ನಂಜುಂಡಪ್ಪ ವರದಿ: ಭೌತಿಕ ಮೌಲ್ಯಮಾಪನ
ಬೆಳಗಾವಿ: ಡಾ. ನಂಜುಂಡಪ್ಪ ವರದಿ ಅನುಷ್ಠಾನದಿಂದಾದ ಭೌತಿಕ ಪ್ರಗತಿಂು ಮೌಲ್ಯಮಾಪನ ಮಾಡಲಾಗುವುದೆಂದು ಡಾ. ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿಂು ಅಧ್ಯಕ್ಷ ತ್ರಿವಿಕ್ರಮ ಜೋಶಿ ಹೇಳಿದ್ದಾರೆ.
ಡಾ. ನಂಜುಂಡಪ್ಪ ವರದಿ ಅನುಷ್ಠಾನ ಕುರಿತು ಬೆಳಗಾವಿ ಜಿಲ್ಲೆಂು ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೌಲ್ಯಮಾಪನ ಜವಾಬ್ದಾರಿಂುನ್ನು ಧಾರವಾಡದ ಸಿಎಂಡಿಆರ್ ಸಂಸ್ಥೆಗೆ ವಹಿಸಿ, 3 ತಿಂಗಳಲ್ಲಿ ವರದಿ ನೀಡಲು ತಿಳಿಸಲಾಗುವುದು ಎಂದು ಹೇಳಿದರು.
ಡಾ. ನಂಜುಂಡಪ್ಪ ವರದಿ ಅನುಷ್ಠಾನದಿಂದ ಆಗಿರುವ ಅಭಿವೃದ್ಧಿ ಕಾಂರ್ುಕ್ರಮಗಳ ಕುರಿತು ಸಮಗ್ರ ವರದಿಯನ್ನು ಏಪ್ರಿಲ್ ನಲ್ಲಿ ಸಿದ್ಧಪಡಿಸಲಾಗುವುದು. ಇದರ ಜೊತೆಗೆ ಈ ವರದಿ ಅನುಷ್ಠಾನದಿಂದ ಕೈಗೊಳ್ಳಲಾದ ಕಾಮಗಾರಿಗಳ ಸ್ಥಳದಲ್ಲಿ ನಂಜುಂಡಪ್ಪ ವರದಿ ಅನುಷ್ಠಾನ ವರದಿಂು ಕಾಮಗಾರಿ ಎಂದು ನಾಮಫಲಕ ಹಾಕಲು ಸಹ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಡಾ. ನಂಜುಂಡಪ್ಪ ವರದಿ ಅನ್ವಂು ರಾಜ್ಯದಲ್ಲಿ ಒಟ್ಟು 114 ತಾಲೂಕುಗಳನ್ನು ಹಿಂದುಳಿದ ತಾಲೂಕುಗಳೆಂದು ಗುರುತಿಸಲಾಗಿದೆ. ಇದರಲ್ಲಿ 39 ತಾಲೂಕುಗಳು ಅತ್ಯಂತ ಹಿಂದುಳಿದ, 40 ತಾಲೂಕುಗಳು ಅತೀ ಹಿಂದುಳಿದ ಹಾಗೂ 35 ತಾಲೂಕುಗಳು ಹಿಂದುಳಿದ ತಾಲೂಕುಗಳೆಂದು ಗುರುತಿಸಲಾಗಿದೆ. ಈ ತಾಲೂಕುಗಳಲ್ಲಿ 27 ವಿವಿಧ ಇಲಾಖೆಗಳ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಈ ತಾಲೂಕುಗಳಲ್ಲಿ ಈ ವರದಿ ಅನುಷ್ಠಾನಗೊಳಿಸಲು ರು. 31 ಸಾವಿರ ಕೋಟಿ ಖರ್ಚು ಮಾಡಲಾಗುವುದು. ಇದರಲ್ಲಿ ರು. 15 ಸಾವಿರ ಕೋಟಿ ಮುಂಗಡ ಪತ್ರದಲ್ಲಿ ಹಾಗೂ ರು. 16 ಸಾವಿರ ಕೋಟಿ ವಿಶೇಷ ಅಭಿವೃದ್ಧಿ ಂೋಜನೆಂು ಮೂಲಕ ಬಿಡುಗಡೆ ಮಾಡಲು ವರದಿಂುಲ್ಲಿ ತಿಳಿಸಲಾಗಿತ್ತು.
ಈ ವರದಿಂುನ್ನು ಅನುಷ್ಠಾನಗೊಳಿಸಲು 8 ವರ್ಷಗಳ ಕಾಲಾವಕಾಶ ನೀಡಿ ವಿಶೇಷ ಅಭಿವೃದ್ಧಿ ಂೋಜನೆಂುಡಿ ಪ್ರತಿ ವರ್ಷ ರು. 2000 ಕೋಟಿ ಬಿಡುಗಡೆ ಮಾಡಲಾಗುತ್ತಿದೆ. 2007-08 ರಲ್ಲಿ ಈ ವರದಿಂು ಅನುಷ್ಠಾನ ಪ್ರಾರಂಭವಾಗಿದ್ದು, 2012 ಡಿಸೆಂಬರ್ ಅಂತ್ಯಕ್ಕೆ ಒಟ್ಟು ರು. 10421 ಕೋಟಿ ಖರ್ಚಾಗಿದ್ದು, 2012-13 ನೇ ಸಾಲಿನಲ್ಲಿ ರು. 2680 ಕೋಟಿ ಬಿಡುಗಡೆ ಮಾಡಲಾಗಿದ್ದು, ಆ ಪೈಕಿ ರು. 1603 ಕೋಟಿ ಬಿಡುಗಡೆಂಾಗಿದೆ ಎಂದು ತ್ರಿವಿಕ್ರಮ ಜೋಶಿ ವಿವರಿಸಿದರು.
ಪ್ರಗತಿ ಮೌಲ್ಯ ಮಾಪನ ಆಗಿಲ್ಲ: ಇಷ್ಟೆಲ್ಲ ಹಣ ಖರ್ಚು ಮಾಡಿದ್ದರೂ ಸಹ ಭೌತಿಕ ಪ್ರಗತಿ ಕುರಿತು ಮೌಲ್ಯಮಾಪನ ಈವರೆಗೆ ಆಗಿಲ್ಲ.
ಕಾರಣ ಈ ಕುರಿತು ಮೌಲ್ಯಮಾಪನ ಮಾಡಿ ಜನರಿಗೆ ಇದರ ಅಭಿವೃದ್ಧಿಂು ಚಿತ್ರಣ ನೀಡಲಾಗುವುದು ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ 7 ತಾಲೂಕು: ಪ್ರಸಕ್ತ ವರ್ಷ ಬೆಳಗಾವಿ ಜಿಲ್ಲೆಂುಲ್ಲಿ 7 ಹಿಂದುಳಿದ ತಾಲೂಕುಗಳೆಂದು ನಂಜುಂಡಪ್ಪ ವರದಿ ವ್ಯಾಪ್ತಿಗೆ ಬರುತ್ತಿದ್ದು, ಪ್ರಸಕ್ತ ವರ್ಷ ರು. 74.51 ಕೋಟಿ ಅನುದಾನ ಒದಗಿಸಲಾಗಿದೆ. ಈ ಪೈಕಿ ಈ ವರೆಗೆ ರು. 53.86 ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಿದರು.
ಪ್ರಗತಿ ಪರಿಶೀಲನಾ ಸಭೆಂು ಮತ್ತು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎನ್. ಜಂುರಾಂ ಹಾಗೂ ಇತರ ಇಲಾಖೆಯ ಅಧಿಕಾರಿಗಳು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.