ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮತದಾರರಿಗೆ ಆಮಿಷ: ಸುರೇಶ್‌ಬಾಬು ವಿರುದ್ಧ ದೂರು

Srinivasa Murthy VN
Updated On : 30 Apr 2013, 11:55 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 29
ಮತದಾರರನ್ನು ಸೆಳೆಯಲು ವಿವಿಧ ಆಮಿಷಗಳನ್ನು ಒಡ್ಡುತ್ತಿರುವ ಬಿಎಸ್‌ಆರ್ ಅಭ್ಯರ್ಥಿ ಟಿ.ಎಚ್. ಸುರೇಶ್‌ಬಾಬು ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ ಅಭ್ಯರ್ಥಿ ವಿ.ಎಸ್. ಶಿವಶಂಕರ್ ಸೋಮವಾರ ಸಂಜೆ ಎಂಸಿಸಿ ತಂಡದ ಸದಸ್ಯ ತಹಸೀಲ್ದಾರ್ ಕೆ. ಬಾಲಪ್ಪ ಅವರಿಗೆ ದೂರು ನೀಡಿದ್ದಾರೆ.
ಬಿಎಸ್‌ಆರ್ ಅಭ್ಯರ್ಥಿ ಟಿ.ಎಚ್. ಸುರೇಶಬಾಬು ಅವರು ತಮ್ಮ ಚಿತ್ರವಿರುವ ಮತ್ತು ಪಕ್ಷದ ಚಿಹ್ನೆ ಇರುವ ಒಟ್ಟೂ ರು. 1 ಕೋಟಿ ಬೆಲೆ ಬಾಳುವ ಬೀಸಣಿಕೆ, ಕೀ ಚೈನ್, ಕೈಕಡಗ ಹಾಗೂ ಬ್ಯಾಜ್‌ಗಳನ್ನು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಕ್ಷೇತ್ರದ ಜನರಿಗೆ ವಿತರಿಸುತ್ತಿದ್ದಾರೆ. ಈ ಎಲ್ಲ ವೆಚ್ಚವನ್ನು ಅವರ ಖಾತೆಗೆ ಹಾಕಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾಧಿಕಾರಿಗೆ ಲಿಖಿತ ದೂರು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಶಂಕರ್, ಈಗಾಗಲೇ ಇಡೀ ಕ್ಷೇತ್ರದಲ್ಲಿ ಅಂದಾಜು ರು. 2 ಲಕ್ಷ ಬೀಸಣಿಕೆಗಳು, ಅಂದಾಜು 2 ಲಕ್ಷ ಮುಂಗೈ ಕಡಗಗಳು, ಅಂದಾಜು 2 ಲಕ್ಷ ಕೀ ಚೈನ್‌ಗಳನ್ನು ವಿತರಿಸಲಾಗಿದೆ. ಒಟ್ಟು ಸುಮಾರು ರು. 1 ಕೋಟಿ ಬೆಲೆಯ ವಸ್ತುಗಳನ್ನು ಅಕ್ರಮವಾಗಿ ವಿತರಿಸಲಾಗಿದೆ. ಚಿಕ್ಕಜಾಯಿಗನೂರು ಗ್ರಾಮದಲ್ಲಿ ಬೀಸಣಿಕೆ, ಎಮ್ಮಿಗನೂರು ಗ್ರಾಮದಲ್ಲಿ ಮುಂಗೈ ಕಡಗ, ಕಂಪ್ಲಿಯಲ್ಲಿ ಕೀ ಚೈನ್ ಸಿಕ್ಕಿವೆ. ಇದೇ ರೀತಿಯಲ್ಲಿ ಕ್ಷೇತ್ರದ ಜನತೆಗೆ ಅನೇಕ ಅಕ್ರಮ ವಸ್ತುಗಳ ಸಾಗಣೆಯಾಗುತ್ತಿವೆ. ಸುರೇಶಬಾಬು ಹಿಂದೆ ವಿಶೇಷ ನಿಗಾ ಘಟಕ ಇರುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಸಿಪಿಐ ಬಂಡಿ ಬಸವರಾಜ್, ಜಗನ್ನಾಥ್, ವಿಶ್ವನಾಥಸ್ವಾಮಿ, ಶಂಕ್ರಪ್ಪ, ಹೊನ್ನೂರ್‌ಸಾಬ್, ಎಚ್. ತಿಪ್ಪಯ್ಯ, ಎಚ್.ಬಿ. ಓಬಳೇಶ, ಎಸ್.ಪಿ. ಮಹ್ಮದ್‌ಖಾನ್, ಸಿಪಿಐ(ಎಂ) ಚುನಾವಣಾ ಏಜೆಂಟ್ ಹುಳ್ಳಿ ಉಮೇಶ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement