ಮಹಾಶಿವರಾತ್ರಿ ಆಚರಣೆಯಲ್ಲಿ ಶಾಂತಿ ಅಡಗಿದೆ
ಬೆಳಗಾವಿ: ಮಹಾಶಿವರಾತ್ರಿ ಆಚರಣೆಯಲ್ಲಿ ಶಾಂತಿ ಅಡಗಿದೆ ಎಂದು ನಾಗನೂರು ರುದ್ರಾಕ್ಷಿಮಠದ ಡಾ. ಸಿದ್ಧರಾಮ ಸ್ವಾಮಿಜಿ ಹೇಳಿದ್ದಾರೆ.
ಶನಿವಾರ ನಗರದ ಪೊಲೀಸ್ ಹೆಡ್ಕ್ವಾಟರ್ಸ್ನಲ್ಲಿ ಶಿವರಾತ್ರಿ ಅಂಗವಾಗಿ ಆಂೋಜಿಸಿದ್ದ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿವನನ್ನು ಆರಾಧಿಸುವ ಶೈವಧರ್ಮ ದೇಶದ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಒಂದಾಗಿದ್ದು, ಐದು ಸಾವಿರ ವರ್ಷಗಳ ಇತಿಹಾಸವಿರುವ ಹರಪ್ಪ ನಾಗರೀಕತೆಂುಲ್ಲೂ ಶಿವನನ್ನು ಆರಾಧಿಸುತ್ತಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಇಂತಹ ಇತಿಹಾಸವಿರುವ ಮಹಾಶಿವರಾತ್ರಿ ಆಚರಣೆಯಂದ ಶಿವನ ಸ್ಮರಣೆ ಮಾಡುವ ಮೂಲಕ ಮನುಷ್ಯನ ಜೀವನ ಸಾರ್ಥಕಗೊಳ್ಳುವುದು ಎಂದರು.
ಒತ್ತಡದ ಜೀವನದಲ್ಲಿ ಧ್ಯಾನ, ಸ್ಮರಣೆಗಾಗಿ ಕೆಲ ಕಾಲ ಮೀಸಲಿಟ್ಟಿರುವುದೇ ಶಿವರಾತ್ರಿ. ಅಂಥ ಶಿವರಾತ್ರಿಂುನ್ನು ಅರ್ಥಪೂರ್ಣವಾಗಿ ಆಚರಿಸಿ ಮಾನಸಿಕ ನೆಮ್ಮದಿ ಪಡೆದುಕೊಳ್ಳಬೇಕು. ಜತೆಗೆ ಜನ್ಮ ನೀಡಿದ ತಂದೆ-ತಾಯಿಂುನ್ನು ಗೌರವಿಸುವಂತೆಯೇ, ಭೂಮಿಯ ಮೇಲೆ ಜೀವಿಗೆ ಬದಕು ಕಟ್ಟಿಕೊಟ್ಟ ಪರಮಾತ್ಮನನ್ನು ನಾವು ಸ್ಮರಣೆ ಮಾಡಲೇಬೇಕು ಎಂದರು.
ಹೀಗಾಗಿ ಸಾತ್ವಿಕ ಆಹಾರ ಸೇವಿಸಿ ದೇವರ ಜ್ಞಾನ ಮಾಡುವುದೇ ಉಪವಾಸ. ಭಕ್ತಿ, ಶ್ರದ್ಧೆ, ವಿಶ್ವಾಸಗಳು ಮನುಷ್ಯನ ನೆಮ್ಮದಿಂು ಜೀವನಕ್ಕೆ ಮಾರ್ಗ ದರ್ಶಕವಾಗಿವೆ ಎಂದರು. ಜಿಲ್ಲಾ ಸಶಸ್ತ್ತ್ರ ಮೀಸಲು ಪಡೆಂು ಪೊಲೀಸ್ ಅಧೀಕ್ಷಕ ಬಿ.ಶಿವಣ್ಣ ಮಾತನಾಡಿದರು. ಈ ಸಂದರ್ಭದಲ್ಲಿ ಡಾ.ಸಿದ್ಧರಾಮ ಸ್ವಾಮಿಜಿ ಅವರನ್ನು ಸನ್ಮಾನಿಸಲಾಯಿತು. ಜತೆಗೆ ಪ್ರತಿವರ್ಷ ನಡೆಯುವ ಜಾತ್ರೆಮಹೋತ್ಸವದಲ್ಲಿ ಶ್ರಮಿಸುವವರನ್ನು ಮತ್ತು ಸೇವೆಯಿಂದ ನಿವೃತ್ತರಾದ ಹಿರಿಂುರನ್ನು ಗೌರವಿಸಲಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಚ್. ಗಂಗರೆಡ್ಡಿ, ಸದಸ್ಯ ಎನ್.ಎಲ್.ನಾವಲಗಟ್ಟಿ ಮೊದಲಾದವರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.