ಕೊನೆಗೂ ಅಂಕಮಿತಿ ಪ್ರಕಟಿಸಿದ ಕೆಪಿಎಸ್ಸಿ
ಬೆಂಗಳೂರು: ಅಂಕ ಮಿತಿ ನಿಗದಿಪಡಿಸದೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಕೊನೆಗೂ ಎಚ್ಚೆತ್ತುಕೊಂಡು ಅಂಕಮಿತಿ ಪ್ರಕಟಿಸಿದೆ.
ಎ ಮತ್ತು ಬಿ ಸಮೂಹದ ಗೆಜೆಟೆಡ್ ಪ್ರೊಬೆಷನರ್ಸ್ 362 ಹುದ್ದೆಗಳಿಗೆ ಕರೆದಿದ್ದ ಮೇನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಹಾಜರಾಗುವ ಸಲುವಾಗಿ ಮೀಸಲಾತಿ ಹಾಗೂ ಜನ್ಮದಿನಾಂಕಕ್ಕೆ ಅನುಗುಣವಾಗಿ ಅಂಕಮಿತಿ(ಕಟಾಫ್ ಮಾರ್ಕ್ಸ್)ಯನ್ನು ಕೆಪಿಎಸ್ಸಿ ಸೋಮವಾರ ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದೆ.
ಕೆಲ ದಿನಗಳ ಹಿಂದೆ 1 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳಿಗೆ ಏ.1 ರಿಂದ 24ರ ಅವಧಿಯಲ್ಲಿ ನಿಗದಿತ ದಿನ ಹಾಗೂ ಸಮಯಕ್ಕೆ ಸರಿಯಾಗಿ ಸಂದರ್ಶನಕ್ಕೆ ಬರುವಂತೆ ಕೆಪಿಎಸ್ಸಿ ಆಹ್ವಾನಿಸಿತ್ತು. ಹೀಗೆ ಅಂಕಮಿತಿ ನಿಗದಿಪಡಿಸದೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿರುವುದರಿಂದ ನೇಮಕ ಪ್ರಕ್ರಿಯೆಯಲ್ಲಿನ ಪಾರದರ್ಶಕತೆಗೆ ಕುತ್ತು ಬಂದಿದೆ. ಅಲ್ಲದೆ, ತಮಗೆ ಬೇಕಾದವರ ನೇಮಕಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಕೆಪಿಎಸ್ಸಿ ಈ ರೀತಿ ಮಾಡಿದೆ ಎಂದು ಅನೇಕ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 'ಕೆಪಿಎಸ್ಸಿ ಅಕ್ರಮಕ್ಕಿಲ್ಲ ಕಟ್ ಆಫ್' ಎಂಬ ಶೀರ್ಷಿಕೆಯಡಿ 'ಕನ್ನಡಪ್ರಭ' ಸೋಮವಾರ ವಿಶೇಷ ವರದಿ ಪ್ರಕಟಿಸಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.