ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ಕಾರ್ಮಿಕರ ಸಜೀವ ದಹನ; ಇಬ್ಬರ ಬಂಧನ

Parashurama
Updated On : 27 Mar 2013, 12:51 pm

ಬೆಂಗಳೂರು:  ಕಡಬಗೆರೆ ಕ್ರಾಸ್‌ನಲ್ಲಿರುವ ಎಸ್.ಆರ್. ಸೀಟಿಂಗ್ಸ್ ಕಾರ್ಖಾನೆಯಲ್ಲಿ ಸೋಮವಾರ ಸಂಭವಿಸಿದ ಅಗ್ನಿ ದುರಂತ ಸಂಬಂಧ ತಾವರೆಕೆರೆ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಕಟ್ಟಡ ಮಾಲೀಕ, ಸುಂಕದಕಟ್ಟೆ ನಿವಾಸಿ ರಾಮಕೃಷ್ಣಯ್ಯ ಹಾಗೂ ದೆಹಲಿಯಲ್ಲಿರುವ ಕಂಪನಿ ಮಾಲೀಕ ಅಮಿತ್ ರಾಥೋರ್ ಬಂಧಿತರು. ಇಬ್ಬರನ್ನೂ ಬುಧವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನಂತರ ಹೆಚ್ಚಿನ ತನಿಖೆಗಾಗಿ ವಶಕ್ಕೆ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಂಕಿ ದುರಂತದಲ್ಲಿ ಬಲಿಯಾದ ಆರು ಮಂದಿಯಲ್ಲಿ ನಾಪತ್ತೆಯಾಗಿದ್ದಾನೆ ಎನ್ನಲಾದ ನದೀಂಖಾನ್ ಮೃತಪಟ್ಟಿದ್ದಾರೆ. ಆದರೆ ನೂರ್ ಹುಸೇನ್ ಎಂಬಾತ ಪರಾರಿಯಾಗಿದ್ದಾನೆ. ಸೋಮವಾರ ಸಂಜೆ ರಾಜರಾಜೇಶ್ವರಿ ನಗರದ ಆಸ್ಪತ್ರೆಗೆ ಹೋದ ಶರ್‌ತಾಜ್‌ನ ಸಹೋದರ ಸಂಶುದ್ದೀನ್ ಮೃತದೇಹಗಳ ಗುರುತು ಪರಿಶೀಲಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಆತನ ಸುಳಿವು ಸಿಕ್ಕಿಲ್ಲ.
ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ, ವಿಮಾನ ಮೂಲಕ ಉತ್ತರಪ್ರದೇಶಕ್ಕೆ ಕಳುಹಿಸಲಾಗಿದೆ. ಮಂಗಳವಾರ ಸಂಜೆ ವೇಳೆಗೆ ಮೃತದೇಹಗಳು ಕುಟುಂಬ ಸದಸ್ಯರ ಕೈ ಸೇರಿವೆ ಎಂದು ರಾಮನಗರದ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್ವಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments