ಬೆಂಗಳೂರು ನಗರ

ರಂಗಶಂಕರದಲ್ಲಿ ರತ್ನನ್ ಪರ್ಪಂಚ

ಬೆಂಗಳೂರು: ಕ್ರಿಯೇಟಿವ್ ಥಿಯೇಟರ್ ಅರ್ಪಿಸುವ ಹಾಸ್ಯ ನಾಟಕ 'ರತ್ನನ್ ಪರ್ಪಂಚ'. ಜಿ.ಪಿ.ರಾಜರತ್ನಂ ಅವರ ಬದುಕು-ಬರಹಗಳ ಆಧಾರಿತ ನಾಟಕ ನ. 13 ರಂದು ಸಂಜೆ 7.30ಕ್ಕೆ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಜೋಸೆಫ್ ಅವರ ನಿರ್ದೇಶಿಸಿದ್ದಾರೆ. ಕಲಾವಿದರಾದ ಸುಂದರ್, ಲಕ್ಷ್ಮೀ ಚಂದ್ರಶೇಖರ್, ರಾಮಕೃಷ್ಣ ಕನ್ನರಪಾಡಿ, ಗಜಾನನ, ಚಂದ್ರಕೀರ್ತಿ ಮತ್ತು ಸುರಭಿ ಅವರು ಅಭಿನಯಿಸುತ್ತಿದ್ದಾರೆ.

ಆರೋಗ್ಯಕ್ಕಾಗಿ ನಡಿಗೆ 14ರಂದು
ಬೆಂಗಳೂರು: ವಿಶ್ವ ಮಧುಮೇಹ ದಿನದ ಅಂಗವಾಗಿ ನ.14ರಂದು ನಗರದಲ್ಲಿ ಹಲವು ಸಂಘಟನೆಗಳು 'ಆರೋಗ್ಯಕ್ಕಾಗಿ ನಡಿಗೆ' ಹಮ್ಮಿಕೊಂಡಿರುವುದಾಗಿ ಶಾಸಕ ರೋಷನ್ ಬೇಗ್ ತಿಳಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಧುಮೇಹ ರೋಗ ಹೆಚ್ಚಳಕ್ಕೆ ಭಾರತೀಯರ ಜೀವಶೈಲಿಯ ಬದಲಾವಣೆಯೇ ಕಾರಣ. ಈ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಇತ್ತೀಚೆಗೆ ಚಿಕ್ಕಮಕ್ಕಳಲ್ಲಿ ಕೂಡ ಮಧುಮೇಹ ಕಾಣಿಸಿಕೊಳ್ಳುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಮಧುಮೇಹಕ್ಕೆ ಡಯಾಲಿಸಿಸ್ ವ್ಯವಸ್ಥೆ ಕಲ್ಪಿಸಬೇಕು. ಕಡಿಮೆ ಬೆಲೆಗಳಲ್ಲಿ ಜೆನೆರಿಕ್ ಔಷಧಿಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ನಂತರ ಮಾತನಾಡಿದ ಅಂತಾರಾಷ್ಟ್ರೀಯ ಮ್ಯಾರಥಾನ್ ಓಟಗಾರ ಎ.ಜಯರಾಜ್, ನ.14ರಂದು ಮುಂಜಾನೆ 6.30ಕ್ಕೆ ಹಲಸೂರು ಕೆರೆಯ ಬಳಿಯ ಲೇಕ್ ಸರ್ಕ್ಯೂಟ್ ರಸ್ತೆಯಲ್ಲಿ ಓಟ ಆರಂಭಗೊಳ್ಳಲಿದ್ದು, ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು. ನಟಿ ಸಂಜನಾ, ರಹ್ಮಾನ್ ಬೇಗ್ ಉಪಸ್ಥಿತರಿದ್ದರು.

20ರಿಂದ ವಿವಿಧ ಕಾರ್ಯಕ್ರಮ
ಬೆಂಗಳೂರು: ಸುವರ್ಣ ಮಹೋತ್ಸವ ಅಂಗವಾಗಿ ಮಲ್ಲೇಶ್ವರದಲ್ಲಿನ ಜನತಾ ಸಹಕಾರಿ ಬ್ಯಾಂಕ್ ನ.20ರಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಬ್ಯಾಂಕ್‌ನ ಅಧ್ಯಕ್ಷ ಪಿ.ಎಲ್.ಮರಿಗೌಡ, ನ.20ರಂದು ಬ್ಯಾಂಕ್ ಸಿಬ್ಬಂದಿಗೆ ಒಳಾಂಗಣ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ. ನ. 24ರಂದು ಸದಸ್ಯರು ಹಾಗೂ ಕುಟುಂಬ ವರ್ಗದವರಿಗಾಗಿ ಬ್ಯಾಂಕ್‌ನ ಆವರಣದಿಂದ ಮಿಲ್ಕ್ ಕಾಲೋನಿಯ ಆಟದ ಮೈದಾನದವರೆಗೆ 'ಸಹಕಾರಕ್ಕಾಗಿ ಚಿನ್ನದ ನಡಿಗೆ' ವಾಕಥಾನ್ ಹಮ್ಮಿಕೊಳ್ಳಲಾಗಿದೆ ಎಂದರು. ಬ್ಯಾಂಕ್‌ನ ಏಳಿಗೆಗೆ ದುಡಿದ ಮಾಜಿ ನಿರ್ದೇಶಕರು, ನಿವೃತ್ತ ಸಿಬ್ಬಂದಿಗೆ ಡಿಸೆಂಬರ್ 9ರಂದು ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠದ ನಿರ್ಮಲಾಂದ ಸ್ವಾಮಿ ಉಪಸ್ಥಿತರಿರಲಿದ್ದಾರೆ ಎಂದರು.

ಕುಡಿವ ನೀರಿಗೆ ಹಣ ವಸೂಲಿ; 'ಹೈ' ಕಿಡಿ
ಬೆಂಗಳೂರು: ಪಾವಗಡ ತಾಲೂಕಿನ 135 ಹಳ್ಳಿಗಳ ಜನರಿಗೆ ಕುಡಿಯುವ ನೀರು ಪೂರೈಸಲು ಹಣ ಪಡೆಯುತ್ತಿರುವ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.  ಪಾವಗಡಕ್ಕೆ ಶುದ್ದ ಕುಡಿಯುವ ನೀರು ಪೂರೈಸುವ ಶಾಶ್ವತ ಯೋಜನೆಯನ್ನು ಡಿಸೆಂಬರ್‌ನಲ್ಲಿ ಆರಂಭಿಸಲಾಗುವುದು. ಸದ್ಯ ತಾತ್ಕಾಲಿಕವಾಗಿ ಅಲ್ಲಿನ ಜನರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರು, ಟ್ಯಾಂಕರ್ ನೀರು ಪೂರೈಕೆಗೆ ಸರ್ಕಾರ ಅಲ್ಲಿನ ಜನರಿಂದ ಹಣ ಪಡೆಯುತ್ತಿದೆ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲಾ ಹಾಗೂ ನ್ಯಾ. ಎಚ್.ಎನ್.ಸತ್ಯನಾರಾಯಣ ಅವರಿದ್ದ ವಿಭಾಗೀಯ ಪೀಠ, ಉಚಿತವಾಗಿ ನೀರು ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಅದನ್ನು ನೀವು ಕಿತ್ತುಕೊಳ್ಳುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.  ಇದಕ್ಕೆ ಒಪ್ಪಿಗೆ ಸೂಚಿಸಿದ ರವಿವರ್ಮಕುಮಾರ್, ಉಚಿತ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರಗತಿ ವರದಿ ಸಲ್ಲಿಸುವಂತೆ ಆದೇಶಿಸಿದ ಪೀಠ, ವಿಚಾರಣೆ ಮುಂದೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ!

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರೂಟ ಹಾಕಿದ್ರೆ ₹1 ಲಕ್ಷ, ಉಂಡು ಬಂದ್ರೆ ₹50 ಸಾವಿರ ದಂಡ! ಇಲ್ಲಿದೆ ಸ್ಫೋಟಕ ಕಾರಣ...

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್