ಸಿಂಡಿಕೇಟ್ ಬ್ಯಾಂಕ್ಗೆ ಲಾಭ
ಬೆಂಗಳೂರು: ಸಿಂಡಿಕೇಟ್ ಬ್ಯಾಂಕ್ 2012ನೇ ಸಾಲಿನ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದ್ದು, ಈ ಬಾರಿ 3,00,723 ಕೋಟಿ ಜಾಗತಿಕ ವಹಿವಾಟು ನಡೆಸಿದೆ. 1412 ನಿವ್ವಳ ಲಾಭ ಗಳಿಸಿದ್ದು, ಲಾಭದ ಮಟ್ಟ ಕಳೆದ 9 ತಿಂಗಳಲ್ಲಿ ಶೇ.41ರಷ್ಟು ವೃದ್ಧಿಸಿದೆ. ಬಡ್ಡಿ ಆದಾಯದಿಂದ ನಿವ್ವಳ 4109 ಕೋಟಿ ಲಾಭ ಹಾಗೂ ಜಾಗತಿಕ ಠೇವಣಿ ಹೂಡಿಕೆ 1,64,075 ಸಂಗ್ರಹಣೆಯಾಗಿದ್ದು, ಶೇ.14.64ರಷ್ಟು ವೃದ್ಧಿಗೊಂಡಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಂ.ಜಿ. ಸಾಂಘ್ವಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ದೇಶೀಯ ವ್ಯವಹಾರದಿಂದ 2,67,070 ಕೋಟಿ ಲಾಭಗಳಿಸಿದೆ. ಲಂಡನ್ನಲ್ಲಿರುವ ಬ್ಯಾಂಕಿನ ಶಾಖೆ 22,136 ಕೋಟಿ ವಹಿವಾಟು ನಡೆಸಿದ್ದು, ಶೇ. 52.04 ಲಾಭಗಳಿಸಿದೆ. ಬ್ಯಾಂಕ್ 756 ಶಾಖೆಗಳನ್ನು ಹೊಂದಿದ್ದು, ಗ್ರಾಮೀಣ ವಿಭಾಗದಲ್ಲಿ ಹೆಚ್ಚಿನ ಶಾಖೆಗಳು ತೆರೆದಿರುವ ಬ್ಯಾಂಕ್ ಎಂಬ ಖ್ಯಾತಿಗೂ ಪಾತ್ರವಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.