ಲೇಖನ ಆಹ್ವಾನ
ಚರಕ ಅಭಿವೃದ್ಧಿ ಪತ್ರಿಕೋದ್ಯಮ ಸಂಸ್ಥೆ 'ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ-2012'ಗೆ ಲೇಖನಗಳನ್ನು ಆಹ್ವಾನಿಸಿದೆ. ಕನ್ನಡ ದಿನಪತ್ರಿಕೆ ಮತ್ತು ಪತ್ರಿಕೆಗಳ ಪುರವಣಿಗಳಲ್ಲಿ ಪ್ರಕಟವಾದ ಲೇಖನ, ನುಡಿಚಿತ್ರಗಳನ್ನು ಕಳುಹಿಸಬಹುದು. ವಾರಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನ ಪರಿಗಣಿಸುವುದಿಲ್ಲ. ಮಹಿಳೆ, ನೈರ್ಮಲ್ಯ, ಮಕ್ಕಳ ಹಕ್ಕುಗಳು, ಅಂಗವೈಕಲ್ಯ, ಎಚ್ಐವಿ, ಏಡ್ಸ್, ನೀರು, ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಸಾಮಾನ್ಯ ವಿಷಯಗಳಿಗೆ ಸಂಬಂಧಿಸಿದಂತೆ ಆಳವಾದ ಚಿಂತನೆ, ಜನಪರ ಕಾಳಜಿಯುಳ್ಳ ಲೇಖನ ಹಾಗೂ ನುಡಿಚಿತ್ರಗಳಿಗೆ ಹಿರಿಯ ಮತ್ತು ತಜ್ಞರನ್ನೊಳಗೊಂಡ ನಿರ್ಣಾಯಕ ಸಮಿತಿ ಪ್ರಶಸ್ತಿಗಳನ್ನು ನಿರ್ಧರಿಸಲಿದೆ. ಪ್ರವೇಶ ಪತ್ರದೊಂದಿಗೆ ಲೇಖನ ಹಾಗೂ ನುಡಿಚಿತ್ರಗಳನ್ನು ಮಾ.31ರೊಳಗೆ ಕಳುಹಿಸಬಹುದು. ಮಾಹಿತಿಗೆ-8762486467
ವೃದ್ಧಾಶ್ರಮ ಸಂಪರ್ಕಿಸಿ
ವಿಜಯನಗರದ ಹೊಸಹಳ್ಳಿಯಲ್ಲಿರುವ ಶಿರಡಿ ಸಾಯಿ ಸೇವಾ ಟ್ರಸ್ಟ್ ಶ್ರೀ ಸಾಯಿ ನೆಮ್ಮದಿಯ ಮನೆ ವೃದ್ಧಾಶ್ರಮ ನಡೆಸುತ್ತಿದ್ದು, ಅವಶ್ಯವಿದ್ದಲ್ಲಿ ವೃದ್ಧರು ಆಶ್ರಯಿಸಬಹುದು. ಮಾಹಿತಿಗೆ- 7760532744.
ಪ್ರೇಯಸಿ ಕೊಲೆ
ಆನೇಕಲ್: ಪ್ರೇಮಿಸಿ ವಿವಾಹವಾಗುವುದಾಗಿ ನಂಬಿಸಿ ನಂತರದ ದಿನಗಳಲ್ಲಿ ಅಪನಂಬಿಕೆಯಿಂದ ವರ್ತಿಸಿ ಪ್ರೇಯಸಿಗೆ ವಿಷವಿಟ್ಟು ಕೊಂದ ಘಟನೆ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಬೊಮ್ಮಸಂದ್ರದಲ್ಲಿ ನಡೆದಿದೆ. ಸಾವು ಬದುಕಿನ ನಡುವೆ 3 ದಿನಗಳ ಕಾಲ ಹೋರಾಟ ಮಾಡಿ ಸಾವನ್ನಪ್ಪಿದ ನತದೃಷ್ಟೆ ಮಂಜುಳಾ(24). ಪ್ರಿಯತಮ ಮಹೇಂದ್ರ ವಿಷವುಣಿಸಿ ತಲೆ ಮರೆಸಿಕೊಂಡ ವ್ಯಕ್ತಿ. ಎಲ್ಎಲ್ಬಿ ವ್ಯಾಸಂಗ ಮಾಡುತ್ತಿರುವ ಮಂಜುಳಾ ಮಹೇಂದ್ರನನ್ನು ಪ್ರೀತಿಸುತ್ತಿದ್ದಳು. ಇಬ್ಬರ ಮದುವೆಗೆ ಎರಡೂ ಕುಟುಂಬದ ಹಿರಿಯರು ಹಸಿರು ನಿಶಾನೆ ನೀಡಿದ್ದರು. ಕೆಲ ದಿನಗಳ ನಂತರ ಮಹೇಂದ್ರ ಆಕೆಯನ್ನು ದೂರ ಮಾಡುವ ಪ್ರಯತ್ನ ಮಾಡಿದ. ಇದರಿಂದ ಮಂಜುಳಾ ಶೀಘ್ರ ಮದುವೆಗಾಗಿ ಒತ್ತಾಯಿಸಿದಳು. ಮನೆಗೆ ಕರೆಸಿಕೊಂಡ ಮಹೇಂದ್ರ ತಂದೆ ಹಾಗೂ ತಮ್ಮನ ಜೊತೆ ಸೇರಿ ತಂಪು ಪಾನೀಯದಲ್ಲಿ ವಿಷ ಬೆರೆಸಿ ಕುಡಿಸಿದ್ದು ಆಕೆ ಅಸ್ವಸ್ಥಳಾದ ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹೇಂದ್ರ ಹಾಗೂ ಕುಟುಂಬದವರು ತಲೆ ಮರೆಸಿಕೊಂಡಿದ್ದು ಮಂಜುಳಾ ತಾಯಿ ಸಿದ್ದಗಂಗಮ್ಮ ಮಗಳ ಸಾವಿಗೆ ಮಹೇಂದ್ರ ಮತ್ತು ಕುಟುಬಂದವರು ಕಾರಣ ಎಂದು ಆರೋಪಿಸಿದ್ದಾರೆ. ದೂರು ದಾಖಲಿಸಿಕೊಂಡ ಪಿಎಸ್ಸೈ ಶಶಿಧರ್ ಮತ್ತು ತಂಡ ಸಂಜೆ ಮಹೇಂದ್ರ ಮತ್ತು ಆತನ ತಮ್ಮ ಮಧುವನ್ನು ಬಂಧಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.