ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಳಗಾವಿ

12 ದಿನ ವಿದ್ಯುತ್ ವ್ಯತ್ಯಯ

Parashurama
Updated On : 17 Mar 2013, 12:39 pm

ನಿಪ್ಪಾಣಿ: ಸ್ಥಳೀಯ ಸಮಾಧಿಮಠದ ಹತ್ತಿರವಿರುವ 110 ಕೆ.ವ್ಹಿ ಕೇಂದ್ರದಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಸುಮಾರು 10 ರಿಂದ 12 ದಿನಗಳ ವರೆಗೆ ಶೆಂಡೂರ, ಗೊಂದಿಕೊಪ್ಪಿ, ಬುದಲಮುಖ, ಪಾಂಗೀರೆ ಬಿ, ಶಿರಗುಪ್ಪಿ,ಯರನಾಳ, ಗವಾನಿ, ಅಮ್ಮಲಜೆರಿ, ವಾಳಕಿ, ಪಟ್ಟಣಕುಡಿ, ಪೀರವಾಡಿ ರಾಮಪೂರ, ಚಿಕ್ಕಲವಾಳ, ಲಖನಾಪೂರ, ಅಕ್ಕೋಳ, ಪಡಲಿಹಾಳ, ಶಿರ್ಫೆವಾಡಿ, ಜತ್ರಾಟ, ನಾಗನೂರ, ಯಮಗರಣಿ, ಬೂದಿಹಾಳ, ಗಾಯಕನವಾಡಿ ಮತ್ತು  ಅಪ್ಪಾಚಿವಾಡಿ ಗ್ರಾಮಗಳಲ್ಲಿ ಮುಂದಿನ ಕೆಲವು ದಿನಗಳವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ  ಗ್ರಾಮಗಳ ಗ್ರಾಮಸ್ಥರು ಸಹಕರಿಸಬೇಕೆಂದು ಸ್ಥಳೀಯ ಹೆಸ್ಕಾಂನ ಸಹಾಯಕ ಕಾರ್ಯಕಾರಿ ಅಭಿಯಂತರ ಸಿ. ಎಸ್. ಮಠಪತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಇಂದು ಮಾತೆ ಮಹಾದೇವಿ ವರ್ಧಂತ್ಯುತ್ಸವ
ಬೆಳಗಾವಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜಿಲ್ಲಾ ಲಿಂಗಾಯಿತ ಧರ್ಮ ಮಹಾಸಭಾ, ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣ, ರಾಷ್ಟ್ರೀಯ ಬಸವ ದಳ, ಗಣಾಚಾರ ದಳ ಮತ್ತು ವಚನ ಚಿಂತನಾ ವೇದಿಕೆ ವತಿಯಿಂದ ಮಾತೆ ಮಹಾದೇವಿ ಅವರ 68ನೇ ವರ್ಧಂತ್ಯುತ್ಸವ ಕಾರ್ಯಕ್ರಮ ಮಾ.17ರಂದು ಬೆಳಗ್ಗೆ 11 ಗಂಟೆಗೆ ನಗರದ ಗೋಕಾಕ ರಸ್ತೆಯ ಗುರು ಬಸವ ಮಂಟಪದಲ್ಲಿ ನಡೆಯಲಿದೆ.
ಗುರು ಬಸವ ಮಂಟಪದ ಸಂಚಾಲಕಿ ಸರೋಜಿನಿ ಅಲ್ಲಯ್ಯನವರಮಠ ಸಾನ್ನಿಧ್ಯ ವಹಿಸುವರು. ಅತಿಥಿಯಾಗಿ ಶರಣೆ ಶಾಲಿನಿ ಚಿನಿವಾರ ಆಗಮಿಸುವರು. ಶರಣೆ ಪ್ರೇಮಾ ಗುಡಸ ಅಧ್ಯಕ್ಷತೆ ವಹಿಸುವರು ಎಂದು ಕ್ರಾಂತಿ ಗಂಗೋತ್ರಿ ಅಕ್ಕನಾಗಲಂಬಿಕಾ ಮಹಿಳಾ ಗಣದ ಸಂಚಾಲಕಿ ನೀಲಗಂಗಾ ಪಾಟೀಲ ತಿಳಿಸಿದ್ದಾರೆ.
ಇಂದು ಜಿಪಂ ಅಧಿಕಾರಿಗಳ ಸಮಾವೇಶ
ಬೆಳಗಾವಿ: ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಸಮಾವೇಶ ಮಾ.17 ರಂದು ಬೆಳಗ್ಗೆ 10 ಗಂಟೆಗೆ ನಗರದ ರಾಮದೇವ ಹೋಟೆಲ್ ಬಳಿಯ ದಿ ಇನ್‌ಸ್ಟಿಟ್ಯುಟ್ ಆಫ್ ಎಂಜಿನಿಯರಿಂಗ್ ಭವನದಲ್ಲಿ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತಾ ಕಲ್ಲೋಳಿಕರ ಉದ್ಘಾಟಿಸುವರು. ಜಿಪಂ ಸಿಇಒ ವಿ. ಶಂಕರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಿಲ್ಲಾಧಿಕಾರಿ ಎನ್. ಜಯರಾಂ, ಜಿಪಂ ಉಪಾಧ್ಯಕ್ಷೆ ಉಷಾ ಶಿಂತ್ರಿ, ಎಸ್ಪಿ ಸಂದೀಪ ಪಾಟೀಲ, ಪಾಲಿಕೆ ಆಯುಕ್ತೆ ಪ್ರಿಯಾಂಕಾ ಫ್ರಾನ್ಸಿಸ್, ಜಿಪಂ ಆಡಳಿತ ವಿಭಾಗದ ಉಪಕಾರ್ಯದರ್ಶಿ ಆರ್.ಜಿ. ನಾಯಕ ಮೊದಲಾದವರು ಆಗಮಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments