ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಳಗಾವಿ

ರೈತರಿಲ್ಲದಿದ್ದರೆ ತಂತ್ರಜ್ಞಾನ ಶೂನ್ಯ: ಅಂಗಡಿ

Parashurama
Updated On : 28 Jan 2013, 11:45 am

ಬೆಳಗಾವಿ: ಇಂದು ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರವಾಗುತ್ತಿವೆ ನಿಜ. ಆದರೆ, ಅನ್ನ ಕೊಡುವ ರೈತರೇ ಇಲ್ಲದಿದ್ದರೆ ತಂತ್ರಜ್ಞಾನ ಎಷ್ಟು ಅಭಿವೃದ್ಧಿಗೊಂಡರೇನು ಫಲ ಎಂದು ಸಂಸದ ಸುರೇಶ್ ಅಂಗಡಿ ಪ್ರಶ್ನಿಸಿದರು.
ಸುವರ್ಣ ವಿಧಾನಸೌಧದಲ್ಲಿ ಸೋಮವಾರ 2011-12ನೇ ಸಾಲಿನ ಕೃಷಿ ಪಂಡಿತ ಹಾಗೂ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ತಂತ್ರಜ್ಞಾನ ಮುಂದುವರಿದರೂ ನಮಗೆ ರೈತರು ಬೇಕೇ ಬೇಕು. ಕೃಷಿಯಲ್ಲಿ ಸಂಶೋಧನೆ ನಡೆಯಬೇಕಾದ ಅಗತ್ಯವಿದೆ ಎಂದರು.
ದೇಶದಲ್ಲಿ ಶೇ.60 ರಷ್ಟು ಕೃಷಿಕರಿದ್ದು, ದೇಶದ 120 ಕೋಟಿ ಜನತೆಗೆ ಅನ್ನ ಕೊಡುತ್ತಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಕೃಷಿ ಮತ್ತು ನೇಕಾರಿಕೆ ಪ್ರಮುಖ ಪಾತ್ರ ವಹಿಸುತ್ತವೆ. ಇವೆರಡೂ ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ. ಹಸಿದ ಹೊಟ್ಟೆಗೆ ಅನ್ನವಾದರೆ, ಮಾನ ಮರ್ಯಾದೆಗಾಗಿ ದೇಹ ಮುಚ್ಚಿಕೊಳ್ಳಲು ಬಟ್ಟೆ ಬೇಕು. ಹಾಗಾಗಿ, ಕೃಷಿ ಮತ್ತು ನೇಕಾರಿಕೆ ದೇಶದ ಎರಡು ಕಣ್ಣುಗಳಿದ್ದಂತೆ. ಅಲ್ಲದೇ, ಇವೆರಡೂ ಕ್ಷೇತ್ರಗಳಲ್ಲಿ ಸಹಸ್ರಾರು ಜನರಿಗೆ ಉದ್ಯೋಗ ದೊರೆಯುತ್ತದೆ ಎಂದರು.

ಅಂಧ ಕೃಷಿಕನ ಸಾಧನೆ
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಡಿವಾಳ ಗ್ರಾಮದ 60 ವಯಸ್ಸಿನ ಕೃಷಿಕ ವೆಂಕಟೇಶಪ್ಪ ವೀರನಬೋದಿ ಅವರಿಗೆ ಎರಡೂ ಕಣ್ಣುಗಳೂ ಇಲ್ಲ. ಹುಟ್ಟಿದ ಎರಡು ವರ್ಷದಲ್ಲೇ ಕಾಯಿಲೆಯಿಂದಾಗಿ ಕಣ್ಣುಗಳನ್ನು ಕಳೆದು ಕೊಂಡಿದ್ದಾರೆ. ಸಾಧನೆಗೆ ಅಂಗವೈಕಲ್ಯ, ಅಂಧತ್ವ ಅಡ್ಡಿಯಾಗದು ಎಂಬುದಕ್ಕೆ ಇವರೇ ಸಾಕ್ಷ್ದಿರೆ. ಮಳೆಯಾಶ್ರಿತ ರಾಜ್ಯ ಮಟ್ಟದ ರಾಗಿ ಬೆಳೆ ಸ್ಪರ್ಧೆಯಲ್ಲಿ ಇವರಿಗೆ ಪ್ರಥಮ ಸ್ಥಾನ ದೊರೆತಿದೆ. ಸುಮಾರು 2 ಎಕರೆ ಖುಷ್ಕಿ 5 ಗುಂಟೆ ತರಿ ಜಮೀನು ಹೊಂದಿರುವ ಸಣ್ಣ ರೈತರಾಗಿ ಕೃಷಿ ಇಲಾಖೆಯ ಸಂಪರ್ಕದಲ್ಲಿ ತಾಂತ್ರಿಕ ಮಾಹಿತಿ ಪಡೆದು ಬೇಸಾಯ ಮಾಡುತ್ತ, ತಾವೇ ಖುದ್ದುಕು ಜಮೀನಿಗೆ ಹೋಗಿ ಕಳೆ ತೆಗೆಯುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments