ರೈತರಿಗೆ ಎಟಿಎಂ ಸೌಲಭ್ಯ ಒದಗಿಸಲು ಚಿಂತನೆ
ಚಿಕ್ಕೋಡಿ: ಬ್ಯಾಂಕುಗಳು ದೇಶದ ಆರ್ಥಿಕ ಅಭಿವೃದ್ಧಿಂುಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸುತ್ತಿದ್ದು, ಸರ್ಕಾರದ ಂೋಜನೆಗಳನ್ನು ಬ್ಯಾಂಕಿನ ಮುಖಾಂತರ ಗ್ರಾಮೀಣ ಪ್ರದೇಶದ ಕಟ್ಟಕಡೆಂು ವ್ಯಕ್ತಿಗೂ ಮುಟ್ಟಿಸುವ ಕೆಲಸವನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮಾಡುತ್ತಿದೆ ಎಂದು ಚಿಕ್ಕೋಡಿ ಪ್ರಾದೇಶಿಕ ವಲಂು ಪ್ರಬಂಧಕ ಆರ್. ಡಿ. ಸುಳ್ಳಿಕೇರಿ ಹೇಳಿದರು.
ಇಲ್ಲಿನ ಎ.ಎ. ಪಾಟೀಲ ಮಹಿಳಾ ಮಹಾವಿದ್ಯಾಲಂುದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ವಿದ್ಯಾರ್ಥಿನಿಂುರಲ್ಲಿ ಬ್ಯಾಂಕಿಂಗ್ ರಂಗ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾಂರ್ುಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡದಂತೆಯೇ ಅವರಿಗೂ ಎಟಿಎಂ ಕಾರ್ಡ ಸೌಲಭ್ಯ ಒದಗಿಸುವ ಗುರಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹೊಂದಿದೆ ಎಂದು ತಿಳಿಸಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಉಲ್ಲಾಸ ಗುಣಗಾ ಮಾತನಾಡಿ, ಮಹಿಳೆಂುರಲ್ಲಿಂೂ ಬ್ಯಾಂಕಿಂಗ್ ರಂಗದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಶೀಘ್ರದಲ್ಲಿಂು ಎಲ್ಲ ಕಡೆಗೂ ಮಹಿಳಾ ವಿಕಾಸ ಗ್ರಾಮ ಸಭೆಗಳನ್ನು ನಡೆಸಲು ನಿರ್ಧರಿಸಿದೆ. ರಾಜ್ಯದಲ್ಲಿ ಶೇ. 40 ರಷ್ಟು ಜನರು ಇನೂ„ ಬ್ಯಾಂಕಿಂಗ್ವ್ಯವಸ್ಥೆಯಿಂದ ಹೊರಗೆ ಇದ್ದು, ಅವರನು ಯಾಂಕಿಂಗ್ವ್ಯವಸ್ಥೆಂು ಪರೀದಿಗೆ ತರುವ ಉದೇಶದಿಂದ ಜನಜಾಗೃತಿ ಸಭæ„ಮಾಡಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ರಾಜ್ಯದಲ್ಲಿ 520ಕ್ಕೂ ಹೆಚ್ಚು ಶಾಖೆಗಳನು„ ಹೊಂದಿದ್ದು, ರು. 13 ಸಾವಿರ ಕೋಟಿಗೂ ಮಿಕ್ಕಿ ವ್ಯವಹಾರ ಮಾಡುತ್ತಿದೆ ಎಂದು ತಿಳಿಸಿದರು. ಪ್ರಾಚಾಂರ್ು ಡಿ.ಎಂ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಚಿಕ್ಕೋಡಿ ಶಾಖಾಧಿಕಾರಿ ಆರ್.ವಿ. ಚಬ್ಬಿ, ಸುರೇಶ ಅಂಕಲಿ, ಶಶಿಕಾಂತ ಪದಕಿ ಮುಂತಾದವರು ಉಪಸ್ಥಿತರಿದ್ದರು. ಪ್ರೊ. ಜಂುಶ್ರೀ ನಾಗರಳ್ಳಿ ನಿರೂಪಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.