ಪ್ರಾಣಿ ವಧೆ ಇಂದು ನಿಷೇಧ
ಬೆಂಗಳೂರು: ಸರ್ವೋದಯ ದಿನ ಅಂಗವಾಗಿ ನಗರದಲ್ಲಿ ಜ.30ರಂದು ಪ್ರಾಣಿ ವಧೆ ನಿಷೇಧಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ಮಾಡಿದರೆ, ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಪಾಲಿಕೆ ಪಶುಸಂಗೋಪನಾ ವಿಭಾಗ ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ
ಬೆಂಗಳೂರು ಉಪ್ಪಾರ ಬಳಗ ಟ್ರಸ್ಟ್ ವತಿಯಿಂದ ಕೋರಮಂಗಲದಲ್ಲಿ ನಿರ್ಮಿಸಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಪ್ರಸಕ್ತ ಸಾಲಿಗೆ ಉಪ್ಪಾರ ಜನಾಂಗವು ಸೇರಿ ಉಳಿದೆಲ್ಲಾ ಹಿಂದುಳಿದ ಜನಾಂಗಕ್ಕೆ ಸೇರಿದ ಮೆಟ್ರಿಕ್ ನಂತರದ ಬಡ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೆಲವೇ ಸೀಟುಗಳು ಖಾಲಿ ಇದ್ದು ಪ್ರವೇಶ ಬಯಸುವವರು ಹಾಸ್ಟೆಲ್ ಮ್ಯಾನೇಜರ್ನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ. ಆಸಕ್ತರು ಫೆ.20ರೊಳಗಾಗಿ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ- ಭೀಮಚಂದ್ರ ಕಲಾ ಮಂಟಪ, (ಸಮುದಾಯ ಭವನ) ಮತ್ತು ವಿದ್ಯಾರ್ಥಿ ನಿಲಯ, 2ನೇ ಅಡ್ಡರಸ್ತೆ, 7ನೇ ಬ್ಲಾಕ್, ಕೋರಮಂಗಲ, ಬೆಂ- 95. 25716784, 9243788821.
ಜೈಲಿನ ಸುಧಾರಣೆ ಕೋರಿ ಪಿಐಎಲ್
ರಾಜ್ಯದಲ್ಲಿನ ಜೈಲುಗಳ ಸುಧಾರಣೆ ಕೋರಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ವಿಭಾಗೀಯ ಪೀಠವು ಕೇಂದ್ರ, ರಾಜ್ಯ ಸರ್ಕಾರ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ. ರಾಜ್ಯದ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳೇ ಹೆಚ್ಚಿದ್ದಾರೆ. ಆದರೆ ಜೈಲಿನಲ್ಲಿ ಯಾವುದೇ ಮೂಲ ಸೌಕರ್ಯಗಳನ್ನು ನೀಡಲಾಗುತ್ತಿಲ್ಲ. ವಿಐಪಿ ಕೈದಿಗಳಿಗೆ ಮಾತ್ರ ವಿಶೇಷ ಸವಲತ್ತು ನೀಡಲಾಗುತ್ತಿದ್ದು, ಸಾಮಾನ್ಯ ಕೈದಿಗಳಿಗೆ ಕನಿಷ್ಠ ಸೌಲಭ್ಯವನ್ನು ಕೊಡುತ್ತಿಲ್ಲ. ಮತ್ತೊಂದೆಡೆ ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಹೆಚ್ಚಿದ್ದು ಅದಕ್ಕೆ ತಕ್ಕ ಸೌಲಭ್ಯಗಳಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅರ್ಜಿ ಕುರಿತಂತೆ ಉತ್ತರ ನೀಡುವಂತೆ ಪ್ರತಿವಾದಿಗಳಿಗೆ ಹೈಕೋರ್ಟ್ ಸೂಚಿಸಿದೆ.
ಕ್ಯಾಂಪ್ ಔಟ್ ಸಂಗೀತ ಹಬ್ಬ
ಸ್ಟಾರ್ಮ್ ವತಿಯಿಂದ ರಾಜ್ಯದ ಕೂರ್ಗ್ನಲ್ಲಿ ಮೊದಲ ಕ್ಯಾಂಪ್ ಔಟ್ ಸಂಗೀತ ಹಬ್ಬವನ್ನು ಆಯೋಜಿಸಲಿದೆ. 2013ರ ಸ್ಟಾರ್ಮ್ 45ಕ್ಕೂ ಹೆಚ್ಚು ಕಲಾವಿದರನ್ನು, ದೇಶದಿಂದ ಮತ್ತು ವಿಶ್ವದಾದ್ಯಂತ ದೊಡ್ಡ ಮತ್ತು ಹೆಸರಾಂತ ಬ್ಯಾಂಡ್ಗಳನ್ನು, ಹಾಡುಗಾರರು- ಗೀತರಚನಾಕಾರರು ಹಾಗೆಯೇ ಎಲೆಕ್ಟ್ರಾನಿಕ್ ಕಲಾವಿದರನ್ನು 4 ಅತ್ಯದ್ಬುತ ವೇದಿಕೆಗಳಲ್ಲಿ ಒಂದುಗೂಡಿಸಲಿದೆ. ಹಬ್ಬವು ನೋ ಡ್ರಗ್ ನಿಯಮವನ್ನು ಬಲವಾಗಿ ಎತ್ತಿ ಹಿಡಿಯಲಿದೆ. ಹಬ್ಬದಲ್ಲಿ ನಿರ್ದೇಶಕ ಲಾವಿನ್ ಉತ್ತಪ್ಪ ಮತ್ತು ಸಚಿನ್ ಬೋಪಣ್ಣ ಅವರುಗಳ ಅನೇಕ ಮನದಿಂಗಿತಗಳು ಅನಾವರಣಗೊಳ್ಳಲಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.