ಕೋರೆ, ಜೀವಿ ಸೇರಿ 12 ಗಣ್ಯರಿಗೆ 'ಗೌಡಾ' ಪ್ರದಾನ
ಬೆಳಗಾವಿ: ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಅರ್ಹರಾದ ಶೇ.15ರಿಂದ 20ರಷ್ಟು ಜನರು ವಿಶ್ವವಿದ್ಯಾಲಂುಗಳಲ್ಲಿ ಇನ್ನೂ ಪ್ರವೇಶ ಪಡೆಂುಬೇಕಾಗಿದೆ. ಇದು ಸಾಧ್ಯವಾಗಲು ಇನ್ನೂ 750 ಹೊಸ ವಿಶ್ವವಿದ್ಯಾಲಯಗಳ ಅವಶ್ಯಕತೆ ಇದೆ. ಇಷ್ಟೊಂದು ಸಂಖ್ಯೆಯ ವಿಶ್ವವಿದ್ಯಾಲಯಗಳಿಗೆ ಅಗತ್ಯ ಶ್ರೇಷ್ಠ ಕುಲಪತಿಗಳು, ವಿಜ್ಞಾನಿಗಳು, ಸಮರ್ಥ ಅಧ್ಯಾಪಕರು ನಮ್ಮಲ್ಲಿದ್ದಾರೆಯೇ ಎಂದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ವೆಂಕಟಾಚಲಂ್ಯು ಪ್ರಶ್ನಿಸಿದರು.
ನಗರದ ವಿಶ್ವೇಶ್ವರಂ್ಯು ತಾಂತ್ರಿಕ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಆಂೋಜಿಸಲಾಗಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಂುದ ಪ್ರಥಮ ಘಟಿಕೋತ್ಸವದಲ್ಲಿ ಮಾತನಾಡಿದರು.
ಗೌರವ ಡಾಕ್ಟರೇಟ್ ಪ್ರದಾನ: ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರ ಅನುಪಸ್ಥಿತಿಂುಲ್ಲಿ ನ್ಯಾ. ಜಿ.ವೆಂಕಟಾಚಲಯ್ಯ ಅವರಿಗೆ ಡಾಕ್ಟರ್ ಆಫ್ ಲಾ, ಪ್ರೊ. ಬಿಸಲಯ್ಯ, ಪ್ರೊ.ಐಷರ್ ಜಡ್ಜ್ ಆಹ್ಲುವಾಲಿಂಾ, ಬಿ.ಎಂ.ಪಾಟೀಲ (ಮರಣೋತ್ತರ), ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ನಾಗನೂರ ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ, ವೀರಣ್ಣ ಮತ್ತಿಕಟ್ಟಿ, ಸಿದ್ದನಗೌಡ ಪಾಟೀಲ, ಡಾ. ಸರಜೂ ಕಾಟ್ಕರ್ ಅವರಿಗೆ ಡಾಕ್ಟರ್ ಆಫ್ ಲೆಟರ್ರ್ಸ್, ಕನ್ನಡದ ವಿದ್ವಾಂಸ ಶತಾಯುಷಿ ಜಿ.ವೆಂಕಟಸುಬ್ಬಯ್ಯ, ಪ್ರೊ.ಸವದತ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.