ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಳಗಾವಿ

'ದುರದುಂಡಿ ಸೇತುವೆ ಕನಸು ನನಸಾಯಿತು'

Parashurama
Updated On : 8 Mar 2013, 11:53 am

ಘಟಪ್ರಭಾ: ದುರದುಂಡಿ, ಗಣೇಶವಾಡಿ, ದಂಡಾಪೂರ, ರಾಜಾಪೂರ, ಬಡಿಗವಾಡ, ಮಂಟೂರ,ಖಡಕಬಾಂವಿ, ಬೆಂಡವಾಡ ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದ್ದ ನೂತನ ದುರದುಂಡಿ ಸೇತುವೆಯನ್ನು ಸಚಿವ ಬಾಲಚಂದ್ರ ಜಾರಕಿಹೊಳಿ ಗುರುವಾರ ಉದ್ಘಾಟಿಸಿದರು.
ಅವರು ಮಾತನಾಡಿ, ಸುಮಾರು 10ಕ್ಕೂ ಹೆಚ್ಚು ಗ್ರಾಮಗಳ ಮುಖ್ಯ ಬೇಡಿಕೆಯಾಗಿದ್ದ ದುರದುಂಡಿ ಹಳ್ಳಕ್ಕೆ ಸೇತುವೆಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದರು. ರು. 1.99 ಕೋಟಿಯಲ್ಲಿ ದುರದುಂಡಿ ಸೇತುವೆ ನಿರ್ಮಾಣ ಮಾಡಲಾಗಿದೆ.
ಈ ಕಾಮಗಾರಿಯು 18 ತಿಂಗಳಲ್ಲಿ ಮುಗಿಯಬೇಕಾಗಿದ್ದರೂ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ, ಗ್ರಾಮಸ್ಥರ ಒತ್ತಾಯದಂತೆ ಕೇವಲ 6 ತಿಂಗಳಲ್ಲಿ ಉತ್ತಮ ಗುಣಮಟ್ಟದ ಸೇತುವೆಯನ್ನು ಲೋಕೋಪಯೋಗಿ ಇಲಾಖೆ ನಿರ್ಮಾಣ ಮಾಡಿ ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಗ್ರಾ.ಪಂ ಅಧ್ಯಕ್ಷೆ ರಾಯವ್ವ ಅಂತರಗಟ್ಟಿ, ಉಪಾಧ್ಯಕ್ಷೆ ಕಾಶಿಬಾಯಿ ಭಜಂತ್ರಿ, ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಶಿವಮೂರ್ತಿ ಹುಕ್ಕೇರಿ, ಮಹಾದೇವ ತಾಂಬಡಿ(ಬಂಗಾರಿ), ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಹೊನ್ನಜ್ಜ ಕೋಳಿ, ರೇವಯ್ಯಾ ಮಠದ, ಶಂಕರ ಗೋರಖನಾಥ, ದುರದುಂಡೆಪ್ಪ ಅಂತರಗಟ್ಟಿ, ಪ್ರಭಾಶುಗರ ನಿರ್ದೇಶಕ ರಾಮಣ್ಣಾ ಬಂಡಿ, ಲಕ್ಷ್ಮಣ ಗಣಪ್ಪಗೋಳ, ಶಿವಲಿಂಗ ಪೂಜೇರಿ, ಬಾಳೇಶ ಜಾಧವ, ಮಹಾದೇವ ಮಾಳ್ಯಾಗೋಳ, ನಾನಪ್ಪ ಸನದಿ, ಸುರೇಶ ಜಾಧವ, ಮಹಾದೇವ ತುಕ್ಕಾನಟ್ಟಿ, ರಾಮಕೃಷ್ಣ ಹೊರಟ್ಟಿ, ಬಡಿಗವಾಡ ತಾಪಂ ಸದಸ್ಯ ಶಿದ್ದಪ್ಪ ಸಿಂಗಮ್ಮನವರ, ಜಿಪಂ ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ, ವಿಠಲ ಸವದತ್ತಿ, ಅಶೋಕ ನಾಯಿಕ, ವಿಠಲ ಸವದತ್ತಿ, ಶಂಕರ ಬಿಲಕುಂದಿ, ಮುತ್ತೆಪ್ಪ ಝಲ್ಲಿ, ಬಸು ಮಾಳೇದವರ, ಹನಮಂತ ರಬಕವಿ, ಸೋಮಯ್ಯಾ ಮಠದ, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ವಿನಾಯಕ ಸುಗೂರ, ಸ.ಕಾ.ಅಭಿಯಂತರ ವ್ಹಿ.ಆರ್.ಅಣ್ಣೀಗೇರಿ, ಗುತ್ತಿಗೆದಾರ ಜಯಶೀಲ ಶೆಟ್ಟಿ, ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments