ಬೆಂಗಳೂರು ನಗರ

ಗುತ್ತಿಗೆ ಮುಗಿದ ಅರಣ್ಯ ಭೂಮಿ ವಾಪಸ್: ಸಚಿವ ರೈ

ಬೆಂಗಳೂರು: ಅರಣ್ಯ ಭೂಮಿ ಗುತ್ತಿಗೆ ಮುಗಿದಿದ್ದರೆ ಅದನ್ನು ವಾಪಸ್ ಪಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ರಾಜ್ಯದಲ್ಲಿ ನೂರಾರು ಎಕರೆ ಅರಣ್ಯ ಭೂಮಿ ಗುತ್ತಿಗೆ ನೀಡಲಾಗಿದೆ. ಮಡಿಕೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುತ್ತಿಗೆ ಅವಧಿ ಮುಗಿದಿದೆ. ಇಂತಹ ಎಲ್ಲ ಪ್ರಕರಣಗಳಲ್ಲಿ ಅರಣ್ಯ ಭೂಮಿ ವಾಪಸ್ ಪಡೆಯಲಾಗತ್ತದೆ ಎಂದು ಸುದ್ದಿಗಾರರಿಗೆ ಬುಧವಾರ ಹೇಳಿದರು.

ಇಲಾಖೆಗೆ ಮಾಹಿತಿ ಇಲ್ಲ:
ಗುತ್ತಿಗೆಗೆ ಪಡೆದಿರುವ ಅರಣ್ಯ ಭೂಮಿಯಲ್ಲಿ ರಬ್ಬರ್ ಹಾಗೂ ಕಾಫಿ ತೋಟಗಳನ್ನು ನಿರ್ಮಿಸಲಾಗಿದೆ ಎಂಬ ಬಗ್ಗೆ ಇಲಾಖೆಗೆ ಮಾಹಿತಿ ಇಲ್ಲ. ಆದರೆ,ಅವಧಿ ಮುಗಿದಿದ್ದರೆ ಅದನ್ನು ಹಿಂಪಡೆಯುವ ಕ್ರಮ ಆಗುತ್ತದೆ ಎಂದರು. ಅರಣ್ಯ ಭೂಮಿ ಅಭಿವೃದ್ಧಿಯಲ್ಲಿ ಸಾಮಾಜಿಕ ಹೊಣೆಗಾರಿಕೆ ಯೋಜನೆಯಲ್ಲಿ ದೊಡ್ಡ ಉದ್ದಿಮೆದಾರರಿಗೆ ಅರಣ್ಯ ಭೂಮಿ ನೀಡಿ ಅರಣ್ಯೀಕರಣ ನಡೆಸುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಅರಣ್ಯ ಪ್ರದೇಶ ಹೆಚ್ಚಿಸಲು ಎಲ್ಲ ರೀತಿಯ ಯೋಜನೆಗಳನ್ನು ರೂಪಿಸಿದ್ದು, ದೊಡ್ಡ ಪ್ರಮಾಣದಲ್ಲಿ ಅರಣ್ಯ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರವುಗೊಳಿಸಲಾಗುತ್ತದೆ. ಸಣ್ಣ ಹಿಡುವಳಿದಾರರಿಗೆ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ ಎಂದು ಸಚಿವ ರಮಾನಾಥ ರೈ ಪುನರುಚ್ಚರಿಸಿದರು. ಅರಣ್ಯ ಗಡಿಯ 100 ಮೀಟರ್ ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆ ನಡೆಸಲು ಸರ್ಕಾರ ಅನುಮತಿ ನೀಡಿದೆ. ಆದರೆ, ವನ್ಯಜೀವಿ ಹಾಗೂ ಮೀಸಲು ಅರಣ್ಯದಲ್ಲಿ ಅವಕಾಶ ನೀಡುವುದಿಲ್ಲ. ಅರಣ್ಯ ಹಕ್ಕು ಕಾಯಿದೆಯಡಿ ಬುಡಕಟ್ಟು ಜನರಿಗೆ ಅರಣ್ಯ ಭೂಮಿ ನೀಡಬೇಕಿದೆ. ಈ ಸಂಬಂಧ 1.30 ಲಕ್ಷಗಳು ಬಂದಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಕೈಗಾರಿಕೆಗಳು ಪರಿಸರ ಮಾಲಿನ್ಯ ನಿಯಮ ಉಲ್ಲಂಘಿಸಿರುವ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದರು.

ಬಿಎಂಸಿ ಡೀನ್ ವಜಾ ರದ್ದು

ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ  ಡೀನ್ ಹಾಗೂ ನಿರ್ದೇಶಕ ಡಾ.ಓ.ಎಸ್.ಸಿದ್ದಪ್ಪ ಅವರನ್ನು ವಜಾಗೊಳಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಇದರಿಂದ ಈ ಸ್ಥಾನಕ್ಕೆ ಉಸ್ತುವಾರಿ ಡೀನ್ ಆಗಿ ಡಾ.ಡಿ.ರವಿಪ್ರಕಾಶ್ ಆಯ್ಕೆ ಮಾಡಿದ್ದ ಸರ್ಕಾರಿ ಆದೇಶವನ್ನು ನ್ಯಾ.ರವಿಮಳೀಮಠ್ ಅವರಿದ್ದ ಏಕಸದಸ್ಯ ಪೀಠ, ರದ್ದುಗೊಳಿಸಿದೆ.  2011ರ ಮೇ 23ರಲ್ಲಿ ವೈದ್ಯಕೀಯ ಕಾಲೇಜಿನ ಡೀನ್ ಆಗಿ  ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದ ಸಿದ್ದಪ್ಪ ಅವರ ಅಧಿಕಾರಾವಧಿ ಪೂರ್ಣಗೊಳ್ಳುವ ಮುನ್ನವೇ 60 ವರ್ಷ ಪೂರ್ಣಗೊಂಡ ನೆಪವೊಡ್ಡಿ ಅವರನ್ನು ವಜಾಗೊಳಿಸಲಾಗಿತ್ತು. ಈ ಸ್ಥಾನಕ್ಕೆ ರವಿಶಂಕರ್ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಇದನ್ನ್ನು ಪ್ರಶ್ನಿಸಿ ಸಿದ್ದಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.

ಸಾಹಿತ್ಯ ಸಮ್ಮೇಳನ ನೋಂದಣಿ ಆರಂಭ

80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 7ರಿಂದ 9ರವರೆಗೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ತೀರ್ಮಾನಿಸಿದ್ದು, ನುಡಿ ಜಾತ್ರೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಪರಿಷತ್ತು ಸೂಚಿಸಿದೆ.  ಪ್ರತಿನಿಧಿಗಳು ಆಯಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಬಳಿ 300 ಶುಲ್ಕ ಪಾವತಿಸಿ ಡಿ.15ರೊಳಗೆ ನೋಂದಾಯಿಸಿಕೊಳ್ಳುವಂತೆ ಕೋರಿದೆ.

ಡಿ.ಲಿಟ್ ಗೆ ಅರ್ಜಿ
ಕರ್ನಾಟಕ ಸಂಸ್ಕೃತ ವಿ.ವಿ 2013-14ನೇ ಸಾಲಿನ ಕರ್ನಾಟಕ ಸಂಸ್ಕೃತ ವಿ.ವಿ ಡಿ.ಲಿಟ್ಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಂಸ್ಕೃತ ಶಾಸ್ತ್ರದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 55 ಅಂಕಗಳಿಸಿದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಪ್ರವೇಶ ಶುಲ್ಕ ಸಾಮಾನ್ಯ ವರ್ಗದವರಿಗೆ 1500 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು 750 ಪಾವತಿಸಿ, ಕುಲ ಸಚಿವರು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಚಾಮರಾಜಪೇಟೆ, ಬೆಂ-18ಕ್ಕೆ ಕಳುಹಿಸಬಹುದು.

ಬೋಧಕರ ಸಂಘದ ಸಭೆ
ಬೆಂಗಳೂರು:
ಅಖಿಲ ಕರ್ನಾಟಕ ಖಾಸಗಿ ಅನುದಾನಿತ ಪದವಿ ಪೂರ್ವ ಮಹಾ ವಿದ್ಯಾಲಯಗಳ ಬೋಧಕ- ಬೋಧಕೇತರ ಮಹಾ ಸಂಘ ಮಂಗಳವಾರ ಸರ್ವ ಸದಸ್ಯರ ಸಭೆ ನಡೆಸಿ ಕಾಲ್ಪನಿಕ ವೇತನ ಬಡ್ತಿ ಮಂಜೂರಾತಿ ಬಗ್ಗೆ ಚರ್ಚಿಸಿದ್ದಾರೆ. ಖಾಸಗಿ ಶಾಲಾ-ಕಾಲೇಜುಗಳ ನೌಕರರ ಕಾಲ್ಪನಿಕ ವೇತನ ಬಡ್ತಿ ವಿಚಾರದ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ರತ್ನಾಕರ ಕಿಮ್ಮನೆ ಅವರು ನವೆಂಬರ್ನಲ್ಲಿ ಸಭೆ ಕರೆದು ಚರ್ಚಿಸುವುದಾಗಿ ಭರವಸೆ ನೀಡಿರುವ ವಿಷಯವನ್ನು ಸಂಘದ ರಾಜ್ಯಾಧ್ಯಕ್ಷ ಎಂ.ಪಿ. ಕರಬಸಪ್ಪ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಆಕಾಶವಾಣಿ ಕೃಷಿ ಸಂವಾದ
ಬೆಂಗಳೂರು:
ಆಕಾಶವಾಣಿ ಅ.25ರಂದು ರಾತ್ರಿ 8ಗಂಟೆಗೆ ಪ್ರಸಾರ ಮಾಡುವ ಕೃಷಿ-ಕರೆ ಎಂಬ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್ಲಾಲ್ ಮೀನಾ ಅವರು ಭಾಗಹಿಸಲಿದ್ದಾರೆ. ಕೃಷಿ ವಿಷಯ ಸಂಬಂಧ ಯಾವುದೇ ಪ್ರಶ್ನೆಗಳು ಇದ್ದರೆ, ಸಾರ್ವಜನಿಕರು ದೂರವಾಣಿ 22370477 ಮತ್ತು 22370499 ಈ ವಿಳಾಸಕ್ಕೆ ಕರೆ ಮಾಡಬಹುದು ಎಂದು ಅಕಾಶವಾಣಿ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ!

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರೂಟ ಹಾಕಿದ್ರೆ ₹1 ಲಕ್ಷ, ಉಂಡು ಬಂದ್ರೆ ₹50 ಸಾವಿರ ದಂಡ! ಇಲ್ಲಿದೆ ಸ್ಫೋಟಕ ಕಾರಣ...

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು? ಒಬ್ಬ CM ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು: ಛಲವಾದಿ ನಾರಾಯಣಸ್ವಾಮಿ