ಹೊಸ ಪ್ರತಿಭೆಗಳಿಗೆ ಮಾಯಾ ವೇದಿಕೆ
ಕ.ಪ್ರ. ವಾರ್ತೆ, ಬೆಂಗಳೂರು ಮಾ.25-
ಅನಿಮೇಷನ್‌ನಲ್ಲಿ ಪ್ರಖ್ಯಾತಿ ಪಡೆದಿರುವ ಮಾಯಾ ಸಂಸ್ಥೆ ಪರ್ಪಲ್ ಫ್ರೇಮ್ ಸಹಯೋಗದೊಂದಿಗೆ ಹೊಸೂರು ರಸ್ತೆ ಎಲೆಕ್ಟ್ರಾನಿಕ್ ಸಿಟಿ ನೂತನ ಮಾಯಾ ಸ್ಟುಡಿಯೋ ನಿರ್ಮಿಸಿದೆ.
ಈ ಸ್ಟುಡಿಯೋಗೆ ಚಾಲನೆ ನೀಡಿದ ಪರ್ಪಲ್ ಫ್ರೇಮ್ ಸಂಸ್ಥಾಪಕ ಯೋಗೀಶ್ ಶಾನಭಾಗ್ ಮಾತನಾಡಿ, ಈ ನೂತನ ಸ್ಟುಡಿಯೋ ಸ್ಥಾಪಿಸಿರುವ ಉದ್ದೇಶ ನಗರದಲ್ಲಿರುವ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದಾಗಿದೆ. ಈ ಸ್ಟುಡಿಯೋದಲ್ಲಿ ಅನೇಕ ಅನಿಮೇಷನ್ ಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತದೆ. ಸಾಕಷ್ಟು ಯೋಜನೆಗಳು ನಮ್ಮಲಿದ್ದು ಇವುಗಳನ್ನು ಪೂರ್ಣಗೊಳಿಸಲು ಅನೇಕ ಅನಿಮೇಷನ್ ಕೋರ್ಸ್ ಮಾಡಿರುವ ಯುವಕರ ಅವಶ್ಯ ಇದೆ ಎಂದರು.
ಮಾಯಾ ಸ್ಟುಡಿಯೋ ಕಾರ್ಯನಿರ್ವಹಣೆಗಳ ಮುಖ್ಯಸ್ಥೆ ಅರುಣ ಕುಮಾರ್ ಮಾತನಾಡಿ, ಅನಿಮೇಷನ್ ಉದ್ಯಮದಲ್ಲಿ ಉತ್ತಮ ಗುಣಮಟ್ಟದ ಸ್ಟುಡಿಯೋ ಮತ್ತು ಸಿದ್ಧ ಪ್ರತಿಭೆಗಳಿಗೆ ಕೊರತೆ ಇದೆ.
ನಾವು ಈ ಸ್ಟುಡಿಯೋದಲ್ಲಿ ಆಸಕ್ತರಿಗೆ ಆರು ತಿಂಗಳ ತರಬೇತಿ ನೀಡುತ್ತೇವೆ. ಮೂರು ತಿಂಗಳ ನಂತರ ಶಿಷ್ಯವೇತನ ಆನಂತರ ಉದ್ಯೋಗ ನೀಡುತ್ತೇವೆ. ಈ ಸ್ಟುಡಿಯೋ ಹೊಸ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಿಕೊಡಲಿದೆ ಎಂದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.