ಪುರುಷ ವಿರೋಧಿ ಸ್ತ್ರೀವಾದ ಬೇಡ: ಇಂದುಮತಿ
ಬೆಳಗಾವಿ: ಸ್ತ್ರೀವಾದವು ಇಂದು ಬಹುಮುಖಿಂಾಗಿ ಬೆಳೆಂುತ್ತಿದೆ. ಇಷ್ಟಾದರೂ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಂುಲ್ಲಿ ಸ್ತ್ರೀಂುರ ಕುರಿತು ಗೌರವ ಮೂಡಿಸುವ ಪ್ರಂುತ್ನದಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎಂದು ಸಿಬಿಆರ್ ನೆಟ್ವರ್ಕ್ ದಕ್ಷಿಣ ಏಷಿಂಾದ ಪ್ರಾದೇಶಿಕ ಸಲಹೆಗಾರ್ತಿ ಇಂದುಮತಿರಾವ್ ಅಭಿಪ್ರಾಂುಪಟ್ಟರು.
ಶನಿವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಂುದ ಕುವೆಂಪು ಸಭಾಂಗಣದಲ್ಲಿ ಅಂತಾರಾಷ್ಟ್ರೀಂು ಮಹಿಳಾ ದಿನಾಚರಣೆಂು ಅಂಗವಾಗಿ ಏರ್ಪಡಿಸಿದ್ದ ಮಹಿಳೆಂುರ ಮೇಲಿನ ದೌರ್ಜನ್ಯ ಜಾಗೃತಿ ಮತ್ತು ಸಾಮಾಜಿಕ ಹೊಣೆಗಾರಿಕೆ ಕುರಿತ ಎರಡು ದಿನಗಳ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಹಿಳೆಂುರು ನೆಮ್ಮದಿಂು ಬದುಕು ಸಾಗಿಸಬೇಕಾದರೆ ಸಾಮಾಜಿಕ ಜವಾಬ್ದಾರಿ ದೊಡ್ಡದು. ಅದಕ್ಕಾಗಿ ಮಹಿಳೆಂುರ ಬಗೆಗಿನ ಗೌರವಾಭಿಮಾನಗಳನ್ನು ಸಮಾಜದಲ್ಲಿ ಬೆಳೆಸಿಕೊಳ್ಳಬೇಕಾಗಿದೆ. ಈಗಿನ ಸ್ತ್ರೀವಾದವು ಪುರುಷ ವಿರೋಧಿ ಧೋರಣೆಂುನ್ನು ಮೂಡಿಸುವಂತಿದೆ. ಇಂತಹ ಸಂದರ್ಭದಲ್ಲಿ ಸ್ತ್ರೀವಾದದಲ್ಲಿ ಭಾರತೀಂು ದೃಷ್ಟಿಕೋನದ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಂುಗಳು ಸಮಾಜದಲ್ಲಿ ಸ್ತ್ರೀಂುರ ಪರವಾಗಿ ಜಾಗೃತಿ ಮೂಡಿಸಬೇಕು ಎಂದರು.
2013ನೇ ವರ್ಷವನ್ನು ವಿಶ್ವಸಂಸ್ಥೆಂು ಅಂತಾರಾಷ್ಟ್ರೀಂು ಅಂಗವಿಕಲ ಮಹಿಳಾ ದಿನಾಚರಣೆಂುನ್ನಾಗಿ ಆಚರಿಸುತ್ತಿದೆ. ಈ ನಿಟ್ಟಿನಲ್ಲಿ ಅಂಗವಿಕಲ ಮಹಿಳೆಂುರ ಬಗೆಗೆ ಸಮಾಜವು ಸಹಾನುಭೂತಿ ತೋರುವುದು ಮಾತ್ರವಲ್ಲ ಕಾಳಜಿಯಿಂದ ಅವರ ನೆಮ್ಮದಿಂು ಬದುಕಿಗೆ ಸಹಾಂು ಹಸ್ತ ಚಾಚಬೇಕೆಂದರು. ಅಲ್ಲದೇ ರಾಣಿಚನ್ನಮ್ಮ ವಿಶ್ವವಿದ್ಯಾಲಂುವು ಭಾರತೀಂು ದೃಷ್ಟಿಕೋನದಿಂದ ಮಹಿಳಾ ಅಧ್ಯಂುನದ ಸಂಂೋಜಿತ ಕೋರ್ಸ್ಗಳನ್ನು ಆರಂಭಿಸುವುದರ ಮೂಲಕ ತನ್ನ ನಿಲುವು ವ್ಯಕ್ತಪಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಂುದ ಕುಲಪತಿ ಪ್ರೊ. ಬಿ.ಆರ್. ಅನಂತನ್ ಮಾತನಾಡಿ, ಶೈಕ್ಷಣಿಕ ವರ್ಷಗಳಲ್ಲಿ ಸೆಂಟರ್ ಪಾರ್ ಇನ್ಕ್ಲ್ಯೂಸಿವ್ ಸ್ಟಡೀಸ್ ಆರಂಭಿಸುವುದಾಗಿ ಘೋಷಿಸಿದರು. ವಿದೇಶಿಂುರ ಆಕ್ರಮಣಕಾರಿ ಸಾಂಸ್ಕೃತಿಕ ನೀತಿಯಿಂದ ದೇಶದ ಮಹಿಳೆಯರಲ್ಲಿ ಗೊಂದಲ ಮೂಡಿರುವುದಂತೂ ಸತ್ಯ. ಹೀಗಾಗಿ ಮಹಿಳೆ ತನ್ನ ನೆಮ್ಮದಿಂುನ್ನು ಕಳೆದುಕೊಳ್ಳುತ್ತಿದ್ದಾಳೆ. ಭಾರತೀಂು ಮೌಲ್ಯಗಳನ್ನು ಪಠ್ಯಕ್ರಮದಲ್ಲಿ ತರುವುದರ ಮೂಲಕ ಮಹಿಳಾ ಅಧ್ಯಂುನಕ್ಕೆ ಹೊಸ ಆಂಾಮ ನೀಡುವ ಉದ್ದೇಶವಿದೆ ಎಂದರು.
ಪ್ರೊ. ಎಚ್.ಎಂ. ಶೈಲಜಾ ಸ್ವಾಗಿತಿಸಿದರು. ಡಾ. ಪೂರ್ಣಿಮಾ ಪಟ್ಟಣಶೆಟ್ಟಿ ಪರಿಚಯಿಸಿದರು. ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಕಾಂರ್ುಕ್ರಮ ನಿರೂಪಿಸಿದರು. ಕಾಂರ್ುಕ್ರಮದಲ್ಲಿ ಚಂಚಲಾ ಅನಂತನ್, ಪ್ರೊ. ಜಿ.ಕೆ. ಬೂದೆಪ್ಪ, ಕುಲಸಚಿವ ಪ್ರೊ. ವಿಷ್ಣುಕಾಂತ ಎಸ್. ಚಟಪಲ್ಲಿ, ಪ್ರೊ. ಜೆ.ಜಿ. ನಾಯಿಕ, ಹಣಕಾಸು ಅಧಿಕಾರಿ ಸಿದ್ರಾಮೇಶ್ವರ ಉಕ್ಕಲಿ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.