ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಬಿಡಿಎ ವಿರುದ್ಧ ನ್ಯಾಯಾಂಗ ನಿಂದನೆ ದಾಖಲಿಸಬಾರದೇಕೆ?

Parashurama
Updated On : 20 Mar 2013, 1:57 am

ಕನ್ನಡಪ್ರಭ ವಾರ್ತೆ, ಬೆಂಗಳೂರು, ಮಾ.19-
ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಬಿಡಿಎ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿ, ದೊಡ್ಡ ಮೊತ್ತದ ದಂಡ ವಿಧಿಸಬಾರದೇಕೆ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ನಂದಿನಿ ಲೇಔಟ್‌ನ ದಾಕ್ಷಾಯಿಣಿ ಎಂಬ ಮಹಿಳೆಗೆ ಪರ್ಯಾಯ ನಿವೇಶನ ಕಲ್ಪಿಸುವಂತೆ ಆದೇಶಿಸಿದ್ದರೂ, ಅದನ್ನು ಪಾಲಿಸದ ಬಿಡಿಎಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ನ್ಯಾ. ರಾಮಮೋಹನ ರೆಡ್ಡಿ ಅವರಿದ್ದ ಏಕಸದಸ್ಯ ಪೀಠ, ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂಬ ಎಚ್ಚರಿಕೆ ನೀಡಿದೆ.
ನಂದಿನಿ ಬಡಾವಣೆಯಲ್ಲಿ 2004ರಲ್ಲಿ ದೇವರಾಜು ಎಂಬವರಿಂದ ದಾಕ್ಷಾಯಿಣಿ ಎಂಬವರು ನಿವೇಶನ ಖರೀದಿಸಿದ್ದರು. ನಂತರ ಬಿಡಿಎ ಅದನ್ನು ಯಾವುದೇ ನೋಟಿಸ್ ನೀಡಿದೆ ವಶಪಡಿಸಿಕೊಂಡಿತ್ತು. ಇದನ್ನು ದಾಕ್ಷಾಯಿಣಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ಏಕಸದಸ್ಯ ಪೀಠ, 8 ವಾರದಲ್ಲಿ ಅರ್ಜಿದಾರರಿಗೆ ಪರ್ಯಾಯ ನಿವೇಶನ ನೀಡುವಂತೆ ಆದೇಶಿಸಿತ್ತು.
ಮೂರು ಬಾರಿ ಆದೇಶ ನೀಡಿದರೂ ಬಿಡಿಎ ಬದಲಿ ನಿವೇಶನ ನೀಡಿರಲಿಲ್ಲ. ಈ ನಡುವೆ, ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಪದೇ ಪದೇ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಬಿಡಿಎ ಕೊನೆಗೂ ಬದಲಿ ನಿವೇಶನ ಒದಗಿಸುವುದಾಗಿ ಒಪ್ಪಿಕೊಂಡಿತ್ತು. ಅದರಂತೆ ಬದಲಿ ನಿವೇಶನ ಒದಗಿಸಿತ್ತಾದರೂ, ಅದರ ಎದುರು ಕಾಂಪೌಂಡ್ ಇದ್ದು, ಒಳಪ್ರವೇಶಿಸಲು ದಾರಿಯೇ ಇರಲಿಲ್ಲ. ಇದನ್ನು ಅರ್ಜಿದಾರರು ಮತ್ತೊಮ್ಮೆ ಪ್ರಶ್ನಿಸಿದ್ದರು. ಇದನ್ನು ಅರಿತ ಪೀಠ, ಪ್ರಕರಣದ ತನಿಖೆ ನಡೆಸಲು ಕೋರ್ಟ್ ಕಮಿಷನರ್ ಅನ್ನು ನೇಮಕ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬಿಡಿಎ ಕಚೇರಿಗೆ ಹೋದ ಕೋರ್ಟ್ ಕಮಿಷನರ್‌ಗೆ ಬಿಡಿಎ ಆಯುಕ್ತರು ಸೂಕ್ತ ಪ್ರತಿಕ್ರಿಯೆ ನೀಡಿರಲಿಲ್ಲ. ಇದಕ್ಕೆ ಪೀಠ ಬಿಡಿಎಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments