ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಳಗಾವಿ

ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞವೈದ್ಯರ ಕೊರತೆ

Parashurama
Updated On : 12 Feb 2013, 12:06 pm

ಬೆಳಗಾವಿ: ಜಿಲ್ಲೆಯ ತಾಲೂಕು ಆರೋಗ್ಯ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ತಜ್ಞ ವೈದ್ಯರು ಸೇರಿದಂತೆ ಸಿಬ್ಬಂದಿ ಕೊರತೆಯಿಂದ            ನಲುಗುತ್ತಿವೆ. ಬಡ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವಿವಿಧ ರೋಗಗಳಿಗೆ ಸಂಬಂಧಿಸಿದ ತಜ್ಞ ವೈದ್ಯರ ಹುದ್ದೆಗಳು ಖಾಲಿ ಉಳಿದಿವೆ. ಪರಿಣಾಮ ಸರ್ಕಾರಿ ಆಸ್ಪತ್ರೆಗಳು ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಗೆ ಮಾತ್ರ ಸೀಮಿತ ಎನ್ನುವಂತಾಗಿದೆ. ಖಾಸಗಿ ತಜ್ಞ ವೈದ್ಯರ ಬಳಿಗೆ ತೆರಳಿ ಅಪಾರ ಪ್ರಮಾಣದಲ್ಲಿ ಹಣ ತೆತ್ತು ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ರೋಗಿಗಳಿಗೆ ಉಂಟಾಗಿದೆ.
ಜಿಲ್ಲೆಗೆ ಒಟ್ಟು 167 ವಿವಿಧ ತಜ್ಞ ವೈದ್ಯರ ಹುದ್ದೆಗಳು ಮಂಜೂರಾಗಿವೆ. ಆದರೆ, ಸದ್ಯ ತಾಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೇವಲ 68 ತಜ್ಞ ವೈದ್ಯರಿದ್ದಾರೆ. 99 ತಜ್ಞ ವೈದ್ಯರ ಹುದ್ದೆಗಳು ಖಾಲಿ ಇವೆ. ಅಲ್ಲದೇ ಬಿ ಗ್ರುಫ್‌ನಲ್ಲಿ-9, ಸಿ ಗ್ರುಪ್‌ನಲ್ಲಿ-735,  ಡಿ ಗ್ರುಪ್‌ನಲ್ಲಿ 525 ಹುದ್ದೆಗಳು ಖಾಲಿ ಇವೆ. ಹೀಗೆ ಆರೋಗ್ಯ ಕೇಂದ್ರಗಳು ಮಾನವ ಸಂಪನ್ಮೂಲದ ಕೊರತೆ ಎದುರಿಸುತ್ತಿವೆ. ಇದರ ನೇರ ಪರಿಣಾಮ ರೋಗಿಗಳ ಮೇಲೆ ಉಂಟಾಗುತ್ತಿದೆ.
ಖಾಲಿ ಇರುವ ಹುದ್ದೆಗಳು: ಮುಖ್ಯ ವೈದ್ಯಾಧಿಕಾರಿ-7, ಸ್ತ್ರೀರೋಗ ತಜ್ಞ-11, ಅರವಳಿಗೆ ತಜ್ಞ-4, ಚಿಕ್ಕ ಮಕ್ಕಳ ತಜ್ಞ-15, ಎಲಬು-ಕೀಲುಗಳ ತಜ್ಞ-7, ಜನರಲ್ ಮೆಡಿಸಿನ್-19, ಸಾಮಾನ್ಯ ಶಸ್ತ್ರ ಚಿಕಿತ್ಸೆ ತಜ್ಞ-5, ಕಿವಿ, ಗಂಡಲು, ಮೂಗು ತಜ್ಞ-7, ನೇತ್ರ ತಜ್ಞ-6,  ಚರ್ಮರೋಗ ತಜ್ಞ-6, ಎಸ್‌ಎಂಓ-12, ದಂತ ವೈದ್ಯ-11 ಸೇರಿದಂತೆ 99 ಹುದ್ದೆಗಳು ಖಾಲಿ ಇವೆ. ಜತೆಗೆ ವೈದ್ಯಕೀಯ ಅಧಿಕಾರಿ-37, ತಾಲೂಕು ವೈದ್ಯಾಧಿಕಾರಿ-4,   ಸಹಾಯಕ ದಂತ ಶಸ್ತ್ರ ಚಿಕಿತ್ಸಕ-11 ಹುದ್ದೆಗಳು ಖಾಲಿಯಿವೆ.
ಸರ್ಕಾರ ಬಡ ರೋಗಿಗಳಿಗೆ ಅನುಕೂಲವಾಗಲಿ ಮತ್ತು ಆಯಾ ತಾಲೂಕು ಮತ್ತು ಪ್ರಾಥಮಿಕ ಕೇಂದ್ರದಲ್ಲಿ ಎಲ್ಲ ರೀತಿಯ ಚಿಕಿತ್ಸೆ ದೊರೆಯಲೆಂದು ತಜ್ಞ ವೈದ್ಯರ ಹುದ್ದೆಗಳನ್ನು ಸೃಷ್ಟಿಸಿದೆ.
ಜತೆಗೆ ಈ ತಜ್ಞ ವೈದ್ಯರಿಗೆ ಲಕ್ಷ ಲಕ್ಷ ಸಂಬಳ ನೀಡಲು ಸಿದ್ಧವಿದ್ದರೂ ತಜ್ಞ ವೈದ್ಯರು ಮಾತ್ರ ಇತ್ತ ಮುಖಮಾಡುತ್ತಿಲ್ಲ. ಹೀಗಾಗಿ ಕಳೆದ ಹಲವು ವರ್ಷಗಳಿಂದ ಬೆಳಗಾವಿ , ರಾಯಚೂರು, ಬಳ್ಳಾರಿ, ಗುಲ್ಬರ್ಗಾ ಜಿಲ್ಲೆ ಸೇರಿದಂತೆ ಮೊದಲಾದಲ ಜಿಲ್ಲೆಯಲ್ಲಿ ತಜ್ಞ ವೈದ್ಯರ ಹುದ್ದುಗಳೂ ಖಾಲಿ ಖಾಲಿಯಾಗಿವೆ.
ರಾಜಕಾರಣಿ ಹಿರಿಯ ಅಧಿಕಾರಿಗಳ ಹಸ್ತಕ್ಷೇಪ: ಗಂಭೀರ ಪ್ರಕರಣಗಳಲ್ಲಿ ರಾಜಕಾರಣಿಗಳ ಮತ್ತು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಹಸ್ತಕ್ಷೇಪದಿಂದಾಗಿ ಸರ್ಕಾರಿ ವೈದ್ಯರು ಸರಿಯಾಗಿ ಕೆಲಸ ಮಾಡದಂತಹ ಪರಿಸ್ಥಿತಿ ಉಂಟಾಗಿದೆ. ಅದರಲ್ಲಿಯೂ ಅತ್ಯಾಚಾರ ಪ್ರಕರಣ, ಕೊಲೆ, ಸುಲಿಗೆ, ಅಪಘಾತ ಸೇರಿದಂತೆ ಸೂಕ್ಷ್ಮ ಪ್ರಕರಣಗಳಲ್ಲಿ ವೈದ್ಯರ ಮೇಲೆ ಒತ್ತಡ ತಂದು ತಮಗೆ ಬೇಕಾದಂತಹ ವರದಿ ಬರೆಸಿಕೊಳ್ಳುವುದಕ್ಕಾಗಿ ದಬಾಯಿಸುತ್ತಾರೆ. ಹೀಗಾಗಿ ನಿಷ್ಠಾವಂತ, ಪ್ರಾಮಾಣಿಕ ವೈದ್ಯರು ಗಿಳಿ ಪಾಠ ಒಪ್ಪಿಸಿದಂತೆ ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
- ಶ್ರೀಧರ ಕೋಟಾರಗಸ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments