ದೂಧಗಂಗಾ ಸಕ್ಕರೆ ಕಾರ್ಖಾನೆಗೆ ಅವಿರೋಧ ಆಯ್ಕೆ
ಚಿಕ್ಕೋಡಿ: ಜಿಲ್ಲೆಯ ಗಮನ ಸೆಳೆದಿದ್ದ ಚಿಕ್ಕೋಡಿ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಮುಂಬರುವ 5 ವರ್ಷದ ಅವಧಿಗೆ 16 ಜನ ಆಡಳಿತ ಮಂಡಳಿ ಸದಸ್ಯರು ಶುಕ್ರವಾರ ಅವಿರೋಧ ಆಯ್ಕೆಯಾಗಿದ್ದಾರೆ.
ರಾಜ್ಯಸಭೆ ಸದಸ್ಯ ಡಾ. ಪ್ರಭಾಕರ ಕೋರೆಯವರ ನೇತೃತ್ವದಲ್ಲಿ ಕಾರ್ಖಾನೆಯ ನಿರ್ದೇಶಕ ಅಮಿತ ಕೋರೆ ಮತ್ತು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಪ್ರಯತ್ನದಿಂದ ಗುರುವಾರ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರನ್ನು ಅವಿರೋಧ ಆಯ್ಕೆ ಅವಿರೋಧ ಆಯ್ಕೆ ನಡೆದಿದೆ.
ಚುನಾವಣೆಯ ನಾಮಪತ್ರ ಹಿಂದಕ್ಕೆ ಪಡೆಯಲು ಗುರುವಾರ ಕೊನೆ ದಿನವಾಗಿತ್ತು.
ನಾಮಪತ್ರಗಳನ್ನು ಹಿಂದಕ್ಕೆ ಪಡೆದುಕೊಂಡಿರುವ ಹಿನ್ನಲೆಯಲ್ಲಿ 16 ಜನ ನಿರ್ದೇಶಕರ ಆಯ್ಕೆ ಅವಿರೋಧವಾಗಿ ಆಗಿದೆ ಎಂದು ಚುನಾವಣಾಧಿಕಾರಿ ಆರ್.ಎಸ್. ನೂಲಿ ಮತ್ತು ಸಹಾಯಕ ಚುನಾವಣಾಧಿಕಾರಿ ಎಸ್.ಎಸ್. ಕಳಸನ್ನವರ ತಿಳಿಸಿದ್ದಾರೆ.
ಪ್ರಸಕ್ತ ಆಡಳಿತ ಮಂಡಳಿಯಲ್ಲಿ ಅ ವರ್ಗದಿಂದ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಅಮೀತ ಕೋರೆ, ಅಣ್ಣಾಸಾಹೇಬ ಜೊಲ್ಲೆ, ಮಲ್ಲಿಕಾರ್ಜುನ ಕೋರೆ, ರೋಹನ ಉರ್ಫ ಸಂದೀಪ ಪಾಟೀಲ, ಪರಸಗೌಡಾ ಪಾಟೀಲ, ಅಜೀತ ದೇಸಾಯಿ, ಭರತೇಶ ಬನವಣೆ, ಪ್ರಕಾಶ ಪಾಟೀಲ, ಸುಭಾಷ ಕಾತ್ರಾಳೆ, ಕೆ.ಕೆ. ಮೈಶಾಳೆ, ತಾತ್ಯಾಸಾಹೇಬ ಕಾಟೆ, ಸಾತಪ್ಪಾ ಸಪ್ತಸಾಗರೆ, ಮಹಾವೀರ ಮಿರ್ಜಿ, ಬಾಳಗೌಡಾ ಶಿವಮೂರ್ತಿ ರೇಂದಾಳೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬ ಮತ್ತು ಡ ವರ್ಗದಿಂದ ನಂದಕುಮಾರ ನಾಶಿಪುಡಿ ಆಯ್ಕೆಯಾಗಿದ್ದಾರೆ. ಪ್ರಸಕ್ತ ಆಡಳಿತ ಮಂಡಳಿಯಲ್ಲಿ ಅ ವರ್ಗದಲ್ಲಿ ಬಾಳಗೌಡಾ ಶಿವಮೂರ್ತಿ ರೇಂದಾಳೆ, ಮಹಾವೀರ ಯಶವಂತ ಮಿರ್ಜಿ, ರೋಹನ ಉರ್ಫ ಸಂದೀಪ ಅಶೋಕ ಪಾಟೀಲ ಎಂಬ ಮೂವರು ಹೊಸ ಮುಖಗಳು ಸ್ಥಾನ ಪಡೆದುಕೊಂಡಿದ್ದಾರೆ.
16 ಜನ ಆಡಳಿತ ಮಂಡಳಿ ಸದಸ್ಯರ ಅವಿರೋಧ ಆಯ್ಕೆ ಫಲಿತಾಂಶ ಫೆ. 15ರಂದು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.