೊಳವೆಯ ಮೂಲಕ ಕೊಳಚೆನೀರು ಶುದ್ಧೀಕರಣ ಘಟಕದ ಗುಂಡಿಗೆ ಹಾಯಿಸಲಾಗುತ್ತದೆ. ಹೀಗೆ ಬರುವ ನೀರನ್ನು ಪಂಪ್‌ಮೂಲಕ ಮೇಲೆತ್ತಿ ಶುದ್ಧೀಕರಣಗೊಂಡ ಘಟಕಕ್ಕೆ ತುಂಬಿ ಅಲ್ಲಿ ಈ ನೀರು ಶುದ್ಧೀಕರಣಗೊಂಡು ಕೆಲವೇ ಅಡಿ ದೂರದಲ್ಲಿರುವ ಮತ್ತೊಂದು ಕಾಲುವೆಯ ಮೂಲಕ ಮತ್ತೆ ಮಳೆನೀರು ಕಾಲುವೆಗೆ ಬಿಡಲಾಗುವುದು. ಇದರಿಂದ ಕೊಳಚೆ ನೀರು ಕೆರೆ ತಲುಪುವುದನ್ನು ತಡೆಯಬಹುದು.
ನಗರದಲ್ಲಿ ಇರುವ 14 ಕೊಳಚೆ ನೀರು ಶುದ್ಧೀಕರಣ ಘಟಕಗಳಲ್ಲಿ ಬಹುಪಾಲು ಮಳೆ ನೀರು ಕಾಲುವೆಯ ಪಕ್ಕದಲ್ಲಿಯೇ ಇದೆ. ಈ ಕಾಲುವೆಗಳಲ್ಲಿ ಮಳೆ ನೀರಿಗಿಂತ ಹೆಚ್ಚಾಗಿ ಚರಂಡಿ ನೀರೇ ಹೆಚ್ಚಾಗಿ ಹರಿಯುತ್ತಿದ್ದು ಇವುಗಳು ನೇರವಾಗಿ ಕೆರೆ ತಲುಪುತ್ತವೆ. ಆದ್ದರಿಂದ ಕಡಿಮೆ ವೆಚ್ಚದಲ್ಲಿ ಈ ನೂತನ ಯೋಜನೆ ನಿರ್ಮಿಸಲಾಗಿದೆ.
ನಾಗಸಂದ್ರ, ವೃಷಭಾವತಿ ಕಣಿವೆ, ರಾಜ ಕಾಲುವೆ ಎಸ್‌ಟಿಪಿಗಳಿಗೆ ಹೊಂದಿಕೊಂಡು ಇರುವ 16 ಸ್ಥಳಗಳಲ್ಲಿ ಈ ವ್ಯವಸ್ಥೆ ಅಳವಡಿಸಬಹುದು. ಈ ಮೂಲಕ ಪ್ರತಿದಿನ ಹೆಚ್ಚುವರಿಯಾಗಿ 101ದಶಲಕ್ಷ ಲೀಟರ್(ಎಂಎಲ್‌ಡಿ) ನೀರು ಶುದ್ಧಗೊಳ್ಳುತ್ತದೆ.
ಕೆ.ಆರ್.ಪುರದ ಎಸ್‌ಟಿಪಿ ಶುದ್ಧೀಕರಣ ಸಾಮರ್ಥ್ಯ ದಿನಕ್ಕೆ 20 ದಶಲಕ್ಷ ಲೀಟರ್ (ಎಂಎಲ್‌ಡಿ) ಇದ್ದು, ಇದಕ್ಕೆ 95 ಸಾವಿರ ಖರ್ಚುಮಾಡಿ 7 ದಿನಗಳಲ್ಲಿ ಈ ಕಿರುಶುದ್ಧೀಕರಣ ಯೋಜನೆ ಜಾರಿ ಮಾಡಲಾಗುವುದು. ಮೊದಲು ಈ ಘಟಕ ದಿನಕ್ಕೆ ಕೇವಲ 5 ಎಂಎಲ್‌ಡಿ ನೀರನ್ನು ಮಾತ್ರ ಶುದ್ಧೀಕರಿಸುತ್ತಿತ್ತು. ಈಗ ಇದು 10ಎಂಎಲ್‌ಡಿಗೆ ಏರಿಕೆಯಾಗಿದೆ.
ನಗರದ ಒಟ್ಟೂ ಎಸ್‌ಟಿಪಿ ಘಟಕಗಳ ಸಾಮರ್ಥ್ಯ 721ಎಂಎಲ್‌ಡಿ. ಆದರೆ ಶುದ್ಧೀಕರಣ ಸಾಮರ್ಥ್ಯದ ಶೇ.40 ಕ್ಕಿಂತ ಕಡಿಮೆ ಅಂದರೆ ಈಗ ಕೇವಲ 406 ಎಂಎಲ್‌ಡಿ ನೀರನ್ನು ಮಾತ್ರ ಶುದ್ಧೀಕರಿಸಲಾಗುತ್ತಿದೆ.
ಈ ಒಡ್ಡು ನಿರ್ಮಾಣ ವಿಧಾನದಿಂದ 150 ರಿಂದ 200 ಎಂಎಲ್‌ಡಿ ನೀರನ್ನು ಶುದ್ಧೀಕರಿಸಬಹುದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಂದಾಜಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments