ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಳಗಾವಿ

ಸಿಸಿಐಎಂ ಸದಸ್ಯರಾಗಿ ಡಾ. ಶ್ರೀನಿವಾಸ ನೇಮಕ

Parashurama
Updated On : 14 Feb 2013, 1:12 am

ಬೆಳಗಾವಿ: ಇಲ್ಲಿನ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ. ಶ್ರೀನಿವಾಸ ಪ್ರಸಾದ ಅವರು ಕೇಂದ್ರದ ಭಾರತೀಯ ವೈದ್ಯ ಪದ್ಧತಿಗಳ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ದೆಹಲಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಆಯುಷ ವಿಭಾಗ ಇವರನ್ನು ಕೆಎಲ್‌ಇ ವಿಶ್ವ ವಿದ್ಯಾಲಯ ವತಿಯಿಂದ ಐದು ವರ್ಷಗಳ ಕಾಲ ನೇಮಕಗೊಳಿಸಿದೆ. ಡಾ. ಶ್ರೀನಿವಾಸ ಪ್ರಸಾದ ಅವರು ಸಿಸಿಐಎಂ ಸದಸ್ಯರಾಗಿ ನೇಮಕಗೊಂಡಿದಕ್ಕೆ ಕೆಎಲ್‌ಇ ವಿಶ್ವ ವಿದ್ಯಾಲಯದ ಕುಲಪತಿ ಡಾ. ಪ್ರಭಾಕರ ಕೋರೆ ಹಾಗೂ ಉಪ ಕುಲಪತಿ ಡಾ. ಚಂದ್ರಕಾಂತ ಕೊಕಾಟೆ ಹರ್ಷ ವ್ಯಕ್ತಪಡಿಸಿದ್ದಾರೆ.
ಎಸ್‌ಡಿಎಂಸಿ ನೂತನ ಪದಾಧಿಕಾರಿಗಳ ಆಯ್ಕೆ
ಬೆಳಗಾವಿ: ತಾಲೂಕಿನ ಕಂಗ್ರಾಳಿ (ಬಿ.ಕೆ)ಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್‌ಡಿಎಂಸಿ ಅಧ್ಯಕ್ಷರಾಗಿ ರಾಮಚಂದ್ರ ನಿರ್ವಾಣಿ ಮತ್ತು ಉಪಾಧ್ಯಕ್ಷರಾಗಿ ಶಾರದಾ ರಾಠೋಡ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮತು 11 ಜನರನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಪ್ರತಾಪ ಕೋಳಿ ಮೊದಲಾದವರು ಇದ್ದರು ಎಂದು ಪ್ರಕಟಣೆ      ತಿಳಿಸಿದೆ.
ನಾಳೆ ಕಳಸಾರೋಹಣ ಕಾರ್ಯಕ್ರಮ
ಬೆಳಗಾವಿ: ಇಲ್ಲಿನ ವಡಗಾವಿಯ ತೆಗ್ಗಿನ ಗಲ್ಲಿ ವಡ್ಡರ ಛಾವಣಿಯಲ್ಲಿ ದುರ್ಗಾದೇವಿ ಟ್ರಸ್ಟ ಕಮಿಟಿಯಿಂದ ದುರ್ಗಾದೇವಿ ದೇವಸ್ಥಾನ ಕಳಸಾರೋಹಣ ಕಾರ್ಯಕ್ರಮ ಫೆ. 15 ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ. ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ಅವರ ಹಸ್ತದಿಂದ ಕಳಸಾರೋಹಣ ಕಾರ್ಯಕ್ರಮ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.
21ರಿಂದ ರಾಣಿ ಚನ್ನಮ್ಮ ಕ್ರಿಕೆಟ್ ಪಂದ್ಯಾವಳಿ
ಬೆಳಗಾವಿ: ಇಲ್ಲಿನ ಕರ್ನಾಟಕ ನವ ನಿರ್ಮಾಣ ಪಡೆ ವತಿಯಿಂದ ರಾಣಿ ಚನ್ನಮ್ಮ ಕ್ರಿಕೆಟ್ ಪಂದ್ಯಾವಳಿ ಫೆ.21 ರಂದು ಬೆಳಗ್ಗೆ 9 ಗಂಟೆಗೆ ನಗರದ ಮಾಳಮಾರುತಿಯ ಬಾಲಭವನ ಆಟದ ಮೈದಾನದಲ್ಲಿ ಆರಂಭವಾಗಲಿದೆ. ಪ್ರಥಮ ಬಹುಮಾನ  25 ಸಾವಿರ, ದ್ವಿತೀಯ ಬಹುಮಾನ 15 ಸಾವಿರ ನಗದು ಹೊಂದಿದ್ದು, ಹೆಚ್ಚಿನ ಮಾಹಿತಿಗಾಗಿ 9916461658ಗೆ ಸಂಪರ್ಕಿಲಸು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments