ಬೆಂಗಳೂರು ನಗರ

ಪೋಟೋ ಎಲ್‌ಎಕೆ ವಿಶ್ವಕರ್ಮ ವಧು-ವರರ ನೋಂದಣಿ

ವಿಶ್ವಕರ್ಮ ವಿವಾಹ ಕೇಂದ್ರ ಸೆ.16ರಿಂದ 25ರವರೆಗೆ ವಧು-ವರರ ನೋಂದಣಿ ಏರ್ಪಡಿಸಿದೆ. ಅರ್ಹರು ವಿಶ್ವ ವಿವಾಹ ಕೇಂದ್ರ, ನಂ.26, ಮೊದಲನೇ ಮಹಡಿ, ಆಸ್ಪತ್ರೆ ರಸ್ತೆ, ಬೆಂಗಳೂರು 560053, (92424 01037) ಸಂಪರ್ಕಿಸಿ.

ಅಭಿನವದಿಂದ ಪುಸ್ತಕ ಬಿಡುಗಡೆ
ಅಭಿನವ ಪ್ರಕಾಶನ ಹೊರತಂದಿರುವ ವಿಜಯನಾಥ ಶೆಣೈ ಮತ್ತು ಬಸವರಾಜ ಕಲ್ಗುಡಿ, ಕೆ.ಪಿ.ಭಟ್ ಅವರು ಬರೆದಿರುವ 'ಪತ್ರ ವಾತ್ಸಲ್ಯ, ಮೈಯೇ ಸೂರು, ಮನವೇ ಮಾತು, ಭಾಷೆ ಮತ್ತು ಸಾಮಾಜಿಕ ಸಂದರ್ಭ' ಕುರಿತ ಪುಸ್ತಕಗಳ ಬಿಡುಗಡೆ ಸೆ. 5ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಜೆ 6ಗಂಟೆಗೆ ನಡೆಯಲಿದೆ. ಪುಸ್ತಕಗಳನ್ನು ಬಿ.ಕೆ. ಚಂದ್ರಶೇಖರ್ ಅವರು ಬಿಡುಗಡೆಗೊಳಿಸಲಿದ್ದು, ಎನ್.ಎ.ಎಂ. ಇಸ್ಮಾಯಿಲ್, ಓ.ಎಲ್.ನಾಗಭೂಷಣ್ ಭಾಗವಹಿಸಲಿದ್ದಾರೆ.
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ
ಬೆಂಗಳೂರು ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ಕೇಂದ್ರ ಸಮಾಜ ವಿಜ್ಞಾನ ವಿಷಯ ಬೋಧಿಸಲು 2013-14ನೇ ಸಾಲಿನ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಸೆ.7ರೊಳಗೆ ಸಮನ್ವಯಾಧಿಕಾರಿ, ಮಹಿಳಾ ಅಧ್ಯಯನ ಕೇಂದ್ರ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು 5600056 ಈ ವಿಳಾಸಕ್ಕೆ ಕಳುಹಿಸಬಹುದು.

ನಾಳೆ ಕಾರ್ಯಾಗಾರ
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ನಿವೃತ್ತ ಕುಲಪತಿಗಳ ವೇದಿಕೆ ಸೆ.6ರಂದು ಬೆಳಗ್ಗೆ 10ಗಂಟೆಗೆ ಮೈಸೂರು ಬ್ಯಾಂಕ್ ಎದುರು ಇರುವ ಹಳೆಯ ಕಾನೂನು ಕಾಲೇಜು ಕಟ್ಟಡದಲ್ಲಿ ಉನ್ನತ ವಿದ್ಯಾಸಂಸ್ಥೆಗಳ ಮೌಲ್ಯಾಂಕನ ಮತ್ತು ಮಾನ್ಯತೆ ಕುರಿತು ಕಾರ್ಯಾಗಾರ ಏರ್ಪಡಿಸಿದೆ. ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್, ಡಾ.ಕೆ.ಎಸ್. ಶ್ರೀಪ್ರಕಾಶ್, ಡಾ.ಎನ್. ಪ್ರಭುದೇವ್ ಭಾಗವಹಿಸಲಿದ್ದಾರೆ.
'ಮೂಡ್ಸ್ ಆಫ್ ಮ್ಯಾಂಡೊಲಿನ್‌'
ರಾಗಶ್ರೀ ಸಂಗೀತ ಅಕಾಡೆಮಿಯು ಸೆ.6ರಂದು ಹನುಮಂತನಗರದ ಕೆ.ಎಚ್.ಕಲಾಸೌಧದಲ್ಲಿ 'ಮೂಡ್ಸ್ ಆಫ್ ಮ್ಯಾಂಡೊಲಿನ್‌' ಕಾರ್ಯಕ್ರಮವನ್ನು ಆಯೋಜಿಸಿದೆ. ಇದೇ ಸಂದರ್ಭದಲ್ಲಿ ಮ್ಯಾಂಡೋಲಿನ್ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಅಂದು ಸಂಜೆ 6ಕ್ಕೆ ಪಂಡಿತ್ ಸ್ನೇಸಿಷ್ ಮಜುಂದಾರ್ ಅವರು ಮ್ಯಾಂಡೊಲಿನ್ ವಾದನ ನುಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸುವರು. ಇಸ್ಕಾನ್ ನಿರ್ದೇಶಕ ತಿರು ಗುರೂಜಿ, ಕೊಳಲುವಾದಕ ಪ್ರವೀಣ್ ಗೋಡ್ಖಿಂಡಿ ಮತ್ತಿತರರು ಭಾಗವಹಿಸುವರು. ಈ ಮ್ಯಾಂಡೊಲಿನ್ ಕಾರ್ಯಕ್ರಮವನ್ನು ರಕ್ಷಣಾ ಪಡೆಯ ಯೋಧರಿಗೆ ಅರ್ಪಿಸಲಾಗುವುದು ಎಂದು ಅಕಾಡೆಮಿ ರೂವಾರಿ ಹಾಗೂ ಮ್ಯಾಂಡೊಲಿನ್ ವಾದಕ ಎನ್.ಎಸ್.ಪ್ರಸಾದ್ ತಿಳಿಸಿದರು.

ಹಳ್ಳಿಮನೆಯಲ್ಲಿ ಹಬ್ಬದ ವಿಶೇಷ ಊಟ
ಬೆಂಗಳೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಲ್ಲೇಶ್ವರದ ಹಳ್ಳಿಮನೆಯಲ್ಲಿ ಹಬ್ಬದ ಊಟ ದೊರೆಯಲಿದೆ. ಸೆ.8 ಮತ್ತು 9ರಂದು ಹಬ್ಬದ ಪ್ರಯುಕ್ತ ತಳಿರು ತೋರಣ, ರಂಗೋಲಿ, ದೀಪ- ಧೂಪ ಅಲಂಕರಿಸಲಾಗುತ್ತದೆ. ಅಲ್ಲದೆ  ಗ್ರಾಹಕರಿಗೆ ಬಳೆ ಅರಿಶಿಣ- ಕುಂಕುಮ ನೀಡಲಿದೆ. ಗ್ರಾಹಕರಿಗೆ ಹಬ್ಬದ ಊಟ ನೀಡುವ ಉದ್ದೇಶದಿಂದ 35 ಬಗೆಯ ತಿಂಡಿ- ತಿನಿಸು ತಯಾರಿಸಲಿದೆ. ಭಾವನಾ ಶುಂಠಿ, ಸುವರ್ಣ ಗಡ್ಡೆ, ಪಲ್ಯ, ಗೋಡಂಬಿ ಪಲ್ಯ ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ಅಂದಿನ ಊಟದಲ್ಲಿ ಬಡಿಸಲಿದೆ. ಊಟದ ದರ ವಯಸ್ಕರಿಗೆ 225 ಮತ್ತು ಮಕ್ಕಳಿಗೆ 125 ನಿಗಧಿ ಪಡಿಸಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 99457 61283.

ಸಂತ್ರಸ್ತರಿಗೆ ಉಚಿತ ನೇತ್ರ ಶಿಬಿರ
ಬೆಂಗಳೂರು: ಉತ್ತರಾಖಂಡ ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರಿಗಾಗಿ ಬೆಂಗಳೂರಿನ ಡಾ. ಅಗರ್‌ವಾಲ್ ಆಸ್ಪತ್ರೆ, ಜೀನ್ ರಿಸರ್ಚ್ ಫೌಂಡೇಷನ್ ಸೆ.18ರಿಂದ 22ರವರೆಗೆ ಉಚಿತ ನೇತ್ರ ಹಾಗೂ ಜೀನ್ ಥೆರಪಿ ಶಿಬಿರವನ್ನು ಆಯೋಜಿಸಿದೆ. ವೈದ್ಯರ ತಂಡವು ಡೆಹ್ರಾಡೂನ್, ನೀಲಕಂಠ ಸೇರಿದಂತೆ ಪ್ರವಾಹ ಸಂತ್ರಸ್ತರಿರುವ ತಾಣಗಳಲ್ಲಿ ಶಿಬಿರ ನಡೆಸಲಿದೆ.  30 ಲಕ್ಷಕ್ಕೂ ಅಧಿಕ ಚುಚ್ಚುಮದ್ದು, ಔಷಧಿ ಹಾಗೂ ಕನ್ನಡಕಗಳನ್ನು ವಿತರಿಸಲು ನಿರ್ಧರಿಸಿದೆ. ಸಾರ್ವಜನಿಕರು ಹಣದ ಸಹಾಯ ಕಲ್ಪಿಸಬಹುದು ಎಂದು ಅಗರ್‌ವಾಲ್ ಆಸ್ಪತ್ರೆಯ ವೈದ್ಯೆ ಡಾ.ಸುನೀತಾ ರಾಣಾ ಅಗರ್‌ವಾಲ್ ತಿಳಿಸಿದರು. ಮಾಹಿತಿಗೆ - 22223100, 22240736.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!