ಬೆಂಗಳೂರು ನಗರ

ಸುದ್ದಿ ಸಂಕ್ಷೇಪ

ಕಮ್ಯುನಿಕೇಷನ್ ನೆಟ್ವರ್ಕ್ನಾಳೆಯಿಂದ ಸಮ್ಮೇಳನ
ಬೆಂಗಳೂರು: ಕಮ್ಯುನಿಕೇಷನ್ ನೆಟ್ವರ್ಕ್, ಇಮೇಜ್ ಮತ್ತು ಸಿಗ್ನಲ್ ಪ್ರೊಸೆಸಿಂಗ್ ಡಾಟಾ ಮೈನಿಂಗ್ ಮತ್ತು ವೇರ್ ಹೌಸಿಂಗ್ ಕುರಿತಾದ ಎಂಟನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಜು. 25ರಿಂದ 27 ರವರೆಗೆ ನಗರದ ಕ್ಯಾಪಿಟಲ್ ಹೋಟೆಲ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.  ಕೆ.ಆರ್. ವೇಣುಗೋಪಾಲ್ ಮಾತನಾಡಿ, ಸಮ್ಮೇಳನವನ್ನು ಸಂಸ್ಕರಣ ಸಮಾಜದ ವತಿಯಿಂದ ಆಯೋಜಿಸಲಾಗಿದೆ ಎಂದು ತಿಳಿಸಿದರು. ವಿಶ್ವದೆಲ್ಲೆಡೆಯಿಂದ ವಿಷಯ ತಜ್ಞರು ಭಾಗವಹಿಸಲಿದ್ದಾರೆ. ಅನ್ವೇಷಣೆ, ಟೆಕ್ನಾಲಜಿ ಮತ್ತು ಹೊಸ ವಿಚಾರಧಾರೆಗೆ ಮತ್ತು ಸಂಶೋಧಕರಿಗೆ ಉತ್ತಮ ಅವಕಾಶವಿದೆ. ಡಾಟಾ ಕೇಂದ್ರದ ಸುರಕ್ಷತೆ ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಚರ್ಚೆಗಳು ನಡೆಯಲಿವೆ. ಮುಂದಿನ ವರ್ಷ ಆಸ್ಟ್ರೇಲಿಯಾ ನಂತರ ಯುಎಸ್ಎ ಮತ್ತು ಚೈನಾಗಳಲ್ಲಿ ಸಮ್ಮೇಳನ ನಡೆಯಲಿದೆ. 4 ವರ್ಷಗಳಿಗೊಮ್ಮೆ ಬೆಂಗಳೂರಿಲ್ಲಿ ಸಮ್ಮೇಳನ ನಡೆಯಲಿದೆ ಎಂದು ಹೇಳಿದರು.
449 ಪ್ರಬಂಧಗಳಲ್ಲಿ 129 ಪ್ರಬಂಧಗಳನ್ನು ಮಂಡನೆಗೆ ಆಯ್ಕೆ ಮಾಡಲಾಗಿದೆ. ಎಸ್.ಎಸ್. ಅಯ್ಯಂಗಾರ್, ಡೈರೆಕ್ಟರ್ ಮತ್ತು ರೀಡರ್ ಪ್ರೊಫೆಸರ್ ಸ್ಕೂಲ್ ಆಫ್ ಕಂಪ್ಯೂಟಿಂಗ್ ಮತ್ತು ಇನ್ಫಾರ್ಮೇಶನ್ ಸೈನ್ಸ್ ಫ್ಲೋರಿಡಾ ವಿವಿ, ಎಚ್.ಜಿ. ದತ್ತಾತ್ರೇಯ, ನಿವೃತ್ತ ವಿಂಗ್ ಕಮಾಂಡರ್ ಮತ್ತು ಮೈಕ್ರೋ-ನ್ಯಾನೋ-ಬಯೋ ಸಿಸ್ಟಮ್ನ ವಿ.ಜೆ. ಸುಂದರಂ ಅವರನ್ನು ಸನ್ಮಾನಿಸಲಾಗುವುದು. ಸಮ್ಮೇಳನದಲ್ಲಿ ಹೊಸ ವಿಚಾರಗಳ ಕುರಿತು ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ. ಕೈಗಾರಿಕೋದ್ಯಮಿಗಳು ಇದನ್ನು ಉದ್ದಿಮೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ನಾಳೆ ವಿವಿಧೆಡೆ
ವಿದ್ಯುತ್ ವ್ಯತ್ಯಯ
ಬೆಂಗಳೂರು: ಟೆಲಿಕಾಂ ಲೇಔಟ್ನ 66/11ಕೆವಿ ವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ನಿರ್ವಹಣಾ ಕೆಲಸ ನಡೆಯುತ್ತಿರುವ ಕಾರಣ ಜು. 25ರಂದು ಬೆಳಗ್ಗೆ 10ರಿಂದ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಟೆಲಿಕಾಂ ಲೇಔಟ್ನ 1,2,4,5,6,7 ಹಾಗೂ 8ನೇ ಅಡ್ಡರಸ್ತೆ, ರಾಮದಾಸ್ ಲೇಔಟ್, ನಾಗಮ್ಮನಗರ 9ನೇ ಮುಖ್ಯರಸ್ತೆ, ಲೆಪ್ರೊಸಿ ಆಸ್ಪತ್ರೆ ಆವರಣ, ಅಂಬೇಡ್ಕರ್ ಲೇಔಟ್, ರೈಲ್ವೆ ಗೇಟ್ ಕೆಪಿ ಅಗ್ರಹಾರ ಹತ್ತಿರ, ನರಸಿಂಹಯ್ಯ ಕಾಂಪೌಂಡ್, ಸುಜಾತಾ ಟೆಂಟ್, ಸಂಗಮ್ ಸರ್ಕಲ್, ಕೆಪಿ ರೈಲ್ವೆ ಗೇಟ್ನ9,10,16 ಹಾಗೂ 17ನೇ ಅಡ್ಡರಸ್ತೆ, ಅಂಜನಪ್ಪ ಗಾರ್ಡನ್, ಫ್ಲವರ್ ಗಾರ್ಡನ್, ಜೈಭೀಮಾನಗರ, ದೊರೆಸ್ವಾಮಿನಗರ, ಗೋಪಾಲನ್ ಮಾಲ್, ಜನತಾ ಕಾಲೊನಿ, ಸಿಸಿಬಿ ಆಫೀಸ್ ಮೈಸೂರು ರಸ್ತೆ, ಫಾರೂಕಿಯಾನಗರ, ಗೌರಿಪಾಳ್ಯ, ವಿಎಸ್ ಗಾರ್ಡನ್, ಕೆಎಚ್ ರಂಗನಾಥ್ ಕಾಲೊನಿ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಇದಲ್ಲದೇ, ಅಪೋಲೋಪಾರ್ಕ್ ವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ನಿರ್ವಹಣಾ ಕೆಲಸ ನಡೆಯುತ್ತಿರುವ ಕಾರಣ ಜು.25ರಂದು ಬೆಳಗ್ಗೆ 10ರಿಂದ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ದೊಡ್ಡಬಳ್ಳಾಪುರ ತಾಲೂಕಿನ ಅಪೋಲೋಪಾರ್ಕ್, ಭಾಶೆಟ್ಟಹಳ್ಳಿ, ರೈಲ್ವೆನಿಲ್ದಾಣ, ಮುತ್ತೂರು, ಅರೇಹಳ್ಳಿಗುಡ್ಡದಹಳ್ಳಿ, ಎಳ್ಳುಪುರ, ವರದನಹಳ್ಳಿ, ಮಂಜಾರಹೊಸಹಳ್ಳಿ, ಭುವನೇಶ್ವರನಗರ, ಕೆಎಸ್ಎಸ್ಐಡಿಸಿ, ದೊಡ್ಡಬಳ್ಳಾಪುರ ಕೆಐಎಡಿಬಿ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಜು.27ರಂದು
ವಿದ್ಯುತ್ ಇಲ್ಲ
ಬೆಂಗಳೂರು: ಬ್ಯಾಡರಹಳ್ಳಿ ವಿದ್ಯುತ್ ಕೇಂದ್ರದಲ್ಲಿ ನಿರ್ವಹಣಾ ಕೆಲಸ ನಡೆಯುತ್ತಿರುವ ಕಾರಣ ಜು.27ರಂದು ಬೆಳಗ್ಗೆ 10ರಿಂದ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಣ್ಣ ಸ್ವಾಮಿ ಲೇಔಟ್, ಇಂದಿರಾ ಕಾಲೊನಿ, ಮೂಕಾಂಬಿಕಾ ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅಮರಜ್ಯೋತಿ ವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ನಿರ್ವಹಣಾ ಕೆಲಸ ನಡೆಯುತ್ತಿರುವ ಕಾರಣ ಜು. 24ರಂದು ಬೆಳಗ್ಗೆ 10ರಿಂದ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ದೊಮ್ಮಲೂರು 2ನೇ ಹಂತ, ದೊಮ್ಮಲೂರು ಬಿಡಿಎ, ಎಚ್ಎಎಲ್ 2ನೇ ಹಂತ 13ನೇ ಮುಖ್ಯರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಎಟಿಎಂ ದರೋಡೆ ಯತ್ನ ಆರೋಪಿ ಬಂಧನ
ಬೆಂಗಳೂರು: ಎಚ್ಎಸ್ಆರ್ ಬಡಾವಣೆ ಅಗರ ಮುಖ್ಯರಸ್ತೆ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ನಡೆದ ದರೋಡೆ ಯತ್ನ ಹಾಗೂ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಎಚ್ಎಸ್ಆರ್ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ಕೂಡ್ಲು ನಿವಾಸಿ ಕ್ಯಾಬ್ ಚಾಲಕ ಬಸವರಾಜು ಹುಲಗುಂದಿ ಬಂಧಿತ. ಹಣಕಾಸು ಸಮಸ್ಯೆಯಿಂದ ಬಳಲುತ್ತಿದ್ದ ಬಸವರಾಜು ಇದಕ್ಕಾಗಿ ಎಟಿಎಂ ಕೇಂದ್ರದಿಂದ ಹಣ ದೋಚುವ ಸಂಚು ರೂಪಿಸಿದ್ದ. ಜು.12ರ ನಸುಕಿನ 4ರ ಸುಮಾರಿಗೆ ಎಟಿಎಂ ಕೇಂದ್ರಕ್ಕೆ ನುಗ್ಗಿದ ಬಸವರಾಜು ಎಟಿಎಂ ಯಂತ್ರ ಒಡೆದು ಹಣ ದೋಚಲು ಯತ್ನಿಸಿದ್ದ. ಇದನ್ನು ಗಮನಿಸಿದ್ದ ಸೆಕ್ಯೂರಿಟಿ ಗಾರ್ಡ್ ಶಂಶೂಲ್ ಖಾನ್ಗೆ ರಾಡ್ನಿಂದ ಹಲ್ಲೆ ನಡೆಸಿ ಬಳಿಕ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಹಾಕಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ!