ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ನಗರ

ತೆರಿಗೆ ಪಾವತಿಸಲು ಬ್ಯಾಂಕ್ ವೇಳೆ ವಿಸ್ತರಣೆ

Parashurama
Updated On : 27 Mar 2013, 12:53 pm

ಬೆಂಗಳೂರು: ತೆರಿಗೆದಾರರಿಗೆ ಅನುಕೂಲ ಕಲ್ಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ಮೇರೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ತಮ್ಮ ವ್ಯವಹಾರದ ವೇಳೆಯನ್ನು ವಿಸ್ತರಿಸಿವೆ. ಸಾರ್ವಜನಿಕರಿಂದ ತೆರಿಗೆ ಮುಂತಾದವುಗಳನ್ನು ಸ್ವೀಕರಿಸುವ ಸಲುವಾಗಿ ಮಾ.29, 30 ಮತ್ತು 31ರಂದು ಸಂಜೆಯವರೆಗೂ ಬ್ಯಾಂಕ್‌ಗಳು ತಮ್ಮ ಕೌಂಟರುಗಳನ್ನು ತೆರೆದಿರುತ್ತವೆ. ನಗರದ ಕಚೇರಿಯಲ್ಲಿ ಈ ದಿನಾಂಕಗಳಂದು ನಗದು, ಚೆಕ್, ಸರ್ಕಾರಿ ತೆರಿಗೆಗಳ ಸಂಲೇಖಗಳನ್ನು ಸ್ವೀಕರಿಸುವ ಸಲುವಾಗಿ ಸಂಜೆ 5.30ರವರೆಗೂ ಕೌಂಟರುಗಳನ್ನು ತೆರೆದಿರಲಿದೆ. ಆನ್‌ಲೈನ್ ಮೂಲಕ ಹಾಗೂ ಆಯ್ದ ಎಟಿಎಂಗಳ ಮೂಲಕ ತೆರಿಗೆ ಪಾವತಿಸುವ ಸೌಲಭ್ಯ ಸಹ ಇದ್ದು, ಗ್ರಾಹಕರು ಮಾಹಿತಿಗೆ www.rbi.org.inನ್ನು ಸಂಪರ್ಕಿಸಿ.

ಏ.22ರಿಂದ ಬೇಸಿಗೆ ಶಿಬಿರ
ಶ್ರೀಶೃಂಗೇರಿ ಶಂಕರ ಮಠ 2ನೇ ತರಗತಿಯಿಂದ 9ನೇ ತರಗತಿ ಮಕ್ಕಳಿಗೆ ಏ.22ರಿಂದ ಮೇ 11ರವರೆಗೆ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಶಿಬಿರದಲ್ಲಿ ಮಕ್ಕಳಿಗೆ ಸ್ತೋತ್ರಪಾಠ, ಭಗವದ್ಗೀತೆ, ಅಮರಕೋಶ, ಯೋಗ, ಪೈಂಟಿಂಗ್/ಕ್ರಾಫ್ಟ್, ವೇದಗಣಿತ, ವಿಜ್ಞಾನ ಆಧರಿತ ಕಾರ್ಯಕ್ರಮಗಳು, ಭಾಷಣಕಲೆ, ವ್ಯಕ್ತಿತ್ವ ವಿಕಸನ, ಮುಂತಾದ ವಿಷಯಗಳಲ್ಲಿ ತರಬೇತಿ ನೀಡಲಾಗುವುದು. ಅರ್ಜಿಗಳನ್ನು ಕಚೇರಿಯಲ್ಲಿ ಪಡೆಯಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ರಾಮಚಂದ್ರ- 988626655, ಲಕ್ಷ್ಮೀನಾರಾಯಣ್ 9886715905.

ಚುನಾವಣಾ ಸಹಾಯವಾಣಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಮತ್ತು ಮುಂಬರುವ ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲು ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಚುನಾವಣಾ ನಿಯಂತ್ರಣ ಕೊಠಡಿ ಹಾಗೂ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ಚುನಾವಣಾ ಸಹಾಯವಾಣಿ ಸಂಖ್ಯೆ 22975583, 22270142, 43, 48 ಮತ್ತು 49 ದೂರವಾಣಿಗಳಿಗೆ ಕರೆ ಮಾಡಿ, ತಮ್ಮ ದೂರುಗಳನ್ನು ನೀಡಲು ಪಾಲಿಕೆಯ ಆಯುಕ್ತರು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಿದ್ಧಯ್ಯ ತಿಳಿಸಿದ್ದಾರೆ. ಈಗಾಗಲೇ 28 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಸಿದ್ಧಗೊಳ್ಳುತ್ತಿದ್ದು, ಈಗಲೂ ಸಹ ಹೆಸರು ಸೇರಿಸುವ, ತೆಗೆಯುವ ಮತ್ತು ತಿದ್ದುಪಡಿ ಮಾಡುವ ಅವಕಾಶವಿದ್ದು, ಸಾರ್ವಜನಿಕರು ನಮೂನೆ 6, 7, 8 ಮತ್ತು 8ಎ ಗಳಲ್ಲಿ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ.

ಇಂದು ಸಹಕಾರ ಸಂಘದ ಸಭೆ
ದಿ. ಬಸವನಗುಡಿ ಸಹಕಾರ ಸಂಘ ನಿಯಮಿತ ಸಂಸ್ಥೆಯು 2011- 12ನೇ ಸಾಲಿನ 98ನೇ ವಾರ್ಷಿಕ ಮಹಾಸಭೆಯನ್ನು ಮಾ.27ರಂದು ಮಧ್ಯಾಹ್ನ 2.30ಕ್ಕೆ ಶಂಕರಪುರದಲ್ಲಿರುವ ರಾಯ ರಾಯ ಕೊಲ್ಲಂ ವೆಂಕಟರಾವ್ ಕಲ್ಯಾಣ ಮಂಟಪದಲ್ಲಿ ನಡೆಸಲು ನಿರ್ಧರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments