ಏ.14ರಿಂದ ಬೇಸಿಗೆ ರಜೆಯ ಶಿಕ್ಷಣ
ಬೆಂಗಳೂರು: ಅಖಿಲ ಕರ್ನಾಟಕ ಮಕ್ಕಳ ಕೂಟ 47ನೇ ಮಕ್ಕಳ ಬೇಸಿಗೆ ರಜೆಯ ಶಿಕ್ಷಣ ಹಾಗೂ ಮನರಂಜನಾ ಶಿಬಿರವನ್ನು ಏ.14ರಿಂದ ಮೇ 15ರವರೆಗೆ ನಡೆಸಲಿದೆ. 7ರಿಂದ 14ವರ್ಷದೊಳಗಿನ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಆಸಕ್ತರು ಶಿಬಿರದ ಅರ್ಜಿ ಗಳನ್ನು ಮಾ.22ರಿಂದ ಕೂಟದ ಕಚೇರಿಯಲ್ಲಿ ಪಡೆಯಬಹುದು. ಮಾಹಿತಿಗೆ- 26706109.
ಸದ್ಭಾವನಾ ಪ್ರಶಸ್ತಿಗೆ ಅರ್ಜಿ ಆಹ್ವಾನ
ವಿಶ್ವ ವೀರಶೈವ ಸಂಸ್ಕೃತಿ ಪ್ರತಿಷ್ಠಾನ ವತಿಯಿಂದ ಬಸವ ಜಯಂತಿ ಕಾರ್ಯಕ್ರಮ ಆಯೋಜಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಜಗಜ್ಯೋತಿ ಶ್ರೀಬಸವೇಶ್ವರ ಸದ್ಭಾವನಾ ಪ್ರಶಸ್ತಿ/ ಜಗಜ್ಯೋತಿ ಶ್ರೀಬಸವೇಶ್ವರ ಕಾಯಕ ಶ್ರೀ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ. ಶಿಕ್ಷಣ ನೃತ್ಯ, ಸಂಗೀತ, ಸಂಸ್ಕೃತಿ, ಕೃಷಿ, ಕೈಗಾರಿಕೆ, ಕಾನೂನು, ಪರಿಸರ, ಸಮಾಜಸೇವೆ, ಸಂಶೋಧನೆ, ಕುಸ್ತಿಪಟು, ವೈದ್ಯಕೀಯ ಸೇವೆ, ಉದ್ಯಮ, ಕ್ರೀಡೆ, ರಂಗಭೂಮಿ, ಚಲನಚಿತ್ರ, ಕಿರುತೆರೆ, ಆಡಳಿತ, ಪತ್ರಿಕೋದ್ಯಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪೊಲೀಸ್ ಸೇವೆ, ಗುಡಿ ಕೈಗಾರಿಕೆ, ನಾಡು-ನುಡಿ, ಜನಪರ ಹೋರಾಟ, ಉದ್ಯೋಗ ಸೃಷ್ಟಿ, ಕೋಮು ಸಾಮರಸ್ಯ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರು ಹಾಗೂ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ತಮ್ಮ ವಿವರಗಳನ್ನು ಮಾ.31ರೊಳಗೆ ಪ್ರತಿಷ್ಠಾನಕ್ಕೆ ಕಳುಹಿಸಲು ಕೋರಿದೆ. 9844890333, 9964000890.
ಕೆಪಿಎಸ್ಸಿ ಪಟ್ಟಿ ಪ್ರಕಟ
ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನರ್ಸ್ 2011ನೇ ಸಾಲಿನ 362 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವ್ಯಕ್ತಿತ್ವ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಆಯೋಗದ ವೆಬ್ಸೈಟ್ http://kpsc.kar.nic.inನಲ್ಲಿ ಪ್ರಕಟಿಸಿದೆ. ವ್ಯಕ್ತಿತ್ವ ಪರೀಕ್ಷೆಯನ್ನು ಏ.1ರಿಂದ 24ರವರೆಗೆ ನಡೆಸಲಿದ್ದು, ವ್ಯಕ್ತಿತ್ವ ಪರೀಕ್ಷೆಯ ಪತ್ರವನ್ನು ಅಭ್ಯರ್ಥಿಗಳಿಗೆ ರವಾನಿಸಲಾಗುತ್ತಿದೆ.
ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಮುಕ್ತ ಸಂಜೀವಿನಿ ವಿದ್ಯಾರ್ಥಿ ವೇತನಕ್ಕೆ ಆಸಕ್ತ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 2011-12ನೇ ಸಾಲಿನಲ್ಲಿ ಬಿ.ಎ, ಬಿ.ಕಾಂ, ಎಂ.ಎ/ಎಂ.ಕಾಂ, ಮತ್ತು ಸ್ಪೆಷಲ್ ಬಿ.ಎಡ್ ತರಗತಿಗಳಲ್ಲಿ ಮೊದಲನೇ ಪ್ರಯತ್ನದಲ್ಲಿ ಎಲ್ಲಾ ವಿಷಯಗಳಲ್ಲಿ ತೇರ್ಗಡೆ ಹೊಂದಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಉಪಕುಲಸಚಿವರು ಕರಾಮುವಿ, ಮುಕ್ತಗಂಗೋತ್ರಿ, ಮೈಸೂರು. ಏ.6ರೊಳಗಾಗಾಗಿ ಕಳುಹಿಸಲು ಪ್ರಕಟಣೆ ಕೋರಿದೆ. ವಿವರಗಳಿಗೆ- 26681320.
ಪ್ರೊ. ಲಕ್ಷ್ಮೀನರಸಿಂಹಯ್ಯಗೆ ಪಿಎಚ್.ಡಿ
ಬೆಂಗಳೂರು: ಹೊಸೂರು ಆದಿಯಮಾನ್ ಕಾಲೇಜ್ ಆಫ್ ಇಂಜಿನಿಯರಿಂಗ್ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ, ಪ್ರಾಧ್ಯಾಪಕ ಪ್ರೊ.ಎನ್.ಲಕ್ಷ್ಮೀನರಸಿಂಹಯ್ಯ ಅವರು ಮಂಡಿಸಿದ 'ಇಂಟಿಗ್ರೇಟೆಡ್ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್', ಎ ಕೇಸ್ ಸ್ಟಡೀ ಆನ್ ಹೊಸೂರ್ ತಮಿಳುನಾಡು, ಇಂಡಿಯಾ, ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಅಣ್ಣಾ ಯೂನಿವರ್ಸಿಟಿ ಚೆನೈಯು ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ. ಈ ಮಹಾಪ್ರಬಂಧವನ್ನು ಗೌರ್ನಮಂಟ್ ಕಾಲೇಜು ಆಫ್ ಟೆಕ್ನಾಲಜಿ, ಕೊಯಂಬತ್ತೂರು, ಇಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಡಾ.ಟಿ. ಮಿನಾಂಬಾಲ್ ಅವರು ಮಾರ್ಗದರ್ಶಕರಾಗಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.